Asianet Suvarna News Asianet Suvarna News

ಭಾರತ ಲಾಕ್‌ಡೌನ್; ಕತ್ತರಿ ಹಿಡಿದು ಕೊಹ್ಲಿ ಹೇರ್‌ ಕಟ್ಟಿಂಗ್ ಮಾಡಿದ ಪತ್ನಿ ಅನುಷ್ಕಾ!

ಕ್ರಿಕೆಟ್ ಸರಣಿ, ಅಭ್ಯಾಸ, ಜಾಹೀರಾತು, ಪ್ರವೋಶನ್ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಭಾರತ ಲಾಕ್‌ಡೌನ್‌ನಿಂದ   ಇದೇ ಮೊದಲ ಬಾರಿಗೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಹೀಗೆ ಮನೆಯಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ವಿಶ್ರಾಂತಿ ಸಮಯದಲ್ಲಿ ಹೊಸ ಪ್ರಯತ್ನ ಮಾಡಿದ್ದಾರೆ. ಪತ್ನಿ ಅನುಷ್ಕಾ, ಕೊಹ್ಲಿ ಹೇರ್ ಕತ್ತರಿ ಹೊಸ ಹೇರ್ ಸ್ಟೈಲ್ ಮಾಡಿದ್ದಾರೆ.
 

Anushka Sharma turns Virat Kohli hairstylist during India Lock down
Author
Bengaluru, First Published Mar 28, 2020, 3:42 PM IST

ನವದೆಹಲಿ(ಮಾ.28): ಲಾಕ್‌ಡೌನ್‌ನಿಂದ ಟೀಂ ಇಂಡಿಯಾ ಕ್ರಿಕೆಟಿಗರು ಮನೆಯೊಳಗೆ ಕೂತ ಅಭಿಮಾನಿಗಳು ಹಾಗೂ ಭಾರತೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸುರಕ್ಷತೆ ಹಾಗೂ ಆರೋಗ್ಯಕ್ಕಾಗಿ ಮನೆಯೊಳಗೆ ಇರಲು ಮನವಿ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳಲ್ಲಿ ಹಲವು ಮನವಿ ಮಾಡಿಕೊಂಡಿದ್ದಾರೆ. ಇದೀಗ ಇವರು ತಮ್ಮ ವಿಶ್ರಾಂತಿ ಸಮಯದಲ್ಲಿ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಲಾಕ್‌ಡೌನ್‌ನಿಂದ ಎಲ್ಲವೂ ಕ್ಲೂಸ್, ಹೀಗಾಗಿ ಕೊಹ್ಲಿಯ ಹೇರ್‌ಕಟ್ಟಿಂಗ್ ಮಾಡಿದ್ದಾರೆ.

ಅನುಷ್ಕಾ ಶರ್ಮಾ ಅಡುಗೆ ಮನೆ ಕತ್ತರಿ ಹಿಡಿದು ಕೊಹ್ಲಿ ಹೇರ್ ಕಟ್ ಮಾಡಿದ್ದಾರೆ. ಇನ್ನು ಕೊಹ್ಲಿ ನನ್ನ ಪತ್ನಿಯಿಂದ ಉತ್ತಮ ಹೇರ್ ಸ್ಟೈಲ್ ಎಂದಿದ್ದಾರೆ. ಅನುಷ್ಕಾ ಶರ್ಮಾ, ಕೊಹ್ಲಿ ಹೇರ್ ಕಟ್ಟಿಂಗ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಕೆಲ ಕ್ಷಣಗಳಲ್ಲೇ ಲಕ್ಷಕ್ಕೂ ಹೆಚ್ಚು ಜನರು ಲೈಕ್ಸ್ ಹಾಗೂ ಕಮೆಂಟ್ ಮಾಡಿದ್ದಾರೆ.

 

 
 
 
 
 
 
 
 
 
 
 
 
 

Meanwhile, in quarantine.. 💇🏻‍♂💁🏻‍♀

A post shared by AnushkaSharma1588 (@anushkasharma) on Mar 27, 2020 at 9:59pm PDT

ಹೇರ್ ಕಟ್ಟಿಂಗ್ ವಿಡಿಯೋ ಮೂದಲು ಕೊಹ್ಲಿ ಭಾರತೀಯ ಜನತೆಯಲ್ಲಿ ಮನೆಯಲ್ಲೇ ಇರಲು ಮನವಿ ಮಾಡಿದ್ದರು. ನಾನು ಕ್ರಿಕೆಟಿಗನಾಗಿ ಈ ಮಾತನ್ನು ಹೇಳುತ್ತಿಲ್ಲ, ಈ ದೇಶದ ಪ್ರಜೆಯಾಗಿ ಹೇಳುತ್ತಿದ್ದೇನೆ. ಲಾಕ್‌ಡೌನ್ ಆದೇಶವಿದ್ದರೂ, ಕರ್ಫ್ಯೂ ಇದ್ದರೂ ಹೆಚ್ಚಿನವರು ಪಾಲಿಸುತ್ತಿಲ್ಲ. ಗುಂಪುಗುಂಪಾಗಿ ಓಡಾಡುತ್ತಿದ್ದಾರೆ. ನಾವು ವೈರಸ್ ಹರಡುವಿಕೆ ತಡೆಯುವ ಕುರಿತು ಗಂಭೀರವಾಗಿ ಆಲೋಚಿಲ್ಲ. ಕೊರೋನಾ ವೈರಸ್ ಸುಲಭವಾಗಿ ತೊಲಗುವುದಿಲ್ಲ. ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದರು.
 

Follow Us:
Download App:
  • android
  • ios