Asianet Suvarna News Asianet Suvarna News

AUS vs ZIM ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆಗೆ ಐತಿಹಾಸಿಕ ಜಯ, ಬೀದಿ ಬೀದಿಯಲ್ಲಿ ಸಂಭ್ರಮ!

ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಜಿಂಬಾಬ್ವೆ ಮಣಿಸಿದೆ. ಅದು ಕೂಡ ಆಸ್ಟ್ರೇಲಿಯಾ ನೆಲದಲ್ಲಿ. ಈ ಐತಿಹಾಸಿಕ ಗೆಲುವನ್ನು ಜಿಂಬಾಬ್ವೆ ಭರ್ಜರಿಯಾಗಿ ಆಚರಿಸಿದೆ.  ಬೆಳಗ್ಗೆ ಜಿಂಬಾಬ್ವೆ ತಂಡ ಗೆಲುವು ಸಾಧಿಸಿದರೂ, ಸಂಜೆಯಾದರೂ ಸಂಭ್ರಮ ಮುಗಿದಿಲ್ಲ. ಜಿಂಬಾಬ್ವೆ ತಂಡದ ಸೆಲೆಬ್ರೆಷನ್ ವಿಡಿಯೋ ಇಲ್ಲಿದೆ.

AUS vs ZIM Zimbabwe players celebration after historic win against Australia odi ckm
Author
First Published Sep 3, 2022, 6:53 PM IST

ಟೌನ್ಸ್‌ವಿಲ್ಲೆ(ಸೆ.03): ಜಿಂಬಾಬ್ವೆ ಕ್ರಿಕೆಟ್ ಇತಿಹಾಸದಲ್ಲಿಂದು ಐತಿಹಾಸಿಕ ದಿನ. ಕಾರಣ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲೇ ಮಣಿಸಿದ ಸಾಧನೆ. ಸರಣಿ ಕೈಚೆಲ್ಲಿದರೂ ಈ ಒಂದು ಗೆಲುವು ಜಿಂಬಾಬ್ವೆ ತಂಡದ ಆತ್ಮವಿಶ್ವಾಸವನ್ನೇ ಡಬಲ್ ಮಾಡಿದೆ. ಸಂಭ್ರಮ ಮುಗಿಲು ಮುಟ್ಟಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಜಿಂಬಾಬ್ವೆ ತಂಡದ ಪ್ರದರ್ಶನ ಇದೀಗ ವಿಶ್ವದೆಲ್ಲೆಡೆ ಮಾತಾಗಿದೆ. 3 ಪಂದ್ಯಗಳ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆ 3 ವಿಕೆಟ್ ಗೆಲುವು ದಾಖಲಿಸಿದೆ. ಈ ಗೆಲುವನ್ನು ಜಿಂಬಾಬ್ವೆ ತಂಡದ ಆಟಗಾರರು ಭರ್ಜರಿಯಾಗಿ ಸಂಭ್ರಮಿಸಿದ್ದಾರೆ. ಮೈದಾನದಲ್ಲಿ ಅತೀವ ಸಂಭ್ರಮದಿಂದ ಕುಣಿದ ಆಟಗಾರರು, ಬಳಿಕ ಕ್ರೀಡಾಂಗಣದಿಂದ ಹೊಟೆಲ್‌ಗೆ ತೆರಳು ಮಾರ್ಗದಲ್ಲಿ ಬಸ್‌ನಲ್ಲಿ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ. ಹಾಡು, ಡ್ಯಾನ್ಸ್ ಮೂಲಕ ತಮ್ಮ ಐತಿಹಾಸಿಕ ಗೆಲುವನ್ನು ಸ್ಮರಣೀಯವಾಗಿಸಿದ್ದಾರೆ.

3 ಪಂದ್ಯಗಳ ಸರಣಿಯಲ್ಲಿ ಆರಂಭಿಕ 2 ಪಂದ್ಯಗಳನ್ನು ಜಿಂಬಾಬ್ವೆ(Zimbabwe) ಕೈಚೆಲ್ಲಿತು. ಆದರೆ 3ನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ಹೋರಾಟಕ್ಕೆ ಆಸ್ಟ್ರೇಲಿಯಾ(Australia ) ಮಾತ್ರವಲ್ಲ, ಇತರ ಕ್ರಿಕೆಟ್ ತಂಡಗಳು ಬೆಚ್ಚಿ ಬಿದ್ದಿದೆ. ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್(David Warner ಏಕಾಂಗಿ ಹೋರಾಟ ನೀಡಿದರು. ಆದರೆ ರ್ಯಾನ್ ಬರ್ಲ್ ಹಾಗೂ ಜಿಂಬಾಬ್ವೆ ಬೌಲರ್ಸ್ ದಾಳಿಗೆ ಆಸ್ಟ್ರೇಲಿಯಾ ತತ್ತರಿಸಿತು. ವಾರ್ನರ್ ಹೋರಾಟ ಮುಂದುವರಿಸಿದರೆ, ಇತರರು ರನ್ ಗಳಿಸಲು ಪರದಾಡಿದರು. ನಾಯಕ ಆ್ಯರೋನ್ ಫಿಂಚ್, ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೊಯ್ನಿಸ್, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್ ಸೇರಿದಂತೆ ಸ್ಟಾರ್ ಕ್ರಿಕೆಟಿಗರು ಅಬ್ಬರಿಸಲು ವಿಫಲವಾಗಿದ್ದಾರೆ. 

ASIA CUP 2022: ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ವಿಶೇಷ ಮಾಸ್ಕ್ ಧರಿಸಿ ಪ್ರಾಕ್ಟೀಸ್ ಮಾಡಿದ ಕೊಹ್ಲಿ..!

ಆಸ್ಟ್ರೇಲಿಯಾ 31 ಓವರ್‌ಗಳಲ್ಲಿ 141 ರನ್‌ಗಳಿಗೆ ಆಲೌಟ್ ಆಗಿದೆ. ರ್ಯಾನ್ ಬರ್ಲ್ 5 ವಿಕೆಟ್ ಕಬಳಿಸಿ ಮಿಂಚಿದರು.  142 ರನ್ ಟಾರ್ಗೆಟ್ ಪಡೆದ ಜಿಂಬಾಬ್ವೆ(AUS vs ZIM) ಕೂಡ ಕಠಿಣ ಹೋರಾಟ ನಡೆಸಿತು. 37 ಓವರ್‌ಗಳಲ್ಲಿ ಜಿಂಬಾಬ್ವೆ 7 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಜಿಂಬಾಬ್ವೆ ಗೆಲುವು ದಾಖಲಿಸುತ್ತಿದ್ದಂತೆ ಸಂಭ್ರಮ ಮನೆ ಮಾಡಿದೆ. ಮೈದಾನಕ್ಕೆ ಇಳಿದ ಜಿಂಬಾಬ್ವೆ ಆಟಗಾರರು ಭರ್ಜರಿಯಾಗಿ ಸಂಭ್ರಮಿಸಿದ್ದಾರೆ.

 

 

3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಪಂದ್ಯದಲ್ಲಿ 5 ವಿಕೆಟ್  ಗೆಲುವು ದಾಖಲಿಸಿದ್ದರೆ, ಎರಡನೇ ಪಂದ್ಯದಲ್ಲಿ 8 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ ಸರಣಿ ಕೈವಶ ಮಾಡಿಕೊಂಡಿತ್ತು. ಅಂತಿಮ ಪಂದ್ಯ ಗೆದ್ದು ಕ್ಲೀನ್ ಸ್ವೀಪ್ ಗೆಲುವಿನ ಕನಸು ಕಂಡಿತ್ತು. ಆದರೆ ಜಿಂಬಾಬ್ವೆ ಹೋರಾಟಕ್ಕೆ ಆಸ್ಟ್ರೇಲಿಯಾ ಮಕಾಡೆ ಮಲಗಿದೆ. 

ಟಾಮ್‌ ಮೂಡಿ ಔಟ್‌, Sunrisers Hyderabad ತಂಡಕ್ಕೆ ಬ್ರಿಯಾನ್‌ ಲಾರಾ ಕೋಚ್‌!

ಮೈದಾನ, ಬಸ್‌ನಲ್ಲಿ ಕುಣಿದು ಕುಪ್ಪಳಿಸಿದ ಜಿಂಬಾಬ್ವೆ ಆಟಗಾರರು, ಹೊಟೆಲ್‌ಗೆ ಬಂದ ಬಳಿಕ ಭರ್ಜರಿಯಾಗಿ ಸಂಭ್ರಮ ಆಚರಿಸಿದ್ದಾರೆ. ಇದೀಗ ಜಿಂಬಾಬ್ವೆ ಆಟಾಗಾರರ ವಿಡಿಯೋ ವೈರಲ್ ಆಗಿದೆ.
 

Follow Us:
Download App:
  • android
  • ios