ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಶ್ರೀಲಂಕಾ ಶುಭಾರಂಭಆಫ್ಘಾನಿಸ್ತಾನ ಎದುರು 4 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಲಂಕಾಗ್ರೂಪ್ ಹಂತದಲ್ಲಿ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡ ದ್ವೀಪ ರಾಷ್ಟ್ರ

ಶಾರ್ಜಾ(ಸೆ.04): ಏಷ್ಯಾಕಪ್‌ ಟಿ20 ಟೂರ್ನಿಯ ಸೂಪರ್-4 ಹಂತದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡವು ಭರ್ಜರಿ ಆರಂಭ ಪಡೆದಿದೆ. ಆಫ್ಘಾನಿಸ್ತಾನ ವಿರುದ್ದ ಶನಿವಾರ ನಡೆದ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸಿ ಬೀಗಿದೆ. ಇದರ ಜತೆಗೆ ಗ್ರೂಪ್‌ ಹಂತದಲ್ಲಿ ಆಫ್ಘಾನಿಸ್ತಾನ ವಿರುದ್ದ ಅನುಭವಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ಉತ್ತಮ ಆರಂಭದ ಹೊರತಾಗಿಯೂ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ತಾರಾ ಬ್ಯಾಟರ್‌ಗಳೆಲ್ಲರೂ ನೆರವಾದರು. ಈ ಮೂಲಕ ತಂಡ ಇನ್ನೂ 5 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಲಂಕಾದ ಆರಂಭಿಕ ಜೋಡಿಯಾದ ನಿಸ್ಸಾಂಕ ಪಥುಮ(35) ಹಾಗೂ ಕುಸಾಲ್ ಮೆಂಡಿಸ್‌(36) 6.3 ಓವರ್‌ಗಳಲ್ಲಿ 62 ರನ್‌ಗಳ ಜತೆಯಾಟ ನಿಭಾಯಿಸಿತು. ಇದಾದ ಬಳಿಕ ಧನುಷ್ಕಾ ಗುಣತಿಲಕ 33 ರನ್ ಸಿಡಿಸಿದರೆ, ಭನುಕಾ ರಾಜಪಕ್ಸೆ 14 ಎಸೆತಗಳಲ್ಲಿ 31 ರನ್ ಚಚ್ಚಿ ಶ್ರೀಲಂಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇನ್ನು ಆಲ್ರೌಂಡರ್ ವನಿಂದು ಹಸರಂಗ 16 ರನ್‌ಗಳ ಕೊಡುಗೆ ನೀಡಿದರು.

ರಹಮಾನುಲ್ಲಾ ಆರ್ಭಟ: ಮೊದಲು ಬ್ಯಾಟ್ ಮಾಡಿದ ಆಫ್ಘಾನಿಸ್ತಾನ ತಂಡಕ್ಕೆ ಯುವ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್‌ ಸ್ಪೋಟಕ ಆರಂಭ ಒದಗಿಸಿದರು. ಕೇವಲ 45 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 84 ರನ್ ಗಳಿಸಿ ತಂಡ ದೊಡ್ಡ ಮೊತ್ತದತ್ತ ಮುನ್ನುಗ್ಗಲು ವೇದಿಕೆ ಸಿದ್ದಗೊಳಿಸಿದರು. ಆದರೆ ಕೊನೆಯಲ್ಲಿ ಮಧ್ಯಮ ಕ್ರಮಾಂಕ ವೈಫಲ್ಯ ಅನುಭವಿಸಿತು. ಕೊನೆಯ ಮೂರು ಓವರ್‌ಗಳಲ್ಲಿ ಆಫ್ಘಾನಿಸ್ತಾನ ತಂಡವು 4 ವಿಕೆಟ್ ಕಳೆದುಕೊಂಡು ಕೇವಲ 25 ರನ್ ಗಳಿಸಲಷ್ಟೇ ಶಕ್ತವಾಯಿತು. 

Scroll to load tweet…

ಐಸಿಸಿ ಟಿ20 ವಿಶ್ವಕಪ್‌ನಿಂದ ಗಾಯಾಳು ಜಡೇಜಾ ಔಟ್‌?

ನವದೆಹಲಿ: ಭಾರತದ ಹಿರಿಯ ಆಲ್ರೌಂಡರ್‌ ರವೀಂದ್ರ ಜಡೇಜಾ ಅಕ್ಟೋಬರ್‌-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಮಂಡಿ ಗಾಯಕ್ಕೆ ತುತ್ತಾಗಿರುವ ಜಡೇಜಾಗೆ ಶಸ್ತ್ರಚಿಕಿತ್ಸೆಯ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದು, ಮೂರರಿಂದ ಆರು ತಿಂಗಳುಗಳ ವರೆಗೂ ಅವರು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗಬಹುದು. 

Asia Cup 2022 ಇಂದಿನಿಂದ ಸೂಪರ್‌-4: ಆಫ್ಘನ್‌-ಲಂಕಾ ಸೆಣಸು

ಏಷ್ಯಾಕಪ್‌ ಟಿ20 ಟೂರ್ನಿಯ ಹಾಂಕಾಂಗ್‌ ವಿರುದ್ಧದ ಪಂದ್ಯದ ವೇಳೆ ಜಡೇಜಾ ಗಾಯಗೊಂಡಿದ್ದಾಗಿ ತಿಳಿದುಬಂದಿದೆ. ಮೂಲಗಳ ಪ್ರಕಾರ ಜಡೇಜಾ 2022ರಲ್ಲಿ ಮತ್ತೆ ಕ್ರಿಕೆಟ್‌ ಆಡುವುದು ಅನುಮಾನ ಎನ್ನಲಾಗಿದೆ.

ಏಕದಿನ: ಆಸೀಸ್‌ ವಿರುದ್ಧ ಜಿಂಬಾಬ್ವೆಗೆ ರೋಚಕ ಜಯ

ಟೌನ್ಸ್‌ವಿಲ್ಲೆ: ಲೆಗ್‌ ಸ್ಪಿನ್ನರ್‌ ರಾರ‍ಯನ್‌ ಬರ್ಲ್‌ ಮನಮೋಹಕ ಬೌಲಿಂಗ್‌ ದಾಳಿ (3 ಓವರಲ್ಲಿ 10 ರನ್‌ಗೆ 5 ವಿಕೆಟ್‌) ನೆರವಿನಿಂದ ಆಸ್ಪ್ರೇಲಿಯಾ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ 3 ವಿಕೆಟ್‌ ಜಯ ಸಾಧಿಸಿ ಸಂಭ್ರಮಿಸಿದೆ. ಏಕದಿನ ಮಾದರಿಯಲ್ಲಿ ಇದು ಆಸ್ಪ್ರೇಲಿಯಾ ನೆಲದಲ್ಲಿ ಆಸ್ಪ್ರೇಲಿಯಾ ವಿರುದ್ಧ ಜಿಂಬಾಬ್ವೆಗೆ ಮೊದಲ ಗೆಲುವು. ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದ ಆಸ್ಪ್ರೇಲಿಯಾ 2-1ರಲ್ಲಿ ಸರಣಿ ತನ್ನದಾಗಿಸಿಕೊಂಡಿತು.

ಮೊದಲು ಬ್ಯಾಟ್‌ ಮಾಡಿದ ಆಸ್ಪ್ರೇಲಿಯಾ 31 ಓವರಲ್ಲಿ 141 ರನ್‌ಗೆ ಆಲೌಟ್‌ ಆಯಿತು. ಏಕಾಂಗಿ ಹೋರಾಟ ನಡೆಸಿದ ಡೇವಿಡ್‌ ವಾರ್ನರ್‌ 94 ರನ್‌ ಗಳಿಸಿದರು. ಜಿಂಬಾಬ್ವೆ 39 ಓವರಲ್ಲಿ 7 ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿತು. ನಾಯಕ ರೆಗಿಸ್‌ ಚಕಾಬ್ವಾ ಔಟಾಗದೆ 37, ಮರುಮನಿ 35 ರನ್‌ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸ್ಕೋರ್‌: 
ಆಸ್ಪ್ರೇಲಿಯಾ 31 ಓವರಲ್ಲಿ 141/10
ಜಿಂಬಾಬ್ವೆ 39 ಓವರಲ್ಲಿ 142/7