ಐಸಿಸಿ ಟಿ೨೦ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಹೆಡ್, ರಾಜಾ, ಬಾಬರ್ ಮತ್ತು ಅರ್ಶದೀಪ್ ನಾಮನಿರ್ದೇಶಿತರಾಗಿದ್ದಾರೆ. ಹೆಡ್ 15 ಪಂದ್ಯಗಳಲ್ಲಿ 539 ರನ್, ರಾಜಾ 24 ಪಂದ್ಯಗಳಲ್ಲಿ 573 ರನ್ ಮತ್ತು 24 ವಿಕೆಟ್, ಬಾಬರ್ 24 ಪಂದ್ಯಗಳಲ್ಲಿ 738 ರನ್ ಮತ್ತು ಅರ್ಶದೀಪ್ 18 ಪಂದ್ಯಗಳಲ್ಲಿ 36 ವಿಕೆಟ್ ಪಡೆದ ಸಾಧನೆಗೈದಿದ್ದಾರೆ.

ದುಬೈ: ನಾವೆಲ್ಲರೂ ಇದೀಗ ಈ ವರ್ಷದ ಕೊನೆಯ ಹಂತದಲ್ಲಿದ್ದೇವೆ. ಇದೀಗ ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ನಾಲ್ವರು ಆಟಗಾರರ ಹೆಸರು ನಾಮನಿರ್ದೇಶನಗೊಂಡಿದೆ. ಈ ನಾಲ್ವರು ಆಟಗಾರರ ಪೈಕಿ ಓರ್ವ ಭಾರತೀಯ, ಓರ್ವ ಆಸ್ಟ್ರೇಲಿಯಾ ಆಟಗಾರ, ಓರ್ವ ಜಿಂಬಾಬ್ವೆ ಆಟಗಾರ ಹಾಗೂ ಓರ್ವ ಪಾಕಿಸ್ತಾನ ಆಟಗಾರ ಸ್ಥಾನ ಪಡೆದುಕೊಂಡಿದ್ದಾರೆ. ಈ ನಾಲ್ವರು ಆಟಗಾರರು 2024ರಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. 

2024ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿರುವ ಆ ನಾಲ್ವರು ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ

ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಭಾರತವನ್ನು ಕಾಡಿದ ಕಾಂಗರೂಗಳು, 333 ಬೃಹತ್ ಮುನ್ನಡೆ

1. ಟ್ರ್ಯಾವಿಸ್ ಹೆಡ್:
ಆಸ್ಟ್ರೇಲಿಯಾದ ಸ್ಪೋಟಕ ಎಡಗೈ ಬ್ಯಾಟರ್ ಟ್ರ್ಯಾವಿಸ್ ಹೆಡ್ 2024ರ ಕ್ಯಾಲೆಂಡರ್ ವರ್ಷದಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ್ದಾರೆ. 2024ರಲ್ಲಿ ಟ್ರ್ಯಾವಿಸ್ ಹೆಡ್ ಆಸ್ಟ್ರೇಲಿಯಾ ಪರ 15 ಟಿ20 ಪಂದ್ಯಗಳನ್ನಾಡಿ 178.47ರ ಸ್ಟ್ರೈಕ್‌ರೇಟ್‌ನಲ್ಲಿ 539 ರನ್ ಸಿಡಿಸಿ ಮಿಂಚಿದ್ದಾರೆ.

2. ಸಿಖಂದರ್ ರಾಜಾ:
ಜಿಂಬಾಬ್ವೆ ಮೂಲದ ಸ್ಟಾರ್ ಆಲ್ರೌಂಡರ್ ಸಿಖಂದರ್ ರಾಜಾ ಅವರ ಪಾಲಿಗೆ 2024ರ ವರ್ಷ ತುಂಬಾ ಸ್ಮರಣೀಯ ವರ್ಷ ಎನಿಸಿಕೊಂಡಿತು. ಈ ವರ್ಷ ರಾಜಾ ಜಿಂಬಾಬ್ವೆ ಪರ 24 ಟಿ20 ಪಂದ್ಯಗಳನ್ನು ಆಡಿ 573 ರನ್ ಸಿಡಿಸಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಬೌಲಿಂಗ್‌ನಲ್ಲಿ ರಾಜಾ 24 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

Scroll to load tweet…

3. ಬಾಬರ್ ಅಜಂ:
ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಂ ಕೂಡಾ 2024ರಲ್ಲಿ ರನ್ ರಾಶಿಯನ್ನೇ ಗುಡ್ಡೆಹಾಕಿದ್ದಾರೆ. 2024ರಲ್ಲಿ ಬಾಬರ್ ಅಜಂ ಪಾಕಿಸ್ತಾನ ಪರ 24 ಟಿ20 ಪಂದ್ಯಗಳನ್ನಾಡಿ 738 ರನ್ ಸಿಡಿಸಿದ್ದಾರೆ.

ಬಾಕ್ಸಿಂಗ್ ಡೇ ಟೆಸ್ಟ್: ಹಲವು ದಿಗ್ಗಜ ವೇಗಿಗಳನ್ನು ಹಿಂದಿಕ್ಕಿ ಹೊಸ ಇತಿಹಾಸ ಬರೆದ ಜಸ್ಪ್ರೀತ್ ಬುಮ್ರಾ!

4. ಅರ್ಶದೀಪ್ ಸಿಂಗ್:
ಟೀಂ ಇಂಡಿಯಾ ಎಡಗೈ ವೇಗಗಿ ಅರ್ಶದೀಪ್ ಸಿಂಗ್, ಐಸಿಸಿ ವರ್ಷದ ಟಿ20 ಕ್ರಿಕೆಟಿಗ ರೇಸ್‌ನಲ್ಲಿರುವ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅರ್ಶದೀಪ್ ಸಿಂಗ್ ಭಾರತ ಟಿ20 ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ಅರ್ಶದೀಪ್ ಸಿಂಗ್ ಭಾರತ ಪರ 18 ಟಿ20 ಪಂದ್ಯಗಳನ್ನಾಡಿ 36 ವಿಕೆಟ್ ಕಬಳಿಸಿದ್ದಾರೆ.

ಈ ನಾಲ್ವರು ಆಟಗಾರರ ಪೈಕಿ ಯಾರಿಗೆ 2024ರ ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ ಸಿಗಬಹುದು ಎನ್ನುವುದನ್ನು ಕಮೆಂಟ್ ಮಾಡಿ.