ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಸ್ಟುವರ್ಟ್ ಬ್ರಾಡ್‌5ನೇ ಆ್ಯಷಸ್ ಟೆಸ್ಟ್ ತಮ್ಮ ಪಾಲಿನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೆಂದ ಬ್ರಾಡ್2006ರಲ್ಲಿ ಏಕದಿನ, ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಬ್ರಾಡ್

ಲಂಡನ್(ಜು.30): ಇಂಗ್ಲೆಂಡ್‌ನ ಹಿರಿಯ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಶನಿವಾರ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದು, ಆಸ್ಟ್ರೇಲಿಯಾ ವಿರುದ್ಧ ಸದ್ಯ ನಡೆಯುತ್ತಿರುವ ಆ್ಯಷಸ್ 5ನೇ ಟೆಸ್ಟ್ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯ ಎಂದಿದ್ದಾರೆ. 3ನೇ ದಿನದಾಟ ಮುಕ್ತಾಯಗೊಂಡ ಬಳಿಕ ಪ್ರಸಾರಕರೊಂದಿಗೆ ಮಾತ ನಾಡಿದ ಬ್ರಾಡ್, ‘ಒಂದು ದಿನದ ಹಿಂದಷ್ಟೇ ನಿವೃತ್ತಿ ನಿರ್ಧಾರ ಕೈಗೊಂಡೆ. ಆ್ಯಷಸ್ ಸರಣಿ ಎಂದರೆ ನನಗೆ ಅಚ್ಚುಮೆಚ್ಚು. ಇದೇ ಸರಣಿ ಯಲ್ಲಿ ನಿವೃತ್ತಿ ಘೋಷಿಸಬೇಕು ಎನಿಸಿತು’ ಎಂದರು. 

2006ರಲ್ಲಿ ಏಕದಿನ, ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಬ್ರಾಡ್, 2007ರಲ್ಲಿ ಮೊದಲ ಟೆಸ್ಟ್ ಆಡಿದರು. 2014ರಲ್ಲಿ ಕೊನೆ ಬಾರಿಗೆ ಇಂಗ್ಲೆಂಡ್ ಪರ ಟಿ20 ಆಡಿದ್ದ ಬ್ರಾಡ್, ಕೊನೆಯ ಏಕದಿನ ಪಂದ್ಯವಾಡಿದ್ದು 2016ರಲ್ಲಿ. 167ನೇ ಟೆಸ್ಟ್ ಆಡುತ್ತಿರುವ ಬ್ರಾಡ್ 602 ವಿಕೆಟ್ ಕಬಳಿಸಿ, ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದಾರೆ.

Scroll to load tweet…

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ 600+ ವಿಕೆಟ್‌ ಕಬಳಿಸಿದ ಇಬ್ಬರು ಬೌಲರ್‌ಗಳ ಪೈಕಿ ಸ್ಟುವರ್ಟ್‌ ಬ್ರಾಡ್ ಕೂಡಾ ಒಬ್ಬರೆನಿಸಿದ್ದಾರೆ. ಇದೇ ಆ್ಯಷಸ್ ಟೆಸ್ಟ್ ಸರಣಿಯ ಕಳೆದ ಪಂದ್ಯದಲ್ಲಿ ಸ್ಟುವರ್ಟ್‌ ಬ್ರಾಡ್‌, 600+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದರು. ಈ ಮೊದಲು ಇಂಗ್ಲೆಂಡ್ ಅನುಭವಿ ಜೇಮ್ಸ್ ಆ್ಯಂಡರ್‌ಸನ್‌, ಟೆಸ್ಟ್ ಕ್ರಿಕೆಟ್‌ನಲ್ಲಿ 600+ ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿದ್ದಾರೆ. 2015ರ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದ ಪಂದ್ಯದಲ್ಲಿ 15 ರನ್‌ ನೀಡಿ 8 ವಿಕೆಟ್ ಕಬಳಿಸಿದ್ದು, ಸ್ಟುವರ್ಟ್‌ ಬ್ರಾಡ್, ಟೆಸ್ಟ್‌ ಕ್ರಿಕೆಟ್‌ ಇನಿಂಗ್ಸ್‌ವೊಂದರಲ್ಲಿ ತೋರಿದ ಶ್ರೇಷ್ಠ ಬೌಲಿಂಗ್ ಪ್ರದರ್ಶನ ಎನಿಸಿಕೊಂಡಿದೆ.

ಏಕದಿನ ವಿಶ್ವಕಪ್‌ಗೆ ಮಳೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಬಿಸಿಸಿಐ ಮಾಸ್ಟರ್ ಪ್ಲ್ಯಾನ್‌!

ಇನ್ನು ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಸ್ಪೋಟಕ ಬ್ಯಾಟರ್ ಯುವರಾಜ್ ಸಿಂಗ್, ಇದೇ ಸ್ಟುವರ್ಟ್‌ ಬ್ರಾಡ್‌ಗೆ 6 ಎಸೆತಗಳಲ್ಲಿ ಸತತ 6 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದರು. ಈ ಕ್ರಿಕೆಟ್‌ ಕ್ಷಣವನ್ನು ಯಾವೊಬ್ಬ ಕ್ರಿಕೆಟ್‌ ಪ್ರೇಮಿಯೂ ಮರೆಯಲು ಸಾಧ್ಯವಿಲ್ಲ.

ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 5 ಬೌಲರ್‌ಗಳು:

1. ಮುತ್ತಯ್ಯ ಮುರಳೀಧರನ್: 800 ವಿಕೆಟ್
2. ಶೇನ್‌ ವಾರ್ನ್‌: 708
3. ಜೇಮ್ಸ್ ಆ್ಯಂಡರ್‌ಸನ್: 690*
4. ಅನಿಲ್ ಕುಂಬ್ಳೆ: 619
5. ಸ್ಟುವರ್ಟ್ ಬ್ರಾಡ್: 602*

ಆ್ಯಷಸ್ ಟೆಸ್ಟ್‌: 2ನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೃಹತ್ ಮೊತ್ತ

ಲಂಡನ್: ಆ್ಯಷಸ್ ಸರಣಿಯ 5ನೇ ಟೆಸ್ಟ್ ರೋಚಕ ಘಟ್ಟ ತಲು ಪಿದ್ದು, 2ನೇ ಇನ್ನಿಂಗ್ಸ್‌ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಬೃಹತ್ ಮೊತ್ತ ಕಲೆಹಾಕಿರುವ ಆತಿಥೇಯ ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಗೆದ್ದು ಸರಣಿಯನ್ನು 2-2ರಲ್ಲಿ ಡ್ರಾ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. 3ನೇ ದಿನ 2ನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದಿನದಂತ್ಯಕ್ಕೆ 9 ವಿಕೆಟ್‌ಗೆ 398 ರನ್ ಗಳಿಸಿ, ಒಟ್ಟು377 ರನ್ ಮುನ್ನಡೆ ಸಾಧಿಸಿದೆ. 

ತಾನೇ ತೋಡಿಕೊಂಡ ಹಳ್ಳಕ್ಕೆ ತಾವೇ ಬಿದ್ದರಾ ಶುಭ್‌ಮನ್ ಗಿಲ್..?

ಮೊದಲ ಅವಧಿಯಲ್ಲಿ 25 ಓವರಲ್ಲಿ 130 ರನ್ ಚಚ್ಚಿದ ಇಂಗ್ಲೆಂಡ್, 2ನೇ ಅವಧಿಯಲ್ಲೂ ಆಸ್ಟ್ರೇಲಿಯಾದ ಬೌಲರ್‌ಗಳನ್ನು ದಂಡಿಸಿ 135 ರನ್ ಕಲೆಹಾಕಿತು. 3ನೇ ಅವಧಿಯಲ್ಲಿ 124 ರನ್ ಸೇರಿಸಿತು. ಅಗ್ರ-6 ಬ್ಯಾಟರ್‌ಗಳ ಪೈಕಿ ಹ್ಯಾರಿ ಬ್ರೂಕ್(07) ಹೊರತುಪಡಿಸಿ ಉಳಿದೆಲ್ಲಾ ಬ್ಯಾಟರ್‌ಗಳು ಉತ್ತಮ ಕೊಡುಗೆ ನೀಡಿದರು. ಕ್ರಾಲಿ ಹಾಗೂ ಡಕೆಟ್(42) ಮೊದಲ ವಿಕೆಟ್‌ಗೆ 79 ರನ್ ಸೇರಿಸಿದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಸ್ಟೋಕ್ಸ್, ಕ್ರಾಲಿ(73) ಜೊತೆ ಸೇರಿ 61 ರನ್ ಜೊತೆಯಾಟವಾಡಿದರು. ಸ್ಟೋಕ್ಸ್ 42 ರನ್ ಗಳಿಸಿ ಔಟಾದ ಬಳಿಕ ತಂಡವನ್ನು ಮೇಲೆತ್ತುವ ಜವಾಬ್ದಾರಿ ಜೋ ರೂಟ್ ಹೆಗಲಿಗೆ ಬಿತ್ತು. 106 ಎಸೆತದಲ್ಲಿ 11 ಬೌಂಡರಿ, 1 ಸಿಕ್ಸರ್‌ನೊಂದಿಗೆ 91 ರನ್ ಗಳಿಸಿ ಔಟಾದ ರೂಟ್, ಶತಕ ವಂಚಿತರಾದರು. ಬೇರ್‌ಸ್ಟೋವ್ 103 ಎಸೆತದಲ್ಲಿ 11 ಬೌಂಡರಿಯೊಂದಿಗೆ 78 ರನ್ ಸಿಡಿಸಿ ವಿಕೆಟ್ ಕಳೆದುಕೊಂಡರು.