Asianet Suvarna News Asianet Suvarna News

#MissingHubby: ಭಾವನಾತ್ಮಕ ಫೋಸ್ಟ್ ಶೇರ್ ಮಾಡಿದ ವಿರಾಟ್ ಕೊಹ್ಲಿ ಮಡದಿ ಅನುಷ್ಕಾ ಶರ್ಮಾ..!

ವಿರಾಟ್ ಕೊಹ್ಲಿಗೆ ಭಾವನಾತ್ಮಕ ಸಂದೇಶ ಹಂಚಿಕೊಂಡ ಅನುಷ್ಕಾ ಶರ್ಮಾ
* ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದ ಅನುಷ್ಕಾ ಶರ್ಮಾ
* ಟಿ20 ಸರಣಿಯನ್ನಾಡಲು ಭಾರತ ತಂಡ ಕೂಡಿಕೊಂಡ ವಿರಾಟ್ ಕೊಹ್ಲಿ

Anushka Sharma Misses Hubby Virat Kohli Too Much Pens Sweet heart touching Note kvn
Author
First Published Sep 18, 2022, 1:10 PM IST

ಬೆಂಗಳೂರು(ಸೆ.18): ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಭಾರತದ ತಾರಾ ದಂಪತಿಗಳ ಪೈಕಿ ಅಗ್ರಗಣ್ಯರಾಗಿ ಗುರುತಿಸಿಕೊಂಡಿದ್ದಾರೆ. ಏಷ್ಯಾಕಪ್ ಟೂರ್ನಿ ಮುಕ್ತಾಯವಾಗುತ್ತಿದ್ದಂತೆಯೇ ಈ ಜೋಡಿ ಆಸ್ಟ್ರೇಲಿಯಾ ಎದುರಿನ ಸರಣಿಗೂ ಮುನ್ನ ಸಿಕ್ಕ ಬಿಡುವನ್ನು ಈ ಜೋಡಿ ಎಂಜಾಯ್ ಮಾಡಿತ್ತು. ವಿರುಷ್ಕಾ ಜೋಡಿಯು ಅಭಿಮಾನಿಗಳ ನೆಚ್ಚಿನ ಜೋಡಿಗಳಲ್ಲಿ ಒಂದು ಎನಿಸಿಕೊಂಡಿದೆ.

ಇದೀಗ 'ಚಕ್ಡಾ ಎಕ್ಸ್‌ಪ್ರೆಸ್‌' ಸಿನೆಮಾದಲ್ಲಿ ನಟಿಸುತ್ತಿರುವ ಅನುಷ್ಕಾ ಶರ್ಮಾ, ತಮ್ಮ ಪತಿ ವಿರಾಟ್ ಕೊಹ್ಲಿಯನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಭಾವನಾತ್ಮಕವಾಗಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಅನುಷ್ಕಾ ಶರ್ಮಾ, 'ಚಕ್ಡಾ ಎಕ್ಸ್‌ಪ್ರೆಸ್‌' ಸಿನಿಮಾದ ಶೂಟಿಂಗ್‌ಗಾಗಿ ಇಂಗ್ಲೆಂಡ್‌ ತೆರಳಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಕೂಡಾ, ಆಸ್ಟ್ರೇಲಿಯಾ ವಿರುದ್ದ ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಂಡಿದ್ದು, ಈಗಾಗಲೇ ಟೀಂ ಇಂಡಿಯಾ ಜತೆ ಮೊಹಾಲಿಗೆ ಬಂದಿಳಿದಿದ್ದಾರೆ.

ಈ ವ್ಯಕ್ತಿ ಜತೆಗಿದ್ದರೇ, ಇಡೀ ಜಗತ್ತು ಮತ್ತಷ್ಟು ಹೊಳಪು, ರೋಮಂಚನಕಾರಿ, ಹೆಚ್ಚು ಮೋಜು ಹಾಗೂ ಇರುವ ಸ್ಥಳವು ಮತ್ತಷ್ಟು ಸುಂದರವಾಗಿರುವಂತೆ ಭಾಸವಾಗುತ್ತದೆ. ಅದು ಬಯೋಬಬಲ್‌ನಂತಹ ಹೋಟೆಲ್‌ನಲ್ಲಿದ್ದಾಗಲೂ ಸಹಾ ಸುಂದರವಾಗಿರುತ್ತದೆ. ಮಿಸ್ಸಿಂಗ್‌ ಹಬ್ಬಿ ಟೂ ಮಚ್ ಎಂದು ಭಾವನಾತ್ಮಕವಾಗಿ ಅನುಷ್ಕಾ ಶರ್ಮಾ ಬರೆದುಕೊಂಡಿದ್ದಾರೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಏಷ್ಯಾಕಪ್ ಟೂರ್ನಿ ಮುಗಿಯುತ್ತಿದ್ದಂತೆಯೇ ಪತ್ನಿಯನ್ನು ಭೇಟಿಯಾಗಲು ದುಬೈನಿಂದ ಲಂಡನ್‌ಗೆ ಹಾರಿದ್ದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಕೆಲವು ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ಕೆಲ ಅಮೂಲ್ಯ ಕ್ಷಣಗಳನ್ನು ಒಟ್ಟಾಗಿ ಕಳೆದಿದ್ದರು.

 
 
 
 
 
 
 
 
 
 
 
 
 
 
 

A post shared by Virat Kohli (@virat.kohli)

ಅನುಷ್ಕಾ ಶರ್ಮಾ, ಸದ್ಯ ಲಂಡನ್‌ನಲ್ಲಿಯೇ ಬೀಡುಬಿಟ್ಟಿದ್ದು, ಚಕ್ಡಾ ಎಕ್ಸ್‌ಪ್ರೆಸ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿ ಜೀವನಾಧಾರಿತ ಚಿತ್ರ 'ಚಕ್ಡಾ ಎಕ್ಸ್‌ಪ್ರೆಸ್‌' ಸಿನಿಮಾದಲ್ಲಿ ಅನುಷ್ಕಾ ಶರ್ಮಾ, ಜೂಲನ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಕ್ಡಾ ಎಕ್ಸ್‌ಪ್ರೆಸ್‌ ಸಿನಿಮಾ ಆರಂಭವಾಗಿ 4 ವರ್ಷಗಳೇ ಕಳೆದಿವೆ. ಅನುಷ್ಕಾ ಶರ್ಮಾ ತಮ್ಮ ಪುತ್ರಿ ವಾಮಿಕಾಗೆ ಜನ್ಮ ನೀಡಿದ ಬಳಿಕ ತೆರೆ ಕಾಣಲಿರುವ ಮೊದಲ ಸಿನೆಮಾ ಇದಾಗಲಿದೆ. 

'ಎಂದೆಂದಿಗೂ ನಿಮ್ಮ ಜತೆಗಿರುತ್ತೇನೆ'; ಕಿಂಗ್ ಕೊಹ್ಲಿಗೆ ಮುದ್ದಾದ ಸಂದೇಶ ರವಾನಿಸಿದ ಅನುಷ್ಕಾ ಶರ್ಮಾ

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಆಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಶತಕ ಸಿಡಿಸಿದ ಬಳಿಕ ಮಾತನಾಡಿದ್ದ ವಿರಾಟ್ ಕೊಹ್ಲಿ, 'ಕಳೆದ ಎರಡೂವರೆ ವರ್ಷ ನನಗೆ ಹಲವು ಪಾಠಗಳನ್ನು ಕಲಿಸಿದೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ನನ್ನ ಶತಕದ ಬರ ನೀಗಲಿದೆ ಎಂದು ಭಾವಿಸಿರಲಿಲ್ಲ. ಕಠಿಣ ಸಮಯದಲ್ಲಿ ನನ್ನೊಂದಿಗೆ ನನ್ನ ತಂಡ ನಿಂತಿದೆ. ಶತಕ ಬಾರಿಸುತ್ತಿಲ್ಲ ಎನ್ನುವ ಬಗ್ಗೆ ಹೊರಗೆ ಸಾಕಷ್ಟು ಚರ್ಚೆಯಾಗುತ್ತಿತ್ತು ಎಂದು ನನಗೆ ಗೊತ್ತು. ನಾನಿಲ್ಲಿ ಇಂದು ನಿಂತಿದ್ದೇನೆ ಎಂದರೆ ಅದಕ್ಕೆ ಒಬ್ಬ ವ್ಯಕ್ತಿ ಪ್ರಮುಖ ಕಾರಣ. ಅದು ನನ್ನ ಪತ್ನಿ ಅನುಷ್ಕಾ. ಈ ಶತಕ ಆಕೆ ಹಾಗೂ ನಮ್ಮ ಪುತ್ರಿ ವಾಮಿಕಾಗೆ ಅರ್ಪಿಸುವೆ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅನುಷ್ಕಾ ನನ್ನ ಜೊತೆಗಿದ್ದಾರೆ. ಅವರಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ ಎಂದು ಹೇಳಿದ್ದರು.

ಇದಾದ ಬಳಿಕ ವಿರಾಟ್ ಕೊಹ್ಲಿಯ ಮಾತಿಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಪ್ರತಿಕ್ರಿಯೆ ನೀಡಿದ್ದ ಅನುಷ್ಕಾ ಶರ್ಮಾ, ವಿರಾಟ್ ಶತಕ ಸಿಡಿಸಿ ಸಂಭ್ರಮಿಸುತ್ತಿರುವ ಫೋಟೋದೊಂದಿಗೆ, ಯಾವುದೇ ಹಾಗೂ ಎಂತಹದ್ದೇ ಸಂದರ್ಭದಲ್ಲೂ ನಾನು ನಿಮ್ಮ ಜತೆಗಿರುತ್ತೇನೆ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಈ ಪೋಸ್ಟ್‌ ಕ್ರಿಕೆಟ್‌ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಸ್ವತಃ ವಿರಾಟ್ ಕೊಹ್ಲಿ ಕೂಡಾ ಕಾಮೆಂಟ್‌ನಲ್ಲಿ ಹಾರ್ಟ್‌ ಎಮೋಜಿ ಹಾಕಿ ಪ್ರತಿಕ್ರಿಯಿಸಿದ್ದರು.

Follow Us:
Download App:
  • android
  • ios