ಮೆಲ್ಬರ್ನ್(ಜ.31)‌: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ಅಭಿಮಾನಿಗಳ ಬಳಗ ದೊಡ್ಡದಿದೆ. ಈ ಪಟ್ಟಿಯಲ್ಲಿ ಆಸ್ಪ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಮಗಳಾದ ಇಂಡಿ ವಾರ್ನರ್‌ ಕೂಡಾ ಇದ್ದಾರೆ. 

6 ವರ್ಷದ ಇಂಡಿ ವಾರ್ನರ್‌ ಅಭಿಮಾನಕ್ಕೆ ಮನಸೋತಿರುವ ಕೊಹ್ಲಿ, ತಮ್ಮ ಟೆಸ್ಟ್‌ ಜೆರ್ಸಿಯನ್ನು ಸಹಿಯೊಂದಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇಂಡಿ ವಾರ್ನರ್‌ ಈ ಜೆರ್ಸಿಯನ್ನು ತೊಟ್ಟಿರುವ ಫೋಟೋವನ್ನು, ಡೇವಿಡ್‌ ವಾರ್ನರ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಫೋಟೋ ವೈರಲ್‌ ಆಗಿದೆ.

ನಾವು ಟೆಸ್ಟ್ ಸರಣಿ ಸೋತಿದ್ದೇವೆ ಎಂದು ಗೊತ್ತು. ಆದರೆ ನನ್ನ ಮಗಳು ಖುಷಿಯಾಗಿದ್ದಾಳೆ. ನಿಮ್ಮ ಜೆರ್ಸಿಯನ್ನು ನನ್ನ ಮಗಳಿಗೆ ನೀಡಿದ್ದಕ್ಕೆ ಧನ್ಯವಾದಗಳು. ಇಂಡಿ ನಿಮ್ಮ ಜೆರ್ಸಿಯನ್ನು ತುಂಬಾ ಇಷ್ಟಪಟ್ಟಿದ್ದಾಳೆ. ತಂದೆ ಹಾಗೂ ಆರೋನ್‌ ಫಿಂಚ್‌ ಬಳಿಕ ಅವಳು ನಿಮ್ಮ ದೊಡ್ಡ ಅಭಿಮಾನಿ ಎಂದು ಡೇವಿಡ್ ವಾರ್ನರ್‌ ಕ್ಯಾಪ್ಶನ್‌ ನೀಡಿದ್ದಾರೆ. 

ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌: ಜಯ್‌ ಶಾ ಅಧ್ಯಕ್ಷರಾಗಿ ಆಯ್ಕೆ

ಇತ್ತೀಚೆಗಷ್ಟೇ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಮುಕ್ತಾಯವಾಗಿದ್ದು, ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಟೆಸ್ಟ್ ಸರಣಿ ಗೆದ್ದು ಮಿಂಚಿತ್ತು.