Asianet Suvarna News Asianet Suvarna News

ಪಾಕ್‌ ಕೈ ತಪ್ಪಿದ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಆತಿಥ್ಯ..!

ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯಿಂದ ಪಾಕಿಸ್ತಾನದಿಂದ ಬೇರೆಡೆ ಶಿಫ್ಟ್
ಟೂರ್ನಿಯನ್ನು ಪಾಕಿಸ್ತಾನದ ಹೊರಗಡೆ ಆಯೋಜಿಸಲು ತೀರ್ಮಾನ
ಶ್ರೀಲಂಕಾದಲ್ಲಿ ಟೂರ್ನಿಯನ್ನು ಆಯೋಜಿಸುವ ಸಾಧ್ಯತೆ

Asia Cup 2023 expected to move out of Pakistan kvn
Author
First Published May 9, 2023, 10:05 AM IST

ನವ​ದೆ​ಹ​ಲಿ(ಮೇ.09): ಹಲವು ಗೊಂದಲಗಳಿಗೆ ಕಾರಣವಾಗಿದ್ದ ಬಹುನಿರೀಕ್ಷಿತ ಏಷ್ಯಾಕಪ್‌ ಕ್ರಿಕೆಟ್ ಟೂರ್ನಿಯ ಆತಿಥ್ಯ ಹಕ್ಕು ಕೊನೆಗೂ ಪಾಕಿಸ್ತಾನದ ಕೈ ತಪ್ಪಿದೆ. ಸೋಮವಾರ ಈ ಬಗ್ಗೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್(ಎಸಿಸಿ) ಅಂತಿಮ ನಿರ್ಧಾರ ಕೈಗೊಂಡಿದ್ದು, ಟೂರ್ನಿಯನ್ನು ಪಾಕಿಸ್ತಾನದ ಹೊರಗಡೆ ಆಯೋಜಿಸಲು ತೀರ್ಮಾನಿಸಿದೆ. ಟೂರ್ನಿ ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆಯಿದೆ.

ಟೂರ್ನಿ ಆತಿಥ್ಯ ಹಕ್ಕು ಪಾಕಿ​ಸ್ತಾ​ನದ ಬಳಿ ಇದ್ದರೂ ಅಲ್ಲಿಗೆ ತೆರ​ಳ​ಲು ಭಾರತ ನಿರಾ​ಕ​ರಿ​ಸಿತ್ತು. ತಟಸ್ಥ ಸ್ಥಳ​ದಲ್ಲಿ ಆಯೋ​ಜಿ​ಸು​ವಂತೆ ಏಷ್ಯನ್‌ ಕ್ರಿಕೆಟ್‌ ಕೌನ್ಸಿ​ಲ್‌​(​ಎ​ಸಿ​ಸಿ​)ಗೆ ಬಿಸಿ​ಸಿಐ ಪಟ್ಟು ಹಿಡಿ​ದಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಟೂರ್ನಿಯನ್ನು ಪಾಕ್‌ನಲ್ಲೇ ಆಯೋಜಿಸಿ, ಭಾರತದ ಪಂದ್ಯಗಳನ್ನು ಬೇರೆ ದೇಶದಲ್ಲಿ ಆಡಿಸುವ ಪ್ರಸ್ತಾಪವಿರಿಸಿತ್ತು. ಆದರೆ ಇದಕ್ಕೆ ಎಸಿಸಿ ಸದಸ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಟೂರ್ನಿಯನ್ನು ಸ್ಥಳಾಂತರಗೊಳಿಸಲಾಗಿದೆ. ಶ್ರೀಲಂಕಾದಲ್ಲಿ ಟೂರ್ನಿಯನ್ನು ಆಯೋಜಿಸಿದರೆ, ಪಾಕಿಸ್ತಾನವು ಏಷ್ಯಾಕಪ್ ಟೂರ್ನಿಯನ್ನು ಬಹಿಸ್ಕರಿಸುವ ಸಾಧ್ಯತೆಯಿದೆ.

ಈ ನಡುವೆ ಟೂರ್ನಿಗೆ ಶ್ರೀಲಂಕಾ ಆತಿಥ್ಯ ವಹಿ​ಸುವ ಸಾಧ್ಯ​ತೆ​ಗ​ಳಿದ್ದು, ಈ ತಿಂಗಳ ಕೊನೆ​ಯಲ್ಲಿ ಈ ಬಗ್ಗೆ ಎಸಿಸಿ ಅಂತಿಮ ನಿರ್ಧಾರ ಕೈಗೊ​ಳ್ಳ​ಲಿದೆ ಎಂದು ವರ​ದಿ​ಯಾ​ಗಿದೆ. ಆತಿಥ್ಯ ಹಕ್ಕು ಕೈತ​ಪ್ಪಿ​ದರೆ ಪಾಕಿ​ಸ್ತಾನ ಟೂರ್ನಿ​ಯಲ್ಲಿ ಪಾಲ್ಗೊ​ಳ್ಳು​ವುದಿಲ್ಲ ಎಂದು ಪಿಸಿಬಿ ಅಧ್ಯಕ್ಷ ನಜಂ ಸೇಠಿ ಹೇಳಿ​ದ್ದು, ಶ್ರೀಲಂಕಾ​ದಲ್ಲಿ ಟೂರ್ನಿ ಆಯೋ​ಜಿ​ಸಿ​ದರೆ ಪಾಕ್‌ ತಂಡ ಬಹಿ​ಷ್ಕಾರ ಹಾಕುವ ಸಾಧ್ಯ​ತೆ​ಯಿ​ದೆ.

ಏ​ಷ್ಯಾ​ಕಪ್‌ ಹಕ್ಕು ಕೈತ​ಪ್ಪಿ​ದ್ರೆ ಪಾಕ್‌ಗೆ 25 ಕೋಟಿ ರುಪಾಯಿ ನ​ಷ್ಟ!

ಕರಾ​ಚಿ: ಏಷ್ಯಾಕಪ್‌ ಆತಿಥ್ಯ ಹಕ್ಕು ಬಿಟ್ಟುಕೊಡುವು​ದಿಲ್ಲ ಎಂದು ಪಾಕಿ​ಸ್ತಾನ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ನಜಂ ಸೇಠಿ ಪುನರುಚ್ಚರಿಸಿದ್ದು, ಟೂರ್ನಿಯಿಂದ ಹಿಂದೆ ಸರಿದರೆ 3 ಮಿಲಿಯನ್‌ ಡಾಲರ್‌(ಅಂದಾಜು 25 ಕೋಟಿ ರು.) ನಷ್ಟವಾಗಲಿದೆ ಎಂದು ಹೇಳಿ​ದ್ದರು. ಈ ಬಗ್ಗೆ ಪ್ರತಿ​ಕ್ರಿ​ಯಿ​ಸಿ​ರುವ ಅವರು, ‘ಟೂ​ರ್ನಿ​ಯನ್ನು ಪಾಕಿಸ್ತಾನದಲ್ಲೇ ಆಯೋ​ಜಿಸಿ, ಭಾರತದ ಪಂದ್ಯಗಳನ್ನಷ್ಟೇ ಬೇರೆಡೆ ನಡೆಸಲು ಪ್ರಸ್ತಾಪಿಸಿದ್ದೇವೆ. ಈ ಪ್ರಸ್ತಾಪವನ್ನು ಹೊರತುಪಡಿಸಿ ಬೇರಾರ‍ಯವುದಕ್ಕೂ ನಾವು ಒಪ್ಪುವುದಿಲ್ಲ ಎಂದು ಏಷ್ಯಾ ಕ್ರಿಕೆಟ್‌ ಸಮಿತಿ(ಎಸಿಸಿ)ಗೆ ಸ್ಪಷ್ಟವಾಗಿ ತಿಳಿಸಿದ್ದೇವೆ’ ಎಂದಿದ್ದರು.

2 ದಿನ​ದಲ್ಲೇ ಏಕ​ದಿ​ನ​ ನಂ.1 ಸ್ಥಾನ ಕಳೆ​ದು​ಕೊಂಡ ಪಾಕ್‌

ಕರಾ​ಚಿ: 2 ದಿನ​ಗ​ಳ ಹಿಂದಷ್ಟೇ ಐಸಿಸಿ ಏಕ​ದಿ​ನ​ ರ‍್ಯಾಂಕಿಂಗ್‌‌ದಲ್ಲಿ ಮೊದಲ ಬಾರಿ ನಂ.1 ಸ್ಥಾನ​ಕ್ಕೇ​ರಿದ್ದ ಸಾಧನೆ ಮಾಡಿದ್ದ ಪಾಕಿ​ಸ್ತಾನ, ನ್ಯೂಜಿಲೆಂಡ್‌ ವಿರು​ದ್ಧದ ಕೊನೆ ಪಂದ್ಯದ ಸೋಲಿನ ಬಳಿಕ ಅಗ್ರ​ಸ್ಥಾನ ಕಳೆ​ದು​ಕೊಂದೆ. ನೂತನ ಪಟ್ಟಿ​ಯ​ಲ್ಲಿ ತಂಡ 112 ಅಂಕ​ದೊಂದಿಗೆ ಮತ್ತೆ 3ನೇ ಸ್ಥಾನಕ್ಕೆ ಕುಸಿ​ದಿದೆ. 

WTC Final: ಕೆ ಎಲ್ ರಾಹುಲ್‌ ಬದಲು ಇಶಾನ್ ಕಿಶ​ನ್‌ಗೆ ಜಾಕ್‌ಪಾಟ್

ಸದ್ಯ ಆಸ್ಪ್ರೇ​ಲಿಯಾ 113 ಅಂಕ​ಗ​ಳೊಂದಿಗೆ ನಂ.1 ಸ್ಥಾನ ಅಲಂಕ​ರಿ​ಸಿದ್ದು, ಅಷ್ಟೇ ಅಂಕ ಹೊಂದಿ​ರುವ ಭಾರತ 2ನೇ ಸ್ಥಾನ​ದ​ಲ್ಲಿದೆ. ಇಂಗ್ಲೆಂಡ್‌, ನ್ಯೂಜಿ​ಲೆಂಡ್‌, ದ.ಆ​ಫ್ರಿಕಾ, ಬಾಂಗ್ಲಾ​ದೇಶ ಕ್ರಮ​ವಾಗಿ ನಂತ​ರದ ಸ್ಥಾನ​ಗ​ಳ​ಲ್ಲಿ​ವೆ. ಟಿ20 ಹಾಗೂ ಟೆಸ್ಟ್‌​ನಲ್ಲಿ ಭಾರತ ನಂ.1 ಸ್ಥಾನ​ದಲ್ಲಿ ಮುಂದು​ವ​ರಿ​ದಿ​ದೆ.

ಏಕ​ದಿ​ನ: ಕ್ಲೀನ್‌​ಸ್ವೀ​ಪ್‌ನಿಂದ ಪಾರಾದ ನ್ಯೂಜಿ​ಲೆಂಡ್‌

ಕರಾ​ಚಿ: ಪಾಕಿ​ಸ್ತಾನ ವಿರು​ದ್ಧದ 5ನೇ ಹಾಗೂ ಕೊನೆ ಏಕ​ದಿನ ಪಂದ್ಯ​ದಲ್ಲಿ ನ್ಯೂಜಿ​ಲೆಂಡ್‌ 47 ರನ್‌ ಗೆಲುವು ಸಾಧಿ​ಸಿದ್ದು, ಕ್ಲೀನ್‌​ಸ್ವೀಪ್‌ ಮುಖ​ಭಂಗ​ದಿಂದ ಪಾರಾ​ಗಿದೆ. ಮೊದಲ 4 ಪಂದ್ಯ ಗೆದ್ದಿದ್ದ ಪಾಕ್‌ 4-0 ಅಂತ​ರ​ದಲ್ಲಿ ಸರಣಿ ಕೈವ​ಶ​ಪ​ಡಿ​ಸಿ​ಕೊಂಡಿತು. 

ಮೊದಲು ಬ್ಯಾಟ್‌ ಮಾಡಿದ ಕಿವೀಸ್‌ 49.3 ಓವ​ರಲ್ಲಿ 299ಕ್ಕೆ ಆಲೌ​ಟಾ​ಯಿತು. ವಿಲ್‌ ಯಂಗ್‌ 87, ಲ್ಯಾಥಮ್‌ 59 ರನ್‌ ಸಿಡಿ​ಸಿ​ದರು. ಸ್ಪರ್ಧಾ​ತ್ಮಕ ಗುರಿ ಬೆನ್ನ​ತ್ತಿದ ಪಾಕ್‌ 46.1 ಓವ​ರಲ್ಲಿ 252ಕ್ಕೆ ಸರ್ವ​ಪ​ತನ ಕಂಡಿತು. ಇಫ್ತಿ​ಕಾರ್‌ ಅಹ್ಮದ್‌ ಔಟಾ​ಗದೆ 94 ರನ್‌ ಸಿಡಿ​ಸಿ​ದರೂ ತಂಡಕ್ಕೆ ಗೆಲುವು ಲಭಿ​ಸ​ಲಿಲ್ಲ.

Follow Us:
Download App:
  • android
  • ios