ಏಷ್ಯಾಡ್ ಕ್ರಿಕೆಟ್ ಸೆಮೀಸ್‌ಗೆ ಲಗ್ಗೆಯಿಟ್ಟ ಭಾರತ ಮಹಿಳಾ ಕ್ರಿಕೆಟ್ ತಂಡ..!
ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಮಲೇಷ್ಯಾಕ್ಕಿಂತ ಮೇಲಿರುವ ಕಾರಣ ಭಾರತ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯವನ್ನು ತಲಾ 15 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಪೇರಿಸಿತು. ಶಫಾಲಿ ವರ್ಮಾ 39 ಎಸೆತಗಳಲ್ಲಿ 67 ರನ್ ಸಿಡಿಸಿದರೆ, ಸ್ಮೃತಿ ಮಂಧನಾ27, ಜೆಮಿಮಾ ರೋಡ್ರಿಗ್ಸ್ 47 ಹಾಗೂ ರಿಚಾ ಘೋಷ್ 21 ರನ್ ಸಿಡಿಸಿದರು.
ಹಾಂಗ್ಝೂ(ಸೆ.22): 19ನೇ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಇದೀಗ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ನೇರವಾಗಿ ಕ್ವಾರ್ಟರ್ ಫೈನಲ್ ಪಂದ್ಯವನ್ನಾಡಿದ ಭಾರತ ತಂಡಕ್ಕೆ ಗುರುವಾರ ಮಲೇಷ್ಯಾ ಸವಾಲು ಎದುರಾಗಿತ್ತು. ಪಂದ್ಯ ಮಳೆಗೆ ಆಹುತಿಯಾದರೂ, ಭಾರತ ಸೆಮೀಸ್‌ಗೇರಿತು.
ಐಸಿಸಿ ಟಿ20 ಶ್ರೇಯಾಂಕದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಮಲೇಷ್ಯಾಕ್ಕಿಂತ ಮೇಲಿರುವ ಕಾರಣ ಭಾರತ ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯವನ್ನು ತಲಾ 15 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 15 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 173 ರನ್ ಪೇರಿಸಿತು. ಶಫಾಲಿ ವರ್ಮಾ 39 ಎಸೆತಗಳಲ್ಲಿ 67 ರನ್ ಸಿಡಿಸಿದರೆ, ಸ್ಮೃತಿ ಮಂಧನಾ27, ಜೆಮಿಮಾ ರೋಡ್ರಿಗ್ಸ್ 47 ಹಾಗೂ ರಿಚಾ ಘೋಷ್ 21 ರನ್ ಸಿಡಿಸಿದರು. ಮಲೇಷ್ಯಾ ಬ್ಯಾಟಿಂಗ್ ಆರಂಭಿಸಿ 2 ಎಸೆತಗಳಲ್ಲಿ ಒಂದು ರನ್ ಗಳಿಸಿದ್ದಾಗ ಮತ್ತೆ ಮಳೆ ಸುರಿದ ಕಾರಣ, ಪಂದ್ಯವನ್ನು ರದ್ದುಗೊಳಿಸಲಾಯಿತು.
ಇಂದಿನಿಂದ ಭಾರತದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಮೋಟೋ ಜಿಪಿ.! ಹೇಗಿರಲಿವೆ ಬೈಕ್‌ಗಳು?
ಇನ್ನು ಇನ್ನೊಂದೆಡೆ ಇಂಡೋನೇಷ್ಯಾ ವಿರುದ್ದದ ಕ್ವಾರ್ಟರ್ ಫೈನಲ್ ಪಂದ್ಯ ಮಳೆಗೆ ಆಹುತಿಯಾದ ಕಾರಣ, ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡವು ಸೆಮಿಫೈನಲ್‌ಗೇರಿತು. ಶುಕ್ರವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ-ಥಾಯ್ಲೆಂಡ್, ಬಾಂಗ್ಲಾದೇಶ-ಹಾಂಕಾಂಗ್ ತಂಡಗಳು ಸೆಣಸಾಟ ನಡೆಸಲಿವೆ.
ಫುಟ್ಬಾಲ್ ಬಾಂಗ್ಲಾದೇಶ ವಿರುದ್ದ ಗೆದ್ದ ಭಾರತ
ಭಾರತ ಫುಟ್ಬಾಲ್ ತಂಡಗಳು ಶುಕ್ರವಾರ ಮಿಶ್ರಫಲ ಕಂಡವು. ಫುರುಷರ ತಂಡ 'ಎ' ಗುಂಪಿನಲ್ಲಿ ತನ್ನ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ದ 1-0 ಗೆಲುವು ಸಾಧಿಸಿ ಮುಂದಿನ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಬಾಂಗ್ಲಾದೇಶ ವಿರುದ್ದ 85ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸುನಿಲ್ ಚೆಟ್ರಿ ಗೋಲಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನೊಂದೆಡೆ ಭಾರತ ಮಹಿಳಾ ಫುಟ್ಬಾಲ್ ತಂಡ 'ಬಿ' ಗುಂಪಿನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ದ 1-2 ಗೋಲುಗಳಿಂದ ಸೋತು ನಿರಾಸೆ ಅನುಭವಿಸಿತು.
ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಜೆರ್ಸಿ ಅನಾವರಣ; ನೂತನ ಜೆರ್ಸಿಯಲ್ಲಿ 2 ಮಹತ್ವದ ಬದಲಾವಣೆ ಮಾಡಿದ Adidas
ವಾಲಿಬಾಲ್: ಇಂದು ಭಾರತ-ತೈಪೆ
ಹಾಂಗ್ಝೂ: ಏಷ್ಯನ್ ಗೇಮ್ಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಭಾರತ ಪುರುಷರ ವಾಲಿಬಾಲ್ ತಂಡ, ಶುಕ್ರವಾರ ಅಂತಿಮ-12ರ ನಾಕೌಟ್ ಪಂದ್ಯದಲ್ಲಿ ಚೈನೀಸ್ ತೈಪೆ ವಿರುದ್ಧ ಸೆಣಸಲಿದೆ. ಮೊದಲ ಪಂದ್ಯದಲ್ಲಿ ಕಾಂಬೋಡಿಯಾವನ್ನು ಸೋಲಿಸಿದ್ದ ಭಾರತ, 2ನೇ ಪಂದ್ಯದಲ್ಲಿ ವಿಶ್ವ ನಂ.27 ದಕ್ಷಿಣ ಕೊರಿಯಾಕ್ಕೆ ಆಘಾತ ನೀಡಿ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಚೈನೀಸ್ ತೈಪೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 44ನೇ ಸ್ಥಾನದಲ್ಲಿದ್ದು ವಿಶ್ವ ನಂ.73 ಭಾರತಕ್ಕೆ ಕಠಿಣ ಸ್ಪರ್ಧೆ ಎದುರಾಗುವ ನಿರೀಕ್ಷೆ ಇದೆ.