250ನೇ ಪಂದ್ಯಕ್ಕೆ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಲಿರುವ ಶ್ರೀನಾಥ್ಭಾರತ-ನೇಪಾಳ ನಡುವಿನ ಏಷ್ಯಾಕಪ್ ಪಂದ್ಯ ಶ್ರೀನಾಥ್ ಪಾಲಿಗೆ 250ನೇ ಮ್ಯಾಚ್ ರೆಫ್ರಿಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ 4ನೇ ವ್ಯಕ್ತಿ ಎಂಬ ಖ್ಯಾತಿಗೆ ಶ್ರೀನಾಥ್ ಭಾಗಿ

ಪಲ್ಲಕೆಲೆ(ಸೆ.04): ಭಾರತದ ಮಾಜಿ ವೇಗಿ, ಕರ್ನಾಟಕದ ಜಾವಗಲ್‌ ಶ್ರೀನಾಥ್‌ 250ನೇ ಐಸಿಸಿ ಪುರುಷರ ಏಕದಿನ ಪಂದ್ಯಕ್ಕೆ ಮ್ಯಾಚ್‌ ರೆಫ್ರಿಯಾಗಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದು, ಸೋಮವಾರದ ಭಾರತ-ನೇಪಾಳ ನಡುವಿನ ಏಷ್ಯಾಕಪ್‌ ಪಂದ್ಯದ ಮೂಲಕ ಈ ಮೈಲಿಗಲ್ಲು ತಲುಪಲಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ 4ನೇ ವ್ಯಕ್ತಿ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. 2006ರಲ್ಲಿ ಐಸಿಸಿ ಎಲೈಟ್‌ ಪ್ಯಾನೆಲ್‌ ಸೇರ್ಪಡೆಯಾಗಿದ್ದ ಅವರು, 65 ಟೆಸ್ಟ್‌, 118 ಅಂ.ರಾ. ಟಿ20 ಪಂದ್ಯಕ್ಕೂ ಮ್ಯಾಚ್‌ ರೆಫ್ರಿಯಾಗಿದ್ದಾರೆ.

ಭಾರತ-ನೇಪಾಳ ಪಂದ್ಯವೂ ರದ್ದಾದರೆ ಏನಾಗುತ್ತದೆ?

ಪಲ್ಲಕೆಲೆಯಲ್ಲಿ ಮುಂದಿನ ಕೆಲ ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಭಾರತ ತನ್ನ 2ನೇ ಪಂದ್ಯವನ್ನು ಇಂದು ನೇಪಾಳ ವಿರುದ್ಧ ಆಡಲಿದೆ. ಈ ಪಂದ್ಯವೂ ರದ್ದಾದರೆ, ಆಗ ಭಾರತ ಸೂಪರ್‌-4 ಹಂತಕ್ಕೆ ಪ್ರವೇಶ ಪಡೆಯಲಿದೆ. ನೇಪಾಳ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿತ್ತು.

World Cup 2023: ಭಾರತ vs ಪಾಕ್‌ ವಿಶ್ವಕಪ್ ಪಂದ್ಯದ ಟಿಕೆಟ್‌ ಕ್ಷಣಾರ್ಧದಲ್ಲೇ ಸೋಲ್ಡೌಟ್‌!

ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ಆಸೀಸ್‌ 3-0 ಕ್ಲೀನ್‌ಸ್ವೀಪ್‌

ಡರ್ಬನ್‌: ದ.ಆಫ್ರಿಕಾ ವಿರುದ್ಧದ ಟಿ20 ಸರಣಿಯನ್ನು ಪ್ರವಾಸಿ ಆಸ್ಟ್ರೇಲಿಯಾ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿದೆ. ಭಾನುವಾರ ನಡೆದ ಕೊನೆಯ ಪಂದ್ಯದಲ್ಲಿ ಆಸೀಸ್‌ 5 ವಿಕೆಟ್‌ಗಳಿಂದ ಜಯಿಸಿತು. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 8 ವಿಕೆಟ್‌ಗೆ 190 ರನ್‌ ಕಲೆಹಾಕಿತು. ಡೊನೊವನ್‌ ಫೆರೀರಾ (21 ಎಸೆತದಲ್ಲಿ 48), ಹೆಂಡ್ರಿಕ್ಸ್‌(42), ಮಾರ್ಕ್‌ರಮ್‌ (41) ಅಬ್ಬರಿಸಿದರು. ಬೃಹತ್‌ ಗುರಿಯನ್ನು ಆಸೀಸ್‌ 17.5 ಓವರ್‌ಗಳಲ್ಲೇ ಬೆನ್ನತ್ತಿತು. ಟ್ರ್ಯಾವಿಸ್ ಹೆಡ್‌ 48 ಎಸೆತದಲ್ಲಿ 91, ಜೋಶ್‌ ಇಂಗ್ಲಿಸ್‌ 22 ಎಸೆತದಲ್ಲಿ 42 ರನ್‌ ಸಿಡಿಸಿದರು.

3ನೇ ಟಿ20: ಇಂಗ್ಲೆಂಡ್‌ಗೆ ಸೋಲುಣಿಸಿದ ಕಿವೀಸ್‌

ಬರ್ಮಿಂಗ್‌ಹ್ಯಾಮ್‌: ಫಿನ್‌ ಆ್ಯಲೆನ್‌(53 ಎಸೆತಗಳಲ್ಲಿ 83) ಹಾಗೂ ಗ್ಲೆನ್‌ ಫಿಲಿಪ್ಸ್‌(34 ಎಸೆತದಲ್ಲಿ 69) ಅಬ್ಬರದ ಬ್ಯಾಟಿಂಗ್‌ನಿಂದಾಗಿ ಇಂಗ್ಲೆಂಡ್‌ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್‌ 74 ರನ್‌ ಬೃಹತ್‌ ಗೆಲುವು ದಾಖಲಿಸಿದೆ. ಇದರೊಂದಿಗೆ 4 ಪಂದ್ಯಗಳ ಸರಣಿಯ ಹಿನ್ನಡೆಯನ್ನು ಕಿವೀಸ್‌ 1-2ಕ್ಕೆ ಇಳಿಸಿತು. ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 5 ವಿಕೆಟ್‌ಗೆ 202 ರನ್‌ ಕಲೆಹಾಕಿತು. ಕಠಿಣ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 18.3 ಓವರ್‌ಗಳಲ್ಲಿ 128ಕ್ಕೆ ಸರ್ವಪತನ ಕಂಡಿತು. ಜೋಸ್‌ ಬಟ್ಲರ್‌(40), ಮೊಯೀನ್‌ ಅಲಿ(26) ಹೊರತುಪಡಿಸಿ ಇತರರಿಂದ ತಂಡಕ್ಕೆ ಅಗತ್ಯ ನೆರವು ಸಿಗಲಿಲ್ಲ. ಸೋಧಿ, ಜೇಮಿಸನ್‌ ತಲಾ 3 ವಿಕೆಟ್‌ ಕಿತ್ತರು.

Asia Cup 2023: ಭಾರತಕ್ಕಿಂದು ನೇಪಾಳ ಎದುರಾಳಿ; ಇಂದಿನ ಪಂದ್ಯಕ್ಕೂ ಮಳೆ ಅಡ್ಡಿ?

ಜಿಂಬಾಬ್ವೆ ಕ್ರಿಕೆಟ್‌ ದಿಗ್ಗಜ ಹೀಥ್‌ ಸ್ಟ್ರೀಕ್‌ ನಿಧನ

ಹರಾರೆ: ದೀರ್ಘ ಸಮಯದಿಂದ ಲಿವರ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಜಿಂಬಾಬ್ವೆ ಮಾಜಿ ನಾಯಕ ಹೀಥ್ ಸ್ಟ್ರೀಕ್ ಭಾನುವಾರ ನಿಧನರಾಗಿದ್ದಾರೆ. 49 ವರ್ಷದ ಸ್ಟ್ರೀಕ್‌ ನಿಧನವನ್ನು ಅವರ ಕುಟುಂಬಸ್ಥರು ಖಚಿತಪಡಿಸಿದ್ದಾರೆ. ಸ್ಟ್ರೀಕ್‌ ಜಿಂಬಾಬ್ವೆ ಪರ 1993ರಿಂದ 2005ರ ನಡುವೆ 65 ಟೆಸ್ಟ್‌, 189 ಏಕದಿನ ಪಂದ್ಯಗಳನ್ನಾಡಿದ್ದು, ಎರಡೂ ಮಾದರಿಯಲ್ಲಿ ಜಿಂಬಾಬ್ವೆ ಪರ ಗರಿಷ್ಠ ವಿಕೆಟ್‌ ಸರದಾರ ಎನಿಸಿದ್ದಾರೆ. 2016ರಲ್ಲಿ ಜಿಂಬಾಬ್ವೆ ಕೋಚ್‌ ಆಗಿದ್ದ ಸ್ಟ್ರೀಕ್, ಐಪಿಎಲ್‌ನ ಕೋಲ್ಕತಾ ಹಾಗೂ ಗುಜರಾತ್‌ ತಂಡಕ್ಕೆ ಬೌಲಿಂಗ್‌ ಕೋಚ್‌ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸಂತಾಪ: ಹೀಥ್‌ ನಿದನಕ್ಕೆ ಹಲವರು ಹಾಲಿ, ಮಾಜಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಶ್ರೀಲಂಕಾದ ಸನತ್‌ ಜಯಸೂರ್ಯ, ವಿವಿಎಸ್‌ ಲಕ್ಷ್ಮಣ್‌, ಹರ್ಭಜನ್‌ ಸಿಂಗ್‌, ಸುರೇಶ್‌ ರೈನಾ ಸೇರಿದಂತೆ ಹಲವರು ಶೋಕ ವ್ಯಕ್ತಪಡಿಸಿದ್ದಾರೆ.