ರೋಚಕ ಹಂತ ತಲುಪಿದ ಆ್ಯಷಸ್‌ ಸರಣಿಯ 5ನೇ ಟೆಸ್ಟ್ ಪಂದ್ಯಕೊನೆಯ ದಿನ ಯಾವುದೇ ಫಲಿತಾಂಶ ಬೇಕಿದ್ದರೂ ಹೊರಬೀಳಬಹುದುಸರಣಿಯಲ್ಲಿ 2-1ರ ಮುನ್ನಡೆಯಲ್ಲಿರುವ ಆಸ್ಟ್ರೇಲಿಯಾ

ಲಂಡನ್‌(ಜು.31): ಆ್ಯಷಸ್‌ ಸರಣಿಯ 5ನೇ ಟೆಸ್ಟ್ ರೋಚಕ ಘಟ್ಟ ತಲುಪಿದ್ದು, ಕೊನೆಯ ದಿನವಾದ ಸೋಮವಾರ ಆಸ್ಟ್ರೇಲಿಯಾಗೆ ಗೆಲ್ಲು 249 ರನ್‌, ಇಂಗ್ಲೆಂಡ್‌ಗೆ 10 ವಿಕೆಟ್‌ ಅಗತ್ಯವಿದೆ. 3ನೇ ದಿನದಂತ್ಯಕ್ಕೆ 9 ವಿಕೆಟ್‌ಗೆ 389 ರನ್‌ ಗಳಿಸಿದ್ದ ಇಂಗ್ಲೆಂಡ್‌, ಭಾನುವಾರ ಆ ಮೊತ್ತಕ್ಕೆ ಕೇವಲ 6 ರನ್‌ ಸೇರಿಸಿತು. ವೃತ್ತಿಬದುಕಿನ ಕೊನೆಯ ಪಂದ್ಯವಾಡುತ್ತಿರುವ ಸ್ಟುವರ್ಟ್‌ ಬ್ರಾಡ್‌ ಸಿಕ್ಸರ್‌ ಬಾರಿಸಿದರು. 395ಕ್ಕೆ ಆಲೌಟ್‌ ಆದ ಇಂಗ್ಲೆಂಡ್‌ ಆಸೀಸ್‌ ಗೆಲುವಿಗೆ 384 ರನ್‌ ಗುರಿ ನೀಡಿತು. 

ದೊಡ್ಡ ಗುರಿ ಬೆನ್ನತ್ತಲು ಇಳಿದ ಆಸೀಸ್‌ 4ನೇ ದಿನದಾಟ ಮಳೆಯಿಂದಾಗಿ ಸ್ಥಗಿತಗೊಳ್ಳುವ ವೇಳೆಗೆ ವಿಕೆಟ್‌ ನಷ್ಟವಿಲ್ಲದೆ 135 ರನ್‌ ಗಳಿಸಿತು. ಆರಂಭಿಕ ಬ್ಯಾಟರ್ ಉಸ್ಮಾನ್ ಖವಾಜ ಔಟಾಗದೆ 69 ಹಾಗೂ ಡೇವಿಡ್ ವಾರ್ನರ್‌ ಔಟಾಗದೆ 58 ರನ್‌ ಗಳಿಸಿದ್ದಾರೆ.

Scroll to load tweet…

ಕೊನೆಯ ದಿನದಾಟದ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ: ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ಈಗಾಗಲೇ ಪ್ಯಾಟ್‌ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು 2-1 ಅಂತರದ ಮುನ್ನಡೆ ಸಾಧಿಸಿದೆ. ಒಂದು ವೇಳೆ ಕೊನೆಯ ಟೆಸ್ಟ್ ಪಂದ್ಯವನ್ನು ಆಸೀಸ್‌ ಜಯಿಸಿದರೆ, ಆ್ಯಷಸ್‌ ಟೆಸ್ಟ್ ಸರಣಿಯನ್ನು 3-1 ಅಂತರದಲ್ಲಿ ಕೈವಶ ಮಾಡಿಕೊಳ್ಳಲಿದೆ. ಇನ್ನೊಂದೆಡೆ ಒಂದು ವೇಳೆ ಬೆನ್ ಸ್ಟೋಕ್ಸ್‌ ನೇತೃತ್ವದ ಇಂಗ್ಲೆಂಡ್ ತಂಡವು ಕೊನೆಯ ದಿನ ಆಸ್ಟ್ರೇಲಿಯಾದ ಎಲ್ಲಾ 10 ವಿಕೆಟ್ ಕಬಳಿಸಿದರೆ, 2-2 ಅಂತರದಲ್ಲಿ ಟೆಸ್ಟ್ ಸರಣಿಯನ್ನು ಸಮಬಲ ಸಾಧಿಸಲಿದೆ.

Stuart Broad: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್ ವೇಗಿ ಬ್ರಾಡ್ ದಿಢೀರ್ ಗುಡ್‌ಬೈ..!

ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್, ಉಸ್ಮಾನ್ ಖವಾಜ ಮಾತ್ರವಲ್ಲದೇ, ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್‌, ಟ್ರಾವಿಸ್ ಹೆಡ್‌, ಅಲೆಕ್ಸ್ ಕ್ಯಾರಿ ಹಾಗೂ ಮಿಚೆಲ್ ಮಾರ್ಷ್‌ ಚುರುಕಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಇನ್ನೊಂದೆಡೆ ಇಂಗ್ಲೆಂಡ್ ತಂಡದಲ್ಲಿ ಕೊನೆಯ ಟೆಸ್ಟ್‌ ಸ್ಟುವರ್ಟ್‌ ಬ್ರಾಡ್‌ ಹಾಗೂ ಅನುಭವಿ ವೇಗಿಗಳಾದ ಜೇಮ್ಸ್‌ ಆ್ಯಂಡರ್‌ಸನ್‌ ಜತೆಗೆ ಮಾರಕ ವೇಗಿಗಳಾದ ಕ್ರಿಸ್ ವೋಕ್ಸ್‌, ಮಾರ್ಕ್‌ ವುಡ್‌, ಆಸೀಸ್‌ ಬ್ಯಾಟರ್‌ಗಳನ್ನು ಬಲಿ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೀಗಾಗಿ ಒಂದು ವೇಳೆ ಪಂದ್ಯಕ್ಕೆ ಮಳೆ ಅಡ್ಡಿಯಾಗದಿದ್ದರೇ, ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಮನರಂಜನೆ ಸಿಗೋದಂತೂ ಗ್ಯಾರಂಟಿ.

ಸ್ಟುವರ್ಟ್‌ ಬ್ರಾಡ್‌ಗೆ ಗಾರ್ಡ್‌ ಆಫ್‌ ಆನರ್‌ ನೀಡಿದ ಆಸೀಸ್‌!

ಲಂಡನ್‌: ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ ಇಂಗ್ಲೆಂಡ್‌ ವೇಗಿ ಸ್ಟುವರ್ಟ್‌ ಬ್ರಾಡ್‌ಗೆ ಭಾನುವಾರ ಆಸ್ಟ್ರೇಲಿಯಾ ತಂಡ ಗಾರ್ಡ್‌ ಆಫ್‌ ಆನರ್‌ ನೀಡಿತು. 5ನೇ ಟೆಸ್ಟ್‌ನ 4ನೇ ದಿನದಾಟ ಆರಂಭಕ್ಕೂ ಮುನ್ನ ತಮ್ಮ ಸಹ ಆಟಗಾರ ಆ್ಯಂಡರ್‌ಸನ್‌ ಜೊತೆ ಬ್ಯಾಟಿಂಗ್‌ಗೆ ಆಗಮಿಸುವ ವೇಳೆ ಆಸ್ಟ್ರೇಲಿಯಾ ಆಟಗಾರರು ಬೌಂಡರಿ ಗೆರೆ ಬಳಿ ಎರಡು ಬದಿಗಳಲ್ಲಿ ನಿಂತು ಬ್ರಾಡ್‌ರನ್ನು ಸ್ವಾಗತಿಸುವ ಮೂಲಕ ಗೌರವಿಸಿದರು. ತಮ್ಮ 167ನೇ ಟೆಸ್ಟ್‌ ಆಡುತ್ತಿರುವ ಬ್ರಾಡ್‌ 602 ವಿಕೆಟ್‌ ಪಡೆದಿದ್ದಾರೆ.

Scroll to load tweet…