Asianet Suvarna News Asianet Suvarna News

T20 ‌World Cup ಗೆಲುವಿನ ನೀರಿಕ್ಷೆಯಲ್ಲಿದ್ದೇವೆ : ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್

-T20 World Cup ಗೆಲ್ಲಲು ಸಿದ್ದರಾಗಿದ್ದೇವೆ :  ಆಸ್ಟ್ರೇಲಿಯಾ ವೇಗಿ ಸ್ಟಾರ್ಕ್‌
-ಈ ವರ್ಷದಲ್ಲಿ ಚುಟುಕು ಪಂದ್ಯಾವಳಿಗಳಲ್ಲಿ  ನಮ್ಮ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು
-ಐಪಿಎಲ್‌ನಿಂದ ಹಿಂತಿರುಗಿರುವ ನಮ್ಮ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ.

Australia is set out to win T20 world cup says starc
Author
Bengaluru, First Published Oct 17, 2021, 1:08 PM IST

ಯುಎಇ (ಆ.17): ಬಹುನೀರಿಕ್ಷಿತ ಐಸಿಸಿ T20 ವಿಶ್ವಕಪ್‌ಗೆ (ICC T20 World Cup) ಕ್ಷಣಗಣನೆ ಆರಂಭವಾಗಿದ್ದು ಅಕ್ಟೋಬರ್ 17ರಿಂದ ಚುಟುಕು ಕ್ರಿಕೆಟ್ (Cricket) ಮಹಾ ಸಂಗ್ರಾಮಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಭಾರತದಲ್ಲಿ ನಡೆಯಬೇಕಿದ್ದ ಪಂದ್ಯಾವಳಿಗಳು ಕೋವಿಡ್‌ 19 (Covid 19) ಹಿನ್ನೆಲೆಯಲ್ಲಿ ಯುಎಇ (UAE) ಮತ್ತು ಓಮನ್‌ನಲ್ಲಿ (Oman) ಆಯೋಜನೆಗೊಂಡಿವೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಓಮನ್‌ ತಂಡವು ಪಪುವಾ ನ್ಯೂಗಿನಿಯಾವನ್ನು (Papua New Guinea) ಎದುರಿಸಲಿದೆ. ಈ ಮಧ್ಯೆ ಆಸ್ಟ್ರೇಲಿಯಾ ವೇಗದ ಬೌಲರ್ ಸ್ಟಾರ್ಕ್‌ ಆಸ್ಟ್ರೇಲಿಯಾ ತಂಡವು ವಿಶ್ವಕಪ್ ಗೆಲ್ಲಲು ಸಿದ್ಧವಾಗಿದೆ ಎಂದು ಹೇಳಿದ್ದಾರೆ.

IPL 2021 ಮುಗಿದ ಬೆನ್ನಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಗಂಗೂಲಿ!

ವಿಶ್ವಕಪ್ ಗೆಲುವಿನ ನೀರಿಕ್ಷೆಯಲ್ಲಿದ್ದೇವೆ : ಸ್ಟಾರ್ಕ್

ಐಪಿಎಲ್‌ (IPL)  ಪಂದ್ಯಾವಳಿಗಳಲ್ಲಿ ಆಟವಾಡಿರುವ ನಮ್ಮ ಆಟಗಾರರು ಉತ್ತಮ ಫಾರ್ಮ್‌ನೊಂದಿಗೆ (Form) ಮರಳಿದ್ದಾರೆ.  ಹಾಗಾಗಿ ನಮ್ಮ ತಂಡ ವಿಶ್ವಕಪ್‌ ಗೆಲ್ಲುವ ನೀರಿಕ್ಷೆಯಲ್ಲಿದೆ. 2020ರ ಆರಂಭದಿಂದ  ಆಸ್ಟ್ರೇಲಿಯಾ (Australia) 24 T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 16 ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಕಳೆದ ಮೂರು ವರ್ಷಗಳಲ್ಲಿ, ಆಸ್ಟ್ರೇಲಿಯಾ ತನ್ನ ಸಂಪೂರ್ಣ T20 ತಂಡದೊಂದಿಗೆ ಪಂದ್ಯಾವಳಿಗಳನ್ನು ಆಡಿಲ್ಲ. ಹಾಗಾಗಿ ತಂಡದ ಕಳಪೆ ಪ್ರದರ್ಶನಕ್ಕೆ ಇದುವೇ ಕಾರಣ ಎಂದು ಸ್ಟಾರ್ಕ್‌ ಹೇಳಿದ್ದಾರೆ. 

T20 World Cup ಟೂರ್ನಿಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ..!

ಈಗ ನಮ್ಮ T20 ತಂಡದ ಎಲ್ಲ ಆಟಗಾರರು ಲಭ್ಯವಿದ್ದು, ನಮ್ಮ ನಿಜವಾದ ಸಾಮರ್ಥ್ಯವನ್ನು ತೋರಿಸಲಿದ್ದೇವೆ. ವಿಶ್ವಕಪ್‌ ಗೆಲ್ಲಲು ಸಜ್ಜಾಗಿ ನಿಂತಿದ್ದೇವೆ. ವಿಶ್ವಕಪ್‌ಗಿಂತ ಕಡಿಮೆಯದ್ದು ಏನು ಬೇಡ ಎಂದು ಸ್ಟಾರ್ಕ್‌ ಹೇಳಿದ್ದಾರೆ. ವೆಸ್ಟ್‌ ಇಂಡೀಸ್ (West indies) ಮತ್ತು ಬಾಂಗ್ಲಾದೇಶ (Bangladesh) ಪ್ರವಾಸದಲ್ಲಿ 10 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಷ್ಟೇ ಗೆದ್ದಿದ್ದೇವೆ.‌ ಈ ವರ್ಷದಲ್ಲಿ ಚುಟುಕು ಪಂದ್ಯಾವಳಿಗಳಲ್ಲಿ  ನಮ್ಮ ಪ್ರದರ್ಶನ ಅತ್ಯಂತ ಕಳಪೆಯಾಗಿತ್ತು. ಅನುಭವ ಇಲ್ಲದ ಯುವ ಆಟಗಾರರೇ ತಂಡದಲ್ಲಿದ್ದಿದ್ದರಿಂದ ಈ ರೀತಿಯಾಗಿದೆ ಎಂದು ಸ್ಟಾರ್ಕ್‌ ವಿವರಿಸಿದ್ದಾರೆ. 

ಇಂದಿನಿಂದ ಐಸಿಸಿ ಟಿ20 ವಿಶ್ವಕಪ್‌ ಆರಂಭ!

ಟಿ20 ವಿಶ್ವಕಪ್‌ ಪಂದ್ಯಾವಳಿಗಳು ಇಂದಿನಿಂದ ಆರಂಭವಾಗಲಿವೆ. ವಿಶ್ವಕಪ್‌ನಲ್ಲಿ ಒಟ್ಟು 16 ತಂಡಗಳು ಭಾಗವಹಿಸುತ್ತಿದ್ದು ಫೈನಲ್‌ ಸೇರಿಸಿ ಟೂರ್ನಿಯಲ್ಲಿ ಒಟ್ಟು  45 ಪಂದ್ಯಗಳಿರಲಿವೆ. ಮೊದಲ ಹಂತದಲ್ಲಿ ಅರ್ಹತಾ ಪಂದ್ಯಗಳಿದ್ದು 8 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಸುತ್ತಿನ ಗುಂಪು ಬಿ (Group B) ತಂಡದ ಪಂದ್ಯಗಳು ಭಾನುವಾರ (ಅ. 17) ಆರಂಭವಾಗಲಿದ್ದು ಗುಂಪು ಎ (Group A) ಪಂದ್ಯಗಳು ಸೋಮವಾರ ಆರಂಭವಾಗಲಿವೆ (ಅ. 18). ಎ ಗುಂಪಿನಲ್ಲಿ ಶ್ರೀಲಂಕಾ(Sri Lanka), ಐರ್ಲೆಂಡ್‌(Ireland), ನೆದರ್ಲ್ಯಾಂಡ್ಸ್‌ (Netherlands) ಮತ್ತು ನಮೀಬಿಯಾ(Namibia) ತಂಡಗಳಿದ್ದು ಬಿ ಗುಂಪಿನಲ್ಲಿ ಬಾಂಗ್ಲಾದೇಶ(Bangaladesh), ಸ್ಕಾಟ್‌ಲ್ಯಾಂಡ್(Scotland), ಪಪುವಾ ನ್ಯೂಗಿನಿಯಾ(Papua New Guinea) ಮತ್ತು ಓಮನ್‌(Oman) ತಂಡಗಳಿವೆ. ಮೊದಲ ಸುತ್ತಿನಲ್ಲಿ ಒಟ್ಟು 12 ಪಂದ್ಯಗಳು ನಡೆಯಲಿವೆ. 

Quarantineನಲ್ಲಿ ಕೊಹ್ಲಿ, ದೂರದಿಂದಲೇ ಫೋಟೋ ಕ್ಲಿಕ್ಕಿಸಿ ಪ್ರೀತಿ ತೋರಿದ ಅನುಷ್ಕಾ!

T20 ವಿಶ್ವಕಪ್‌ ನ ಪ್ರಧಾನ ಸುತ್ತಿಗೆ ಈಗಾಗಲೇ ಭಾರತ ಸೇರಿದಂತೆ ಪಾಕಿಸ್ತಾನ, ನ್ಯೂಜಿಲೆಂಡ್‌, ಅಫ್ಘಾನಿಸ್ತಾನ್‌, ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್‌ ಇಂಡೀಸ್‌ ನೇರ ಪ್ರವೇಶ ಗಿಟ್ಟಿಸಿವೆ. ಗುಂಪು ಎ ಮತ್ತು ಗುಂಪು ಬಿ ದಲ್ಲಿನ ಅಗ್ರ 2 ತಂಡಗಳು ಸೂಪರ್‌ 12 ಹಂತಕ್ಕೆ ಪ್ರವೇಶಿಸಲಿವೆ.  ಸೂಪರ್‌ 12 ರ ಗುಂಪು 1(Group 1) ತಂಡಗಳ ಪಂದ್ಯಗಳು ಶನಿವಾರ (ಅ. 23)  ಮತ್ತು ಗುಂಪು 2(Group 2) ತಂಡಗಳ ಪಂದ್ಯಗಳು ರವಿವಾರ (ಅ. 24) ದಂದು ಆರಂಭವಾಗಲಿವೆ. ಅಕ್ಟೋಬರ್‌ 24 ರಂದು ಗುಂಪು 2 ಪಂದ್ಯಾವಳಿಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಟೂರ್ನಿಯ ಮೊದಲನೇ ಸೆಮಿಫೈನಲ್‌ ಪಂದ್ಯಾವಳಿ ನವೆಂಬರ್‌ 10,  ಬುಧವಾರದಂದು  ಸಂಜೆ 7:30 ಕ್ಕೆ ಹಾಗೂ ಎರಡನೆ ಸೆಮಿಫೈನಲ್‌ ಪಂದ್ಯಾವಳಿ ನವೆಂವರ್‌ 11, ಗುರುವಾರದಂದು ಸಂಜೆ 7:30ಕ್ಕೆ ನಡೆಯಲಿದ. ಟಿ-20 ವಿಶ್ವಕಪ್‌ನ ಫೈನಲ್‌  ಹಣಾಹಣಿ 14 ನವೆಂಬರ್‌, ರವಿವಾರದಂದು  7:30 ಕ್ಕೆ ದುಬೈನಲ್ಲಿ ನಡೆಯಲಿದೆ.

Follow Us:
Download App:
  • android
  • ios