ದಕ್ಷಿಣ ಆಫ್ರಿಕಾ ಎದುರಿನ ಎಂಸಿಜಿ ಟೆಸ್ಟ್‌ ವೇಳೆ ಸ್ಟಾರ್ಕ್‌, ಗ್ರೀನ್ ಗಂಭೀರ ಗಾಯಎರಡನೇ ಟೆಸ್ಟ್‌ ವೇಳೆ ಗಾಯಗೊಂಡಿರುವ ಆಸ್ಟ್ರೇಲಿಯಾದ ಪ್ರಮುಖ ಆಟಗಾರರುಬಾರ್ಡರ್-ಗವಾಸ್ಕರ್ ಟೆಸ್ಟ್‌ನಲ್ಲಿ ಈ ಇಬ್ಬರು ಆಟಗಾರರು ಪಾಲ್ಗೊಳ್ಳುವುದು ಅನುಮಾನ

ಮೆಲ್ಬರ್ನ್‌(ಡಿ.30): ಆಸ್ಪ್ರೇಲಿಯಾದ ಆಲ್ರೌಂಡರ್‌ ಕ್ಯಾಮರೂನ್‌ ಗ್ರೀನ್‌ ಹಾಗೂ ವೇಗಿ ಮಿಚೆಲ್‌ ಸ್ಟಾರ್ಕ್ ಭಾರತ ವಿರುದ್ಧ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ 4 ಪಂದ್ಯಗಳ ಟೆಸ್ಟ್‌ ಸರಣಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ ವೇಳೆ ಇಬ್ಬರೂ ಗಾಯಗೊಂಡಿದ್ದು, ಗ್ರೀನ್‌ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. 

ಏನ್ರಿಚ್‌ ನೋಕಿಯರ ಎಸೆತವನ್ನು ಎದುರಿಸುವಾಗ ಕ್ಯಾಮರೋನ್ ಗ್ರೀನ್‌ರ ಬೆರಳಿಗೆ ಚೆಂಡು ಬಡಿದ ಪರಿಣಾಮ, ಬೆರಳು ಮುರಿದಿರುವುದು ಸ್ಕ್ಯಾನ್‌ ಮೂಲಕ ದೃಢಪಟ್ಟಿದೆ. ಮತ್ತೊಂದೆಡೆ ಫೀಲ್ಡಿಂಗ್‌ ವೇಳೆ ಮಿಚೆಲ್ ಸ್ಟಾರ್ಕ್ ಸಹ ಕೈಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಇಬ್ಬರೂ ಕನಿಷ್ಠ 8 ವಾರ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಗಬಹುದು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಟೆಸ್ಟ್‌: ದ.ಆಫ್ರಿಕಾ ವಿರುದ್ಧ ಆಸೀಸ್‌ಗೆ ಇನ್ನಿಂಗ್‌್ಸ ಜಯ

ಮೆಲ್ಬರ್ನ್‌: ದ.ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ಆತಿಥೇಯ ಆಸ್ಪ್ರೇಲಿಯಾ ಇನ್ನಿಂಗ್‌್ಸ ಹಾಗೂ 182 ರನ್‌ ಭರ್ಜರಿ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಇದು 2005-06ರ ಬಳಿಕ ದ.ಆಫ್ರಿಕಾ ವಿರುದ್ಧ ತವರಿನಲ್ಲಿ ಆಸೀಸ್‌ಗೆ ಒಲಿದ ಮೊದಲ ಟೆಸ್ಟ್‌ ಸರಣಿ ಗೆಲುವು. 

ಮುಗಿಯಿತಾ ಟೀಂ ಇಂಡಿಯಾದ ಈ ಆರು ಕ್ರಿಕೆಟಿಗರ ಟಿ20 ಕ್ರಿಕೆಟ್ ಬದುಕು..?

386 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ್ದ ದ.ಆಫ್ರಿಕಾ ಗುರುವಾರ 204 ರನ್‌ಗೆ ಸರ್ವಪತನ ಕಂಡಿತು. ಮೊದಲ ಇನ್ನಿಂಗ್‌್ಸನಲ್ಲಿ ದ.ಆಫ್ರಿಕಾವನ್ನು 198ಕ್ಕೆ ನಿಯಂತ್ರಿಸಿದ್ದ ಆಸೀಸ್‌, 8 ವಿಕೆಟ್‌ಗೆ 575 ರನ್‌ ಸಿಡಿಸಿ ಇನ್ನಿಂಗ್‌್ಸ ಡಿಕ್ಲೇರ್‌ ಮಾಡಿಕೊಂಡಿತ್ತು.

ಕೇನ್‌ ದ್ವಿಶತಕ: ಕಿವೀಸ್‌ 612 ರನ್‌ ಬೃಹತ್‌ ಮೊತ್ತ

ಕರಾಚಿ: ಪಾಕಿಸ್ತಾನ-ನ್ಯೂಜಿಲೆಂಡ್‌ ನಡುವಿನ ಮೊದಲ ಟೆಸ್ಟ್‌ ಪಂದ್ಯ ಕುತೂಹಲ ಘಟ್ಟತಲುಪಿದೆ. ಪಾಕ್‌ನ 438 ರನ್‌ಗೆ ಉತ್ತರವಾಗಿ 3ನೇ ದಿನ 6 ವಿಕೆಟ್‌ಗೆ 440 ರನ್‌ ಗಳಿಸಿದ್ದ ಕಿವೀಸ್‌ ಗುರುವಾರ ಕೇನ್‌ ವಿಲಿಯಮ್ಸನ್‌ ದ್ವಿಶತಕದ ನೆರವಿನಿಂದ 9 ವಿಕೆಟ್‌ಗೆ 612 ರನ್‌ ಕಲೆಹಾಕಿ ಇನ್ನಿಂಗ್‌್ಸ ಡಿಕ್ಲೇರ್‌ ಮಾಡಿಕೊಂಡಿತು. 

ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ಗಟ್ಟಿಯಾಗಿ ಕ್ರೀಸ್‌ನಲ್ಲಿ ನೆಲೆಯೂರಿದ ಕೇನ್‌, ಟೆಸ್ಟ್‌ನಲ್ಲಿ 5ನೇ ದ್ವಿಶತಕ ಪೂರ್ತಿಗೊಳಿಸಿದರು. 174 ರನ್‌ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್‌್ಸ ಆರಂಭಿಸಿದ ಪಾಕಿಸ್ತಾನ 4ನೇ ದಿನದಂತ್ಯಕ್ಕೆ 77ಕ್ಕೆ 2 ವಿಕೆಟ್‌ ಕಳೆದುಕೊಂಡಿದ್ದು, ಇನ್ನೂ 97 ರನ್‌ ಹಿನ್ನಡೆಯಲ್ಲಿದೆ.

ಭಾರತ-ಪಾಕಿಸ್ತಾನ ಟೆಸ್ಟ್‌ ಆತಿಥ್ಯಕ್ಕೆ ಮೆಲ್ಬರ್ನ್‌ ಆಸಕ್ತಿ!

ಮೆಲ್ಬರ್ನ್‌: ಸಾಂಪ್ರದಾಯಿಕ ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವೆ ಟೆಸ್ಟ್‌ ಪಂದ್ಯ ಆಯೋಜಿಸಲು ಮೆಲ್ಬರ್ನ್‌ ಕ್ರಿಕೆಟ್‌ ಕ್ಲಬ್‌(ಎಂಸಿಸಿ) ಆಸಕ್ತಿ ತೋರಿದೆ. ಉಭಯ ತಂಡಗಳ ನಡುವೆ ಮೆಲ್ಬರ್ನ್‌ನಲ್ಲಿ ಪಂದ್ಯ ಆಯೋಜನೆ ಸಾಧ್ಯವಿದೆಯೇ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾವನ್ನು ವಿಕ್ಟೋರಿಯಾ ಸರ್ಕಾರ ಹಾಗೂ ಎಂಸಿಸಿ ಕೇಳಿದ್ದು, ಪ್ರತಿಕ್ರಿಯೆಗಾಗಿ ಕಾಯುತ್ತಿದೆ. ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕ್‌ ನಡುವೆ ಮೆಲ್ಬರ್ನ್‌ನಲ್ಲಿ ಪಂದ್ಯ ನಡೆಸದಿದ್ದು, ಬರೋಬ್ಬರಿ 90000 ಮಂದಿ ಕ್ರೀಡಾಂಗಣದಲ್ಲಿ ನೇರವಾಗಿ ಪಂದ್ಯ ವೀಕ್ಷಿಸಿದ್ದರು.

ಆಫ್ಘನ್‌ಗೆ ರಶೀದ್‌ ನಾಯಕ

ಕಾಬೂಲ್‌: 2022ರ ಟಿ20 ವಿಶ್ವಕಪ್‌ ಸೋಲಿನ ಬಳಿಕ ಮೊಹಮದ್‌ ನಬಿ ರಾಜೀನಾಮೆಯಿಂದ ತೆರವುಗೊಂಡಿದ್ದ ಅಷ್ಘಾನಿಸ್ತಾನ ಟಿ20 ತಂಡದ ನಾಯಕ ಸ್ಥಾನಕ್ಕೆ ಆಲ್ರೌಂಡರ್‌ ರಶೀದ್‌ ಖಾನ್‌ ಮರುನೇಮಕಗೊಂಡಿದ್ದಾರೆ. 

ಈ ಮೊದಲು ರಶೀದ್‌ ಖಾನ್‌ 2019ರಲ್ಲಿ ಕೆಲ ಕಾಲ ತಂಡಕ್ಕೆ ಎಲ್ಲಾ ಮಾದರಿಯಲ್ಲಿ ನಾಯಕನಾಗಿ ಕಾರ‍್ಯನಿರ್ವಹಿಸಿದ್ದು, ಅವರ ನಾಯಕತ್ವದಲ್ಲಿ 7 ಟಿ20 ಪಂದ್ಯಗಳಲ್ಲಿ 4ರಲ್ಲಿ ಅಷ್ಘಾನಿಸ್ತಾನ ಗೆಲುವು ಸಾಧಿಸಿತ್ತು. ಬಳಿಕ 2021ರ ಟಿ20 ವಿಶ್ವಕಪ್‌ಗೆ ನಾಯಕನಾಗಿ ನೇಮಿಸಿದ್ದಾಗ ತಮ್ಮನ್ನು ಕೇಳದೆ ತಂಡದ ಆಯ್ಕೆ ನಡೆಸದ್ದಕ್ಕೆ ಸಿಟ್ಟಾಗಿ ರಶೀದ್‌ ನಾಯಕತ್ವ ತ್ಯಜಿಸಿದ್ದರು.