Asianet Suvarna News Asianet Suvarna News

ಲೌಕ್‌ಡೌನ್ ವೇಳೆ ನೆಟ್ ಪ್ರಾಕ್ಟೀಸ್; ವಿರಾಟ್‌ಗೆ ಬೌನ್ಸರ್ ಎಸೆದ ಅನುಷ್ಕಾ!

ಲಾಕ್‌ಡೌನ್ ಕಾರಣ ಮನೆಯೊಳಗೆ ಬಂಧಿಯಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದಾರೆ. ವಿಶೇಷ ಅಂದರೆ ಅನುಷ್ಕಾ ಶರ್ಮಾ ಬೌನ್ಸರ್ ಎಸೆದಿದ್ದಾರೆ. ಅನುಷ್ಕಾ ಕೂಡ ಬ್ಯಾಟಿಂಗ್ ಮಾಡಿ ಕೊಹ್ಲಿಗೆ ಟಿಪ್ಸ್ ನೀಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
 

Anushka shaarma bowls a Bouncer to Virat kohli during lockdown net practice
Author
Bengaluru, First Published May 16, 2020, 8:28 PM IST
  • Facebook
  • Twitter
  • Whatsapp

ಮುಂಬೈ(ಮೇ.16);  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭ್ಯಾಸ ಆರಂಭಿಸಿದ್ದಾರೆ. ಲಾಕ್‌ಡೌನ್ ಕಾರಣ ಮನೆಯೊಳಗೆ ಇದ್ದ ಕೊಹ್ಲಿ ಇದೀಗ ಹೊರಬಂದು ಅಭ್ಯಾಸ ಆರಂಭಿಸಿದ್ದಾರೆ. ಇತ್ತ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಬ್ಯಾಟಿಂಗ್ ಟಿಪ್ಸ್ ನೀಡುತ್ತಿದ್ದಾರೆ. ಇಷ್ಟೇ ಅಲ್ಲ ಬೌನ್ಸರ್ ಎಸೆತದ ಎಸೆದು ಕೊಹ್ಲಿಗೆ ಸಂಪೂರ್ಣ ಅಭ್ಯಾಸ ಮಾಡಿಸುತ್ತಿದ್ದಾರೆ. 

ಪ್ರಧಾನಿ ಪರಿಹಾರ ನಿಧಿ ಬಳಿಕ ಮುಂಬೈ ಪೊಲೀಸ್‌ಗೆ ದೇಣಿಕೆ ನೀಡಿದ ಕೊಹ್ಲಿ-ಅನುಷ್ಕಾ!

ಮುಂಬೈನಲ್ಲಿರುವ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕ್ರಿಕೆಟ್ ಆಡಿದ್ದಾರೆ. ಮೊದಲು ಅನುಷ್ಕಾ ಶರ್ಮಾ ಬ್ಯಾಟಿಂಗ್ ಮಾಡಿದ್ದಾರೆ. ಪ್ರತಿ ಎಸೆತ ಎದುರಿಸದ ಮೇಲೆ ಕೊಹ್ಲಿಗೆ ಈ ರೀತಿ ಬ್ಯಾಟಿಂಗ್ ಮಾಡಬೇಕು ಎಂದು ಅನುಷ್ಕಾ ಶರ್ಮಾ ಪತಿ ಕೊಹ್ಲಿಗೆ ಹೇಳಿದ್ದಾರೆ. ಅನುಷ್ಕಾ ಬ್ಯಾಟಿಂಗ್ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ್ದಾರೆ.

 

ಲಾಕ್‌ಡೌನ್ ಪರಿಣಾಮ; ಸುದೀರ್ಘ ವರ್ಷಗಳಿಂದಿದ್ದ ಕೊಹ್ಲಿ ಬಿಯರ್ಡ್ ಸ್ಟೈಲ್ ಚೇಂಜ್!.

ವಿರಾಟ್ ಕೊಹ್ಲಿಗೆ ಅನುಷ್ಕಾ ಬೌನ್ಸರ್ ಎಸೆತ ಹಾಕಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕ್ರಿಕೆಟ್ ಆಡುವುದನ್ನು ಸನಿಹದ ಅಪಾರ್ಟ್‌ಮೆಂಟ್‌ನಿಂದ ವಿಡಿಯೋ ಮಾಡಲಾಗಿದೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಷ್ಟೇ ಅಲ್ಲ ಹಲವು ದಿನಗಳ ಬಳಿಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡುವ ಅವಕಾಶ ಸಿಕ್ಕಿತು ಎಂದು ಸಂತಸ ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios