ಅಪ್ಪನ ದಾರಿಯಲ್ಲಿ ಮಗ, ರಣಜಿ ಪಾದಾರ್ಪಣೆ ಪಂದ್ಯದಲ್ಲೇ ಅರ್ಜುನ್ ತೆಂಡುಲ್ಕರ್ ಶತಕ!
34 ವರ್ಷದ ಹಿಂದೆ ಸಚಿನ್ ತೆಂಡುಲ್ಕರ್ ರಣಜಿ ಟ್ರೋಫಿಯ ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಬುಧವಾರ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ತಂದೆಯ ರೀತಿಯ ಸಾಧನೆ ಮಾಡಿದ್ದು, ಗೋವಾ ಪರವಾಗಿ ರಣಜಿ ಪಾದಾರ್ಪಣಾ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ.
ಪಣಜಿ (ಡಿ.14): ಡಿಸೆಂಬರ್ ತಿಂಗಳು ಎಂದಾಗ ನೆನಪಾಗುವುದು ಸಚಿನ್ ತೆಂಡುಲ್ಕರ್, 34 ವರ್ಷಗಳ ಹಿಂದೆ ರಣಜಿಯ ಪಾದಾರ್ಪಣೆ ಪಂದ್ಯದಲ್ಲಿ ಬಾರಿಸಿದ ಶತಕ. 1988ರ ಡಿಸೆಂಬರ್‌ನಲ್ಲಿ ಗುಜರಾತ್ ವಿರುದ್ಧ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ಸಚಿನ್ ತೆಂಡುಲ್ಕರ್ ಆಕರ್ಷಕವಾಗಿ ಶತಕ ಸಿಡಿಸಿದ್ದರು. ಅದಾದ ಬಳಿಕ ಅವರು ಭಾರತ ಹಾಗೂ ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿರುವುದು ಇತಿಹಾಸ. ಇದಾದ 34 ವರ್ಷಗಳ ಬಳಿಕ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ತಮ್ಮ 23ನೇ ವರ್ಷದಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಶತಕ ಕೂಡ ಡಿಸೆಂಬರ್ ತಿಂಗಳಲ್ಲಿಯೇ ಬಂದಿರುವುದು ವಿಶೇಷ. ಈ ವರ್ಷ ಗೋವಾ ಪರವಾಗಿ ಆಡುವ ಮೂಲಕ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿರುವ ಅರ್ಜುನ್ ತೆಂಡುಲ್ಕರ್, ರಾಜಸ್ಥಾನ ವಿರುದ್ಧ ಅಜೇಯ 112 ರನ್ ಸಿಡಿಸಿದ್ದಾರೆ. ಸರ್ಜುನ್ ತೆಂಡುಲ್ಕರ್ ಹಾಗೂ ಸುಯಾಶ್ ಪ್ರಭುದೇಸಾಯಿ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಗೋವಾ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್ ಪೇರಿಸಿದೆ.
ಸುಯಾಶ್‌ರಿಂದಲೂ ಶತಕ ಸಾಧನೆ: ರಾಜಸ್ಥಾನ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಅರ್ಜುನ್ ತೆಂಡುಲ್ಕರ್ ಅಲ್ಲದೆ, ಸುಯಾಶ್ ಪ್ರಭುದೇಸಾಯಿ ಕೂಡ ಶತಕ ಬಾರಿಸಿದ್ದಾರೆ. ಚಹಾ ವಿರಾಮದ ವೇಳೆಗೆ ಗೋವಾ ತಂಡ 5 ವಿಕೆಟ್‌ಗೆ 410 ರನ್ ಬಾರಿಸಿದ್ದು, ಸುಯಶ್ ಪ್ರಭುದೇಸಾಯಿ ಹಾಗೂ ಅರ್ಜುನ್ ತೆಂಡುಲ್ಕರ್ ಕ್ರೀಸ್‌ನಲ್ಲಿದ್ದಾರೆ. 357 ಎಸೆತಗಳನ್ನು ಎದುರಿಸಿರುವ ಸುಯಾಶ್ ಪ್ರಭುದೇಸಾಯಿ 172 ರನ್ ಬಾರಿಸಿದ್ದು, ದ್ವಿಶತಕ ಬಾರಿಸುವ ಹಾದಿಯಲ್ಲಿದ್ದಾರೆ. ಇನ್ನೊಂಡೆ ಅರ್ಜುನ್ ತೆಂಡುಲ್ಕರ್ 195 ಎಸೆತಗಳಲ್ಲಿ 112 ರನ್ ಬಾರಿಸಿದ್ದಾರೆ. ಇದರಲ್ಲಿ 15 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್‌ಗಳು ಸೇರಿವೆ. 6ನೇ ವಿಕೆಟ್‌ಗೆ ಈ ಜೋಡಿ ಈವರೆಗೂ 209 ರನ್‌ಗಳ ಜೊತೆಯಾಟವಾಡಿದೆ.
ಇದಕ್ಕೂ ಮುನ್ನ ಸ್ನೇಹಲ್ ಕುಥುಂಕರ್ 104 ಎಸೆತಗಳಲ್ಲಿ 59 ರನ್ ಸಿಡಿಸಿದ್ದರು. ಇನ್ನೊಂದೆಡೆ ಅನಿಕೇತ್ ಚೌಧರಿ ರಾಜಸ್ಥಾನ ಪರವಾಗಿ ಯಶಸ್ವಿ ಬೌಲರ್ ಎನಿಸಿದ್ದರ. 31 ಓವರ್‌ಗಳ ದಾಳಿ ನಡೆಸಿದ ಸ್ನೇಹಲ್, 72 ರನ್ ನೀಡಿ 2 ವಿಕೆಟ್ ಉರುಳಿಸಿದ್ದಾರೆ. ಉಳಿದಂತೆ ಅರಾಫತ್ ಖಾನ್, ಕಮಲೇಶ್ ನಾಗರಕೋಟಿ ಹಾಗೂ ಮಾನವ್ ಸುತಾರ್ ತಲಾ ಒಂದೊಂದು ವಿಕೆಟ್ ಉರುಳಿಸಿದ್ದಾರೆ.
Ranji Trophy: ಗೋವಾ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಅರ್ಜುನ್ ತೆಂಡುಲ್ಕರ್ ಪಾದಾರ್ಪಣೆ
ಐಪಿಎಲ್‌ನಲ್ಲಿ ಮುಂಬೈ ಪರ ಆಡುವ ಅರ್ಜುನ್: ಅರ್ಜುನ್ ತೆಂಡುಲ್ಕರ್ ಆಲ್ ರೌಂಡರ್. ವೇಗದ ಬೌಲಿಂಗ್‌ನೊಂದಿಗೆ ಅಲ್ಪ ಪ್ರಮಾಣದ ಬ್ಯಾಟಿಂಗ್ ಕೂಡ ಮಾಡುತ್ತಾರೆ. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಭಾಗವಾಗಿದ್ದಾರೆ. ಆದರೆ, ಈವರೆಗೂ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ. ಇನ್ನು ಅವರಿ ಆಡಿರುವ 9 ಟಿ20 ಪಂದ್ಯಗಳಿಂದ 12 ವಿಕೆಟ್ ಉರುಳಿಸಿದ್ದಾರೆ. 10 ರನ್‌ಗೆ 4 ವಿಕೆಟ್ ಉರುಳಿಸಿದ್ದು ಶ್ರೇಷ್ಠ ಸಾಧನೆಯಾಗಿದೆ.ಲಿಸ್ಟ್ ಎ ಕ್ರಿಕೆಟ್ ನಲ್ಲಿ ಆಡಿದ 7 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ. 32 ರನ್‌ಗಳಿಗೆ 2 ವಿಕೆಟ್ ಪಡೆದದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.
ಸಚಿನ್ ಪುತ್ರನಿಗೆ ಸಿಗುತ್ತಿಲ್ಲ ಅವಕಾಶ, ಮುಂಬೈ ತೊರೆದು ಗೋವಾ ಪರ ಆಡಲು ಸಜ್ಜಾದ ಅರ್ಜುನ್ ತೆಂಡುಲ್ಕರ್!
ಗುಜರಾತ್ ವಿರುದ್ಧ ಅಜೇಯ 100 ರನ್ ಬಾರಿಸಿದ್ದ ಸಚಿನ್: ವಿಶ್ವ ಕಂಡ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಒಬ್ಬರಾದ ಸಚಿನ್ ತೆಂಡುಲ್ಕರ್ ತಮ್ಮ ಮೊದಲ ರಣಜಿ ಪಂದ್ಯವನ್ನು ಗುಜರಾತ್ ವಿರುದ್ಧ 1988ರ ಡಿಸೆಂಬರ್ 11 ರಂದು ಮುಂಬೈ ಪರವಾಗಿ ಆಡಿದ್ದರು. ಆಗ ಕೇವಲ 15 ವರ್ಷ ವಯಸ್ಸಿನ ಸಚಿನ್ 100 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನ ಬಳಿಕ ಸಚಿನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಭಾರತದಿಂದ ಶತಕ ಗಳಿಸಿದ ಅತ್ಯಂತ ಕಿರಿಯ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಆ ಬಳಿಕ ಸಚಿನ್ ತೆಂಡುಲ್ಕರ್ ದುಲೀಪ್ ಟ್ರೋಫಿ ಮತ್ತು ಇರಾನಿ ಟ್ರೋಫಿಯ ತಮ್ಮ ಪಾದಾರ್ಪಣಾ ಪಂದ್ಯದಲ್ಲೂ ಶತಕ ಬಾರಿಸಿದ್ದರು. ತಮ್ಮ 15ನೇ ವಯಸ್ಸಿನಲ್ಲಿ ಕೇವಲ 129 ಎಸೆತಗಳಲ್ಲಿ ಸಚಿನ್ ಶತಕ ಬಾರಿಸಿದ್ದರು. ಇದರಲ್ಲಿ 12 ಬೌಂಡರಿ ಸೇರಿದ್ದವು. ಸಚಿನ್‌ಗೆ 2ನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಈ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು.