Asianet Suvarna News Asianet Suvarna News

T20 World Cup: Aus vs Pak‌ ರೋಚಕ ಪಂದ್ಯದಲ್ಲಿ ಪಾಕ್ ಮಣಿಸಿ ಫೈನಲ್‌ ತಲುಪಿದ ಆಸ್ಟ್ರೇಲಿಯಾ!

*ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕ್‌-ಆಸೀಸ್ ಕಾದಾಟ
*ಟಾಸ್‌ ಗೆದ್ದ ಫಿಂಚ್ ಪಡೆ : ಬೌಲಿಂಗ್ ಆಯ್ಕೆ‌ 
*ಪಾಕಿಸ್ತಾನ ನೀಡಿದ್ದ 177 ರನ್‌ ಬೆನ್ನತ್ತಿದ್ದ ಆಸೀಸ್
*ಪಾಕಿಸ್ತಾನ ವಿರುದ್ದ ಆಸ್ಟ್ರೇಲಿಯಾ‌ 5 ವಿಕೆಟ್‌ಗಳ ಗೆಲುವು

Australia enters final of ICC T20 World Cup after win against Pakistan by   wickets  in 44th match in Dubai mnj
Author
Bengaluru, First Published Nov 11, 2021, 11:14 PM IST

ದುಬೈ(ನ.11):  ಪಾಕಿಸ್ತಾನ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಅಸ್ಟ್ರೇಲಿಯಾ ಟಿ20 ವಿಶ್ವಕಪ್‌ನ ಫೈನಲ್‌ ತಲುಪಿದೆ.  ಇಂಗ್ಲೆಂಡ್‌ ಮಣಿಸಿ ಚೊಚ್ಚಲ ಬಾರಿಗೆ ಫೈನಲ್‌ ತಲುಪಿರುವ ನ್ಯೂಜಿಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ಸೆಣಸಲಿದೆ. ನವೆಂಬರ್‌ 14 ಭಾನುವಾರದಂದು ದುಬೈ ಅಂತಾರಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ

‌ವಿಶ್ವಕಪ್‌ನ 44ನೇ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 177 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ  ಮೊದಲ ವೋವರ್‌ನಲ್ಲೇ ಅಘಾತಕ್ಕೊಳಗಾದರೂ ನಂತರ ಚೇತರಿಸಿಕೊಂಡ ಆಸೀಸ್ ಪಾಕಿಸ್ತಾನದ ವಿರುದ್ದ 5‌  ವಿಕೆಟ್‌  ಜಯ ಸಾಧಿಸಿದೆ. ಪಾಕಿಸ್ತಾನ ನೀಡಿದ 177 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಮೊದಲ ಓವರನಲ್ಲೇ ವಿಕೆಟ್‌ ಕಳೆದುಕೊಳ್ಳುವ ಮೂಲಕ ಆಘಾತಕ್ಕೊಳಗಾಯಿತು. ತಮ್ಮ ಮೂರನೇ ಎಸತೆದಲ್ಲೇ ಶಾಹಿನ್‌ ಆಫ್ರಿದಿ ಆಸ್ಟ್ರೇಲಿಯಾ ನಾಯಕ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಆರನ್‌ ಫಿಂಚ್ ವಿಕೆಟ್‌ ಪಡೆದುಕೊಂಡರು. ಹಾಗಾಗಿ ಫಿಂಚ್  ಡಕೌಟ್‌ ಆದರು. ನಂತರ ಕಣಕ್ಕಿಲಿದ ,  ಮಿಚೆಲ್ ಮಾರ್ಷ್‌, ಆರಂಭಿಕ ಬ್ಯಾಟ್ಸಮನ್ ಡೆವಿಡ್‌ ವಾರ್ನರ್‌ಗೆ ಉತ್ತಮ ಜತೆಯಾಟ ನೀಡಿದರು. ಆಸ್ಟ್ರೇಲಿಯಾ ಪವರ್‌ ಪ್ಲೇ ಅಂತ್ಯಕ್ಕೆ 1 ವಿಕೆಟ್‌ ಕಳೆದುಕೊಂಡು 52 ರನ್‌ ಗಳಿಸಿತು.

T20 World Cup: 2022ರ ಟಿ20 ವಿಶ್ವಕಪ್ ಆಡುತ್ತೇನೆಂದ ಇಯಾನ್ ಮಾರ್ಗನ್‌..! 

ಅರ್ಧಶತಕದ ಜತೆಯಾಟ ಅಡುತ್ತಿದ್ದ ವಾರ್ನರ್‌ ಹಾಗೂ ಮಿಚೆಲ್ ಜೋಡಿಗೆ 7ನೇ ಓವರ್‌ನಲ್ಲಿ ಪಾಕಿಸ್ತಾನ ಬ್ರೇಕ್‌ ಹಾಕಿತು. ಮಿಚೆಲ್  22 ಎಸೆತಗಳಲ್ಲಿ 28 ರನ್‌ ಸಿಡಿಸಿ ಶಾದಾಬ್ ಖಾನ್‌ಗೆ ವಿಕೆಟ್‌ ಒಪ್ಪಿಸಿದರು. ನಂತರ ಕಣಕ್ಕಿಲಿದ  ಸ್ಟೀವನ್ ಸ್ಮಿತ್ ಕೇವಲ 5 ರನ್‌ಗಳಿಸಲಷ್ಟೇ ಸಫಲರಾದರು. 10ನೇ ಓವರ್‌ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್‌ ಕಳೆದುಕೊಂಡು 89 ರನ್‌ ಗಳಿಸಿತು. ಉತ್ತಮ ಬ್ಯಾಟಿಂಗ್‌ ಮಾಡುತ್ತಿದ್ದ ವಾರ್ನರ್‌ 30 ಎಸೆತಗಳಲ್ಲಿ 40 ರನ್‌ ಸಿಡಿಸಿ ಹತ್ತನೇ ಓವರ್‌ನಲ್ಲಿ ಶಾದಾಬ್‌ ಖಾನೆ ಗೆ ವಿಕೆಟ್‌ ಒಪ್ಪಿಸಿದರು. ಈ ಮೂಲಕ 177ರನ್‌ ಗುರಿ ತಲುಪುವ ಜವಾಬ್ದಾರಿ ಇಬ್ಬರು ಹೊಸ ಬ್ಯಾಟ್ಸ್‌ಮನ್‌ಗಳ ಹೇಗಲೇರಿತು.

13ನೇ ಓವರ್‌ನ 10 ಎಸೆತಗಳಲ್ಲಿ ಕೇವಲ 7 ರನ್‌ ಸಿಡಿಸಿ ಮ್ಯಾಕ್ಸವೆಲ್ ಔಟಾದರು. 14ನೇ ಓವರ್‌ ಅಂತ್ಯಕ್ಕೆ ಆಸೀಸ್‌ಗೆ 36 ಎಸೆತಗಳಲ್ಲಿ 68 ರನ್‌ ಗಳ ಅವಶ್ಯಕತೆ ಇತ್ತು. ಮಾರ್ಕಸ್ ಸ್ಟೋನಿಸ್ ಹಾಗೂ ಮ್ಯಾಥ್ಯೂ ವೇಡ್ 17ನೇ ಓವರ್‌ನಲ್ಲಿ 50ರನ್‌ ಗಳ ಜತೆಯಾಟ ಪೂರೈಸಿದರು.19ನೇ ಓವರನಲ್ಲಿ ನಲ್ಲಿ 22 ರನ್‌ ಅವಶ್ಯಕತೆ ಇದ್ದಾಗ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ವೇಡ್‌  ಆಸ್ಟ್ರೇಲಿಯಾ ತಂಡಕ್ಕೆ ಜಯ ತಂದು ಕೊಟ್ಟರು.

4 ವಿಕೆಟ್‌ ಕಳೆದುಕೊಂಡು  176‌ ರನ್‌ ಗಳಿಸಿದ್ದ ಪಾಕಿಸ್ತಾನ!

7ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಎರಡನೇ ಸೆಮೀಪೈನಲ್‌ ಪಂದ್ಯದಲ್ಲಿ ಟಾಸ್‌ ಗೆಲ್ಲುವ ಮೂಲಕ  ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಆರಂಭಿಕವಾಗಿ ಕಣಕ್ಕಿಲಿದ ಮೊಹಮದ್‌ ರಿಜ್ವಾನ್‌ ಹಾಗೂ ಬಾಬರ್‌ ಅಜಮ್‌ ತಂಡಕ್ಕೆ ಸ್ಫೋಟಕ ಆರಂಭ ನೀಡಿದರು. ಪವರ್‌ ಪ್ಲೇ ಮುಕ್ತಾಯದ ವೇಳೆಗೆ ಪಾಕಿಸ್ತಾನ ಯಾವುದೇ ವಿಕೆಟ್‌ ಕಳೆದುಕೊಳ್ಳದೇ 47 ರನ್‌ ಬಾರಿಸಿತು.

ICC T20 Rankings: 8ನೇ ಸ್ಥಾನಕ್ಕೆ ಜಾರಿದ ವಿರಾಟ್ ಕೊಹ್ಲಿ..!

ಹತ್ತನೇ ಒವರ್‌ ಕೊನೆ ಎಸೆತದಲ್ಲಿ ಬಾಬರ್‌ ಅಜಮ್‌,  ಡೆವಿಡ್‌ ವಾರ್ನರ್‌ಗೆ ಕ್ಯಾಚ್‌ ನೀಡುವ ಮೂಲಕ ವಿಕೆಟ್‌ ಒಪ್ಪಿಸಿದರು. 4 ಬೌಂಡರಿ ಬಾರಿಸಿ 34 ಎಸೆತಗಳಲ್ಲಿ 39 ರನ್‌ ಬಾರಿಸಲು ಬಾಬರ್‌ ಸಫಲರಾದರು. ಹಾಗಾಗಿ 10ನೇ ಓವರ್‌ ಕೊನೆಯಲ್ಲಿ ಪಾಕಿಸ್ತಾನ 1 ವಿಕೆಟ್‌ ಕಳೆದುಕೊಂಡು 71ರನ್‌ ಸಿಡಿಸಿತು. ನಂತರ ಕಣಕ್ಕಿಲಿದ ಫಖರ್ ಜಮಾನ್ ರಿಜ್ವಾನ್‌ಗೆ ಉತ್ತಮ ಜತೆಯಾಟ ನೀಡಿದರು. 14ನೇ ಓವರ ಅಂತ್ಯಕ್ಕೆ ರಿಜ್ವಾನ್‌ 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 19ನೇ ಓವರ್‌ನ ಕೊನೆಯ ಬಾಲ್‌ ನಲ್ಲಿ ಇಕ್ಸ ಸಿಡಿಸುವ ಮೂಲಕ ವೇಡ್‌ ಸಿಕ್ಸರ್‌ ಸಿಡಿಸುವ ಮೂಲಕ ತಂಡಕ್ಕೆ ಜಯ ತಂದು ಕೊಟ್ಟರು.

16ನೇ ಓವರ್‌ನಲ್ಲಿ ರಿಜ್ವಾನ್‌, ಫಖರ್‌ ಜೋಡಿ ಅರ್ಧಶತಕದ ಜತೆಯಾಟ ಪೂರೈಸಿತು. ಆದರೆ 17ನೇ ಎರಡನೇ ಎಸೆತದಲ್ಲಿ ರಿಜ್ವಾನ್‌ ಓಟಕ್ಕೆ ಆಸ್ಟ್ರೇಲಿಯಾ ಬ್ರೇಕ್‌ ಹಾಕಿತು. ರಿಜ್ವಾನ್‌ ತಂಡಕ್ಕೆ 52 ಎಸತೆಗಳಲ್ಲಿ 67 ರನ್‌ ಗಳ ಕೊಡುಗೆ ನೀಡಿದರು.  ನಂತರ ಕಣಕ್ಕಿಲಿದ ಆಸಿಫ್ ಅಲಿ ಯಾವುದೇ ರನ್‌ ಗಳಿಸಿದೆ ಡಕೌಟ್‌ ಆದರು. ನಂತರ ಬಂದ ಶೋಯೆಬ್ ಮಲಿಕ್ ಕೇವಲ 1 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.  ಫಖರ್‌ ಅಜೇಯ 55 ರನ್‌ ಸಿಡಿಸುವುದರ ಮೂಲಕ ಪಾಕಿಸ್ತಾನ 4 ವಿಕೆಟ್‌ ಕಳೆದುಕೊಂಡು  176 ರನ್ ಗಳಿಸಲು ಸಾಧ್ಯವಾಯಿತು.

Follow Us:
Download App:
  • android
  • ios