* ವಿಂಡೀಸ್‌, ಬಾಂಗ್ಲಾದೇಶ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟ* ಸೀಮಿತ ಓವರ್‌ಗಳ ಸರಣಿಯಾಡಲು ವಿದೇಶಿ ಪ್ರವಾಸ ಕೈಗೊಳ್ಳಲಿದೆ ಫಿಂಚ್ ಪಡೆ* ವಿಂಡೀಸ್ ಎದುರು 5 ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಡಲಿದೆ ಆಸ್ಟ್ರೇಲಿಯಾ

ಅಡಿಲೇಡ್(ಜೂ.16): ಮುಂಬರುವ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ವಿರುದ್ದದ ಸೀಮಿತ ಓವರ್‌ಗಳ ಸರಣಿಗೆ 18 ಆಟಗಾರರನ್ನೊಳಗೊಂಡ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ನಿರೀಕ್ಷೆಯಂತೆಯೇ ಹಲವು ತಾರಾ ಆಟಗಾರರು ಗೈರಾಗಿದ್ದಾರೆ.

ಗ್ಲೆನ್ ಮ್ಯಾಕ್ಸ್‌ವೆಲ್‌, ಜೇ ರಿಚರ್ಡ್‌ಸನ್‌, ಕೇನ್ ರಿಚರ್ಡ್‌ಸನ್‌, ಡೇನಿಯಲ್ ಸ್ಯಾಮ್ಸ್, ಮಾರ್ಕಸ್ ಸ್ಟೋನಿಸ್, ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್‌ ವಿವಿಧ ಕಾರಣ ನೀಡಿ ಮುಂಬರುವ ಈ ಎರಡು ವಿದೇಶಿ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸಬೇಡಿ ಆಸ್ಟ್ರೇಲಿಯಾ ಆಯ್ಕೆ ಸಮಿತಿಯ ಮುಂದೆ ಮನವಿ ಮಾಡಿಕೊಂಡಿದ್ದರು. 

ಇನ್ನು ಮತ್ತೋರ್ವ ಅನುಭವಿ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ 14ನೇ ಆವೃತ್ತಿಯ ಐಪಿಎಲ್ ವೇಳೆ ಮೊಣಕೈ ನೋವಿಗೆ ಒಳಗಾಗಿದ್ದರು. ಹೀಗಾಗಿ ಸ್ಮಿತ್‌ಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾದ ಈ ಎರಡು ವಿದೇಶಿ ಪ್ರವಾಸಗಳು ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ದೃಷ್ಠಿಯಿಂದ ಸಾಕಷ್ಟು ಮಹತ್ವದ್ದಾಗಿವೆ.

Scroll to load tweet…

ಟೀಂ ಇಂಡಿಯಾದಂತೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಕಟ್ಟಬೇಕಿದೆ: ಟಿಮ್ ಪೈನ್

ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ತಂಡವು ಜೂನ್‌ 28ರಂದು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ಜುಲೈ 09ರಿಂದ ವೆಸ್ಟ್ ಇಂಡೀಸ್ ಎದುರು 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಇದಾದ ಬಳಿಕ ಜುಲೈ 20ರಿಂದ ಕೆರಿಬಿಯನ್ನರ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಇದಾದ ಬಳಿಕ ವೇಳಾಪಟ್ಟಿ ಇನ್ನೂ ನಿಗದಿಯಾಗದ ಬಾಂಗ್ಲಾದೇಶ ಎದುರು ಬಾಂಗ್ಲಾದಲ್ಲೇ ಆಸ್ಟ್ರೇಲಿಯಾ ತಂಡವು 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ.

ವಿಂಡೀಸ್‌ ಮತ್ತು ಬಾಂಗ್ಲಾದೇಶ ಪ್ರವಾಸಕ್ಕೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಆ್ಯರೋನ್ ಫಿಂಚ್‌(ನಾಯಕ), ಆಸ್ಟನ್ ಏಗರ್, ವೆಸ್ ಏಗರ್, ಜೇಸನ್ ಬೆಹ್ರನ್‌ಡ್ರೊಪ್‌, ಅಲೆಕ್ಸ್ ಕ್ಯಾರಿ, ಡೇನಿಯಲ್ ಕ್ರಿಶ್ಚಿಯನ್, ಜೋಸ್ ಹೇಜಲ್‌ವುಡ್, ಮೊಯ್ಸಿಸ್ ಹೆನ್ರಿಕೇಸ್, ಮಿಚೆಲ್ ಮಾರ್ಶ್‌, ಬೆನ್‌ ಮೆಕ್‌ಡರ್ಮೊಟ್, ರೀಲೆ ಮೆರಿಡಿತ್, ಜೋಸ್ ಫಿಲಿಪ್ಪಿ, ಮಿಚಿಲ್‌ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್‌, ಆಸ್ಟನ್‌ ಟರ್ನರ್, ಆ್ಯಂಡ್ರ್ಯೂ ಟೈ, ಮ್ಯಾಥ್ಯೂ ವೇಡ್, ಆ್ಯಡಂ ಜಂಪಾ.