ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆಆಗಸ್ಟ್ 20ರಿಂದ ಏಷ್ಯಾಕಪ್ ಟೂರ್ನಿಯ ಅರ್ಹತಾ ಪಂದ್ಯಗಳು ಆರಂಭಒಂದು ಸ್ಥಾನಕ್ಕಾಗಿ ನಾಲ್ಕು ತಂಡಗಳ ನಡುವೆ ಪೈಪೋಟಿ

ದುಬೈ(ಆ.19): ಬಹುನಿರೀಕ್ಷಿತ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದೆ. ಏಷ್ಯಾಕಪ್ ಟೂರ್ನಿ ಆರಂಭಕ್ಕೂ ಮುನ್ನ ಶನಿವಾರ(ಆ.20)ದಿಂದ 4 ತಂಡಗಳು ಒಂದು ಸ್ಥಾನಕ್ಕೆ ಪೈಪೋಟಿ ನಡೆಸಲಿವೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್, ಸಿಂಗಾಪುರ, ಯುನೈಟೆಡ್ ಅರಬ್‌ ಎಮಿರೇಟ್ಸ್‌ ಹಾಗೂ ಕುವೈತ್ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಆಪ್ಘಾನಿಸ್ತಾನ ತಂಡಗಳು ಏಷ್ಯಾಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಿಕೊಂಡಿವೆ. ನ್ನು

ಅರ್ಹತಾ ಸುತ್ತಿನಲ್ಲಿ ನಾಲ್ಕು ತಂಡಗಳು 5 ದಿನಗಳ ಅವಧಿಯಲ್ಲಿ ಒಟ್ಟು 6 ಪಂದ್ಯಗಳನ್ನು ಆಡಲಿದ್ದು, ಈ ಎಲ್ಲಾ ಪಂದ್ಯಗಳು ಒಮಾನ್‌ನ ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಈ ಕ್ವಾಲಿಫೈಯರ್‌ನಲ್ಲಿ ಗೆಲುವು ಸಾಧಿಸಿದ ತಂಡವು, ಪ್ರಧಾನ ಸುತ್ತಿಗೆ ಲಗ್ಗೆಯಿಡಲಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಇರುವ ಗುಂಪಿನಲ್ಲಿ ಮೊದಲ ಸುತ್ತಿನ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದೆ. 2018ರಲ್ಲಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ತಂಡವು ಪ್ರಧಾನ ಸುತ್ತಿಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿಯ ಅರ್ಹತಾ ಸುತ್ತಿನ ಕೊನೆಯ ಪಂದ್ಯವು ಆಗಸ್ಟ್ 24ರಂದು ನಡೆಯಲಿದೆ.

ಇನ್ನು ಇದೇ ವೇಳೆ ಯುಎಇ ತಂಡವು ತನ್ನ ನೂತನ ಟಿ20 ತಂಡದ ನಾಯಕರನ್ನಾಗಿ ಸಿಪಿ ರಿಜ್ವಾನ್ ಅವರನ್ನು ನೇಮಿಸಿಕೊಂಡಿದೆ. ಆದರೆ ಸಾಕಷ್ಟು ಅನುಭವಿ ಆಟಗಾರ ಎನಿಸಿಕೊಂಡಿದ್ದ ಅಹಮದ್ ರಾಜಾ, ಯುಎಇ ಏಕದಿನ ತಂಡದ ನಾಯಕರಾಗಿಯೇ ಮುಂದುವರೆದಿದ್ದಾರೆ. ಇನ್ನು ಸಿಂಗಾಪುರ ತಂಡದ ವಿಚಾರಕ್ಕೆ ಬಂದರೆ, ಚುಟುಕು ಕ್ರಿಕೆಟ್‌ನಲ್ಲಿ ಸಿಂಗಾಪುರ ತಂಡವು ಸತತ 6 ಸೋಲುಗಳನ್ನು ಅನುಭವಿಸಿದೆ. ಇನ್ನುಳಿದಂತೆ ಕುವೈತ್ ತಂಡವು ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದು, ಕಳೆದ 4 ಪಂದ್ಯಗಳಲ್ಲಿ ಕುವೈತ್ ತಂಡವು ಗೆಲುವಿನ ನಗೆ ಬೀರಿದ್ದು, ಆತ್ಮವಿಶ್ವಾಸದಿಂದ ಬೀಗುತ್ತಿದೆ.

Asia Cup 2022: ಭಾರತ-ಪಾಕಿಸ್ತಾನ ಪಂದ್ಯದ ಟಿಕೆಟ್ ಸೋಲ್ಡೌಟ್‌

ಎಲ್ಲಿ ನೇರಪ್ರಸಾರ: ಏಷ್ಯಾಕಪ್‌ ಅರ್ಹತಾ ಸುತ್ತಿನ ಪಂದ್ಯಗಳ ನೇರ ಪ್ರಸಾರವು ಫ್ಯಾನ್ ಕೋಡ್‌ ಆ್ಯಪ್ ಮೂಲಕ ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಬಹುದಾಗಿದೆ.

ಅರ್ಹತಾ ಸುತ್ತಿನ ವೇಳಾಪಟ್ಟಿ ಹೀಗಿದೆ ನೋಡಿ

ಆಗಸ್ಟ್‌ 20: ಸಿಂಗಾಪುರ-ಹಾಂಕಾಂಗ್, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM
ಆಗಸ್ಟ್ 21: ಯುಎಇ - ಹಾಂಕಾಂಗ್, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM
ಆಗಸ್ಟ್‌ 22: ಯುಎಇ - ಸಿಂಗಾಪುರ, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM
ಆಗಸ್ಟ್ 23: ಕುವೈತ್ - ಹಾಂಕಾಂಗ್, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM
ಆಗಸ್ಟ್ 24: ಸಿಂಗಾಪುರ -ಕುವೈತ್, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 4:30 PM
ಆಗಸ್ಟ್ 24: ಹಾಂಕಾಂಗ್ - ಯುಎಇ, ಅಲ್ ಅಮಿರಾಟ್ ಕ್ರಿಕೆಟ್ ಸ್ಟೇಡಿಯಂ ಸಮಯ: 7:30 PM