Asianet Suvarna News Asianet Suvarna News

No ‘Mauka Mauka’: ಈ ಸಲ ಭಾರತ-ಪಾಕ್​​​ ಪಂದ್ಯ ಕ್ರೇಜ್​ ಕಳೆದುಕೊಳ್ಳುತ್ತಾ..?

* ಏಷ್ಯಾಕಪ್ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಗೆ ಕ್ಷಣಗಣನೆ
* ಆಗಸ್ಟ್ 28ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯ
* ಈ ಬಾರಿ ಇಂಡೋ-ಪಾಕ್ ಪಂದ್ಯ ಕ್ರೇಜ್ ಕಳೆದುಕೊಳ್ಳುತ್ತಾ?

Asia Cup 2022 Star Sports will not be airing Mauka Mauka advertise for India vs Pakistan clash kvn
Author
Bengaluru, First Published Aug 4, 2022, 4:28 PM IST

ಬೆಂಗಳೂರು(ಆ.04): ಏಷ್ಯಾಕಪ್​ ಟಿ20 ಟೂರ್ನಿಗೆ ಈಗಾಗಲೇ ಮುಹೂರ್ತ ಫಿಕ್ಸ್ ಆಗಿದೆ. ಆಗಸ್ಟ್​​​ 28ರಂದು ಕ್ರಿಕೆಟ್​​​ ಜಗತ್ತಿನ ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಈ ಹೈವೋಲ್ಟೇಜ್​​ ಪಂದ್ಯಕ್ಕಾಗಿ ಇಡೀ ಕ್ರಿಕೆಟ್​​ ಜಗತ್ತು ಕಾದು ಕುಳಿತಿದೆ. ಯಾಕಂದ್ರೆ ಭಾರತ-ಪಾಕ್​​​ ಕಾಳಗ ಅಂದ್ರೆ ಬರೀ ಅದು ಪಂದ್ಯವಷ್ಟೇ ಅಲ್ಲ. ಅದೊಂದು ರೋಚಕ ಸಮರ. ಪ್ರತಿಷ್ಠೆಯ ಮಹಾಬ್ಯಾಟಲ್​​. ಕ್ರಿಕೆಟ್ ಪ್ರೇಮಿಗಳನ್ನು ಒಂದು ಕ್ಷಣ ಕಣ್ಣು ಮಿಟುಕಿಸದೇ ಕೊನೆ ಎಸೆತದವರೆಗೆ ತದೇಕಚಿತ್ತದಿಂದ ನೋಡುವಂತ ಮಹಾ ಕೌತುಕತೆಯ ಸಮರ. ಆದ್ರೆ ಈ ಸಲ ಯಾಕೋ ಸಾಂಪ್ರದಾಯಿಕ ಎದುರಾಳಿಗಳ ಪಂದ್ಯ ಹಿಂದೆಂದೂ ಕಾಣದಷ್ಟು ಕ್ರೇಜ್ ಕಳೆದುಕೊಳ್ಳುತ್ತಾ ಅನ್ನೋ ಪ್ರಶ್ನೆ ಎದ್ದಿದೆ.

ಭಾರತ-ಪಾಕ್​​ ಪಂದ್ಯಕ್ಕಿಲ್ಲ ಮೌಕಾ ಮೌಕಾ ಜಾಹೀರಾತು: 

ಬದ್ಧವೈರಿ ಭಾರತ-ಪಾಕ್​​​ ಅಂದ್ರೆ ಮೊದಲಿಗೆ ನೆನಪಾಗೋದೆ ರಿವೆಂಜ್​​​​. ಆ ರಿವೆಂಜ್​ ಅನ್ನು ಮತ್ತಷ್ಟು ಹೆಚ್ಚಿಸಿದ್ದು ಮೌಕಾ ಮೌಕಾ ಅನ್ನೋ ಜಾಹೀರಾತು. ಯಾವುದೇ ವಿಶ್ವಕಪ್​ ಅಥವಾ ದೊಡ್ಡ ಟೂರ್ನಿಗಳಿರಲಿ. ಭಾರತ-ಪಾಕ್​​​​​ ಪಂದ್ಯ ಸಮೀಪಿಸ್ತಿದ್ದಂತೆ ಪ್ರತಿ ಸಲ ಮೌಕಾ ಮೌಕಾ ಅಡ್ವರ್​​ಟೈಸ್​ಮೆಂಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತೆ.

ಎಂ ಎಸ್ ಧೋನಿ ಫಾಲೋ ಮಾಡಲು ಹೋಗಿ ಎಡವಿಬಿದ್ದ ರೋಹಿತ್ ಶರ್ಮಾ..!

ಪಾಕ್​ ಅಭಿಮಾನಿಗೆ ಪಂಚ್​ ಕೊಡುವ ಈ ಜಾಹೀರಾತು ನೋಡುಗರಿಗೆ ಸಖತ್​ ಮಜಾ ಕೊಡ್ತಿತ್ತು. ಪಂದ್ಯದ ಕ್ರೇಜ್​​ ಅನ್ನ ದುಪ್ಪಟ್ಟಾಗಿಸ್ತಿತ್ತು. ಜೊತೆಗೆ ಪ್ರಸಾರ ವಾಹಿನಿ ಪ್ರೇಕ್ಷಕರನ್ನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಈ ಯಶಸ್ವಿ ಮೌಕಾ ಮೌಕಾ ಕ್ಯಾಂಪೇನ್ ಅನ್ನು ನಿಲ್ಲಿಸಲು ಸ್ಟಾರ್​ ಪ್ರಸಾರ ವಾಹಿನಿ ನಿರ್ಧರಿಸಿದೆ. ಇದರಿಂದ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ದೊಡ್ಡ ನಿರಾಸೆ ಯಾಗಿದೆ.

ಫೇಮಸ್​​ ಮೌಕಾ ಮೌಕಾ ಕ್ಯಾಂಪೇನ್​ ಸ್ಟಾಪ್​ ಆಗ್ತಿರೋದ್ಯಾಕೆ..? : 

2015ರ ಒನ್ಡೇ ವಿಶ್ವಕಪ್​​ನಿಂದ ಮೌಕಾ ಮೌಕಾ ಜಾಹೀರಾತು ಶುರುವಾಗಿ, ಸಖತ್ ಫೇಮಸ್ ಆಗಿತ್ತು. ಸದ್ಯ ಈ ಕ್ಯಾಂಪೇನ್ ಅನ್ನು ನಿಲ್ಲಿಸಲು ಸ್ಟಾರ್​ ವಾಹಿನಿ ಮುಂದಾಗಿದೆ. ಇದಕ್ಕೆ ಕಾರಣ 2021ರ ಟಿ20 ವಿಶ್ವಕಪ್​ನಲ್ಲಿ ಟೀಂ​ ಇಂಡಿಯಾ ತೋರಿದ ಹೀನಾಯ ಪ್ರದರ್ಶನ.

ಹೌದು, ಕಳೆದ ವಿಶ್ವಕಪ್​​ನಲ್ಲಿ ಕೊಹ್ಲಿ ಆಂಡ್​ ಗ್ಯಾಂಗ್​​ ಲೀಗ್​​ನಲ್ಲೇ ಹೊರಬಿದ್ದು ತೀವ್ರ ಮುಖಭಂಗ ಅನುಭವಿಸಿತ್ತು. ಅದ್ರಲ್ಲೂ ವಿಶ್ವಕಪ್​​​ನಲ್ಲಿ ಪಾಕಿಸ್ತಾನ ವಿರುದ್ದ ಎಂದೂ ಸೋಲದ ಭಾರತ ತಂಡ 2021ರ ಟಿ20 ವಿಶ್ವಕಪ್​​​ನಲ್ಲಿ ಪಾಕ್​​ ಎದುರು  10 ವಿಕೆಟ್​​ಗಳಿಂದ ಸೋತು  ಅವಮಾನಕ್ಕೆ ತುತ್ತಾಗಿತ್ತು. ಇದೇ ಕಾರಣಕ್ಕಾಗಿ ಸ್ಟಾರ್ ವಾಹಿನಿ ಇನ್ಮುಂದೆ ಮೌಕಾ ಮೌಕಾ ಜಾಹೀರಾತು ಮಾಡದಿರಲು ನಿರ್ಧರಿಸಿದೆ. ಒಟ್ಟಿನಲ್ಲಿ ಫೇಮಸ್​​​ ಮೌಕಾ ಅಡ್ವರ್​​​​​ಟೈಸ್​ಮೆಂಟ್​ ಇಲ್ಲದ ಈ ಸಲದ ಏಷ್ಯಾಕಪ್​​​​ ​ ಆರಂಭದಲ್ಲೇ ಹೇಳಿದಂತೆ ಕೌತುಕತೆ ಕಳೆದುಕೊಂಡ್ರೂ ಅಚ್ಚರಿಯಿಲ್ಲ.
 

Follow Us:
Download App:
  • android
  • ios