Ashes 2023 ನಿಧಾನ ಬೌಲಿಂಗ್: ಆಸೀಸ್, ಇಂಗ್ಲೆಂಡ್‌ನ 2 ಅಂಕ ಕಡಿತ
ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾಗೆ ಶಾಕ್
ನಿಧಾನಗತಿ ಬೌಲಿಂಗ್ಗಾಗಿ ತಲಾ 2 ಅಂಕ ಕಡಿತ
ಉಭಯ ತಂಡಗಳಿಗೂ ಪಂದ್ಯದ ಸಂಭಾವನೆಯ ಶೇ.40ರಷ್ಟುದಂಡ
ದುಬೈ(ಜೂ.22): ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ಗಾಗಿ ಆಸ್ಪ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ತಲಾ 2 ಅಂಕ ಕಡಿತಗೊಂಡಿದೆ. ಜೊತೆಗೆ ಉಭಯ ತಂಡಗಳಿಗೂ ಪಂದ್ಯದ ಸಂಭಾವನೆಯ ಶೇ.40ರಷ್ಟುದಂಡ ವಿಧಿಸಲಾಗಿದೆ.
ಮಂಗಳವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಎರಡೂ ತಂಡಗಳು ನಿಗದಿತ ಅವಧಿ ಮುಕ್ತಾಯದ ವೇಳೆಗೆ 2 ಓವರ್ ಕಡಿಮೆ ಎಸೆದಿತ್ತು. ಹೀಗಾಗಿ ಪಂದ್ಯದ ವಿಜೇತ ತಂಡ ಆಸೀಸ್ 12 ಅಂಕಗಳ ಬದಲು 10 ಅಂಕ ಪಡೆದಿದ್ದು, 2023-25ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಪಂದ್ಯದಲ್ಲೇ ಅಂಕ ಕಡಿತಕ್ಕೊಳಗಾಯಿತು. 2021-23ರ ಕೂಟದಲ್ಲಿ ಇಂಗ್ಲೆಂಡ್ ಒಟ್ಟು 12 ಅಂಕ ಕಡಿತಕ್ಕೊಳಗಾಗಿದ್ದರೆ, ಆಸೀಸ್ ಅಂಕ ಕಡಿತದಿಂದ ಪಾರಾಗಿತ್ತು.
ಟೆಸ್ಟ್ ರ‍್ಯಾಂಕಿಂಗ್: ನಂ.1 ಸ್ಥಾನಕ್ಕೇರಿದ ಜೋ ರೂಟ್
ದುಬೈ: ಇಂಗ್ಲೆಂಡ್‌ನ ತಾರಾ ಬ್ಯಾಟರ್ ಜೋ ರೂಟ್ ಐಸಿಸಿ ವಿಶ್ವ ಟೆಸ್ಟ್ ರ್ಯಾಂಕಿಂಗ್ನಲ್ಲಿ ಆಸ್ಪ್ರೇಲಿಯಾದ ಮಾರ್ನಸ್ ಲಬುಶೇನ್ರನ್ನು ಹಿಂದಿಕ್ಕಿ ಬ್ಯಾಟರ್ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ರೂಟ್ 5 ಸ್ಥಾನ ಮೇಲೇರಿದರೆ, ಲಬುಶೇನ್ 3ನೇ ಸ್ಥಾನಕ್ಕೆ ಕುಸಿದರು.
90ನೇ ಗೋಲು: ಸಕ್ರಿಯ ಫುಟ್ಬಾಲಿಗರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಚೆಟ್ರಿ!
3ನೇ ಸ್ಥಾನದಲ್ಲಿದ್ದ ಟ್ರ್ಯಾವಿಸ್ ಹೆಡ್ 4ನೇ, 2ನೇ ಸ್ಥಾನದಲ್ಲಿದ್ದ ಸ್ಟೀವ್ ಸ್ಮಿತ್ 6ನೇ ಸ್ಥಾನಕ್ಕೆ ಹಿಂಬಡ್ತಿ ಪಡೆದಿದ್ದಾರೆ. ಇದೇ ವೇಳೆ ಬೌಲರ್ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರ್.ಅಶ್ವಿನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ ಜಡೇಜಾ ನಂ.1, ಅಶ್ವಿನ್ ನಂ.2, ಅಕ್ಷರ್ ಪಟೇಲ್ 4ನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ ಅರ್ಹತಾ ಸುತ್ತು: ಒಮಾನ್ಗೆ 2ನೇ ಗೆಲುವು
ಹರಾರೆ: ಐಸಿಸಿ ಏಕದಿನ ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಒಮಾನ್ ಸತತ 2ನೇ ಗೆಲುವು ಸಾಧಿಸಿದೆ. ಮತ್ತೊಂದೆಡೆ ಐರ್ಲೆಂಡ್ ಸತತ 2ನೇ ಸೋಲನುಭವಿಸಿದೆ.
‘ಬಿ’ ಗುಂಪಿನ ಅರಂಭಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆದ್ದಿದ್ದ ಒಮಾನ್, ಬುಧವಾರ 2ನೇ ಪಂದ್ಯದಲ್ಲಿ ಯುಎಇ ವಿರುದ್ಧ 5 ವಿಕೆಟ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಯುಎಇ 8 ವಿಕೆಟ್ ಕಳೆದುಕೊಂಡು 227 ರನ್ ಕಲೆಹಾಕಿತು. ಅಯಾನ್ ಖಾನ್(58), ಅರವಿಂದ್(49) ತಂಡ ಕಡಿಮೆ ಮೊತ್ತಕ್ಕೆ ಕುಸಿಯದಂತೆ ನೋಡಿಕೊಂಡರು. ಸುಲಭ ಗುರಿ ಬೆನ್ನತ್ತಿದ ಒಮಾನ್ 46 ಓವರ್ಗಳಲ್ಲೇ ಗೆಲುವು ಸಾಧಿಸಿತು. ಆಖಿಬ್ 53, ಶೊಹೈಬ್ ಖಾನ್ ಔಟಾಗದೆ 52, ನದೀಂ 50 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಐರ್ಲೆಂಡ್‌ಗೆ 2ನೇ ಸೋಲು: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಐರ್ಲೆಂಡ್ ತಂಡ ಸ್ಕಾಟ್ಲೆಂಡ್ ವಿರುದ್ಧ 1 ವಿಕೆಟ್ ಸೋಲನುಭವಿಸಿತು. ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್, ಕರ್ಟಿಸ್ ಕ್ಯಾಂಫೆರ್(120) ಶತಕದ ನೆರವಿನಿಂದ 8 ವಿಕೆಟ್‌ಗೆ 286 ರನ್ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ ಕೊನೆ ಎಸೆತದಲ್ಲಿ ರೋಚಕವಾಗಿ ಜಯ ತನ್ನದಾಗಸಿಕೊಂಡಿತು. ಮೈಕಲ್ ಲೀಸ್‌್ಕ(ಔಟಾಗದೆ 91) ಗೆಲುವಿನ ರೂವಾರಿ ಎನಿಸಿಕೊಂಡರು.
ಏಷ್ಯಾಕಪ್: ಭಾರತ ‘ಎ’ ತಂಡ ಚಾಂಪಿಯನ್
ಮೊಂಗ್ ಕೊಕ್(ಹಾಂಗ್ ಕಾಂಗ್): ಮಹಿಳೆಯರ ಅಂಡರ್-23 ಉದಯೋನ್ಮುಖರ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗಿದೆ. ಬುಧವಾರ ನಡೆದ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 31 ರನ್ ಗೆಲುವು ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 7 ವಿಕೆಟ್‌ಗೆ 127 ರನ್ ಗಳಿಸಿತು. ಕರ್ನಾಟಕದ ವೃಂದಾ ದಿನೇಶ್ 29 ಎಸೆತದಲ್ಲಿ 36 ರನ್ ಗಳಿಸಿದರು. ಬಳಿಕ ರಾಜ್ಯದ ಶ್ರೇಯಾಂಕ ಪಾಟೀಲ್ 13 ರನ್‌ಗೆ 4 ವಿಕೆಟ್ ಕಬಳಿಸಿದ ಪರಿಣಾಮ ಬಾಂಗ್ಲಾ 19.2 ಓವರಲ್ಲಿ 96 ರನ್‌ಗೆ ಆಲೌಟ್ ಆಯಿತು.