ಇಂದಿನಿಂದ ಏಷ್ಯಾಕಪ್ ಹೋರಾಟ. ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ನಡುವಿನ ಹೋರಾಟಕ್ಕೆ ಕಾತರ ಹೆಚ್ಚಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ದುಬೈ(ಆ.27): ಏಷ್ಯಾಕಪ್ 2022 ಟೂರ್ನಿ ಇಂದಿನಿಂದ ಆರಂಭಗೊಳ್ಳುತ್ತಿದೆ. ಉದ್ಘಟನಾ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ಮುಖಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ದುಬೈ ಕ್ರೀಡಾಂಗಣದಲ್ಲಿ ಶ್ರೀಲಂಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿ ಬಳಿಕ ಚೇಸಿಂಗ್ ಮಾಡುವ ಲೆಕ್ಕಾಚಾರದಲ್ಲಿದ್ದೇವೆ. ಹೀಗಾಗಿ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಎಂದು ಆಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ ಹೇಳಿದ್ದಾರೆ. ತಂಡದಲ್ಲಿ ಉತ್ತಮ ಅಲ್ರೌಂಡರ್ಸ್ ಇದ್ದಾರೆ. ಹೀಗಾಗಿ ಗೆಲುವಿನ ವಿಶ್ವಾಸವಿದೆ ಎಂದಿದ್ದಾರೆ. ಇತ್ತ ಶ್ರೀಲಂಕಾ ನಾಯಕ ದಸೂನ್ ಶನಕ ನಾವೂ ಕೂಡ ಮೊದಲು ಬೌಲಿಂಗ್ ಮಾಡಲು ಇಚ್ಚಿಸಿದ್ದೆವು. 6 ಬ್ಯಾಟ್ಸ್‌ಮನ್, ಇಬ್ಬರು ಅಲ್ರೌಂಡರ್ ಹಾಗೂ ಮೂವರು ಬೌಲರ್‌ಗಳ ನಮ್ಮ ತಂಡ ದಿಟ್ಟ ಹೋರಾಟ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ಪ್ಲೇಯಿಂಗ್ 11
ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್(ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ10 ವರ್ಷದಲ್ಲಿ ಮೊದಲ ಬಾರಿಗೆ ಒಂದು ತಿಂಗಳು ಬ್ಯಾಟ್ ಮುಟ್ಟಿರಲಿಲ್ಲ..! ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
10 ವರ್ಷದಲ್ಲಿ ಮೊದಲ ಬಾರಿಗೆ ಒಂದು ತಿಂಗಳು ಬ್ಯಾಟ್ ಮುಟ್ಟಿರಲಿಲ್ಲ..! ವಿರಾಟ್ ಕೊಹ್ಲಿ ಹೀಗಂದಿದ್ದೇಕೆ?
ಆಫ್ಘಾನಿಸ್ತಾನ ಪ್ಲೇಯಿಂಗ್ 11
ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಕರೀಮ್ ಜನತ್, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಮುಜೀಬ್ ಉರ್ಹಕ್ಮಾನ್, ಫರೂಕ್ಲ್ ರಹಕ್ಮಾನ್
ದುಬೈ ಕ್ರೀಡಾಂಗಣದಲ್ಲಿ ಚೇಸಿಂಗ್ ಮಾಡಲು ಎಲ್ಲಾ ತಂಡಗಳು ಬಯಸುತ್ತದೆ. ಇದಕ್ಕೆ ಕಾರಣ 2021ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ 13 ಪಂದ್ಯಗಳ ಪೈಕಿ 12 ಪಂದ್ಯಗಳು ಚೇಸಿಂಗ್ ತಂಡ ಗೆಲುವು ಸಾಧಿಸಿದೆ. ಇದರಲ್ಲಿ ಇದರಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯವೂ ಸೇರಿದೆ. ಇಂದಿನ ವಾತಾವರಣ ಚೇಸಿಂಗ್‌ಗೆ ಹೆಚ್ಚಿನ ನೆರವು ನೀಡಲಿದೆ.
ಟಿ20 ಟೂರ್ನಿಯಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ಒಂದೇ ಬಾರಿ ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿದೆ. 2016ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈ ಹೋರಾಟ ನಡೆದಿತ್ತು. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ 6 ವಿಕೆಟ್ ಗೆಲುವು ದಾಖಲಿಸಿತ್ತು.
Asia Cup: ಪಾಕ್ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಲೀಕ್!
ಶ್ರೀಲಂಕಾ 2022ರಲ್ಲಿ ಆಡಿದ 11 ಟಿ20 ಪಂದ್ಯದಲ್ಲಿ ಕೇವಲ 2ರಲ್ಲಿ ಗೆಲುವು ಸಾಧಿಸಿದೆ. ಇನ್ನುಳಿದ 9 ಪಂದ್ಯಗಳನ್ನು ಸೋತಿದೆ. ಇತ್ತ ಆಫ್ಘಾನಿಸ್ತಾನ ಆಡಿದ 10 ಪಂದ್ಯದಳಲ್ಲಿ 6 ಪಂದ್ಯದಲ್ಲಿ ಗೆಲುವು ಸಾಧಿಸಿದರೆ, 4 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಗೆಲುವಿನ ಪ್ರತಿಶತ ನೋಡಿದರೆ ಆಫ್ಙಾನಿಸ್ತಾನ ಉತ್ತಮ ಸ್ಥಿತಿಯಲ್ಲಿದೆ. ಏಷ್ಯಾಕಪ್ ಟೂರ್ನಿಗೂ ಮೊದಲು ಐರ್ಲೆಂಡ್ ವಿರುದ್ದ 5 ಪಂದ್ಯಗಳ ಟಿ20 ಸರಣಿಯಲ್ಲಿ ಆಫ್ಘಾನಿಸ್ತಾನ 2-3 ಅಂತರದಲ್ಲಿ ಸರಣಿ ಸೋತಿದೆ. ಆದರೆ ಅತ್ಯುತ್ತಮ ಹೋರಾಟ ನೀಡಿದೆ.
