Asianet Suvarna News Asianet Suvarna News

ಲಾಕ್‌ಡೌನ್ ಪರಿಣಾಮ; ಸುದೀರ್ಘ ವರ್ಷಗಳಿಂದಿದ್ದ ಕೊಹ್ಲಿ ಬಿಯರ್ಡ್ ಸ್ಟೈಲ್ ಚೇಂಜ್!

ಟೀಂ ಇಂಡಿಯಾ ವಿರಾಟ್ ಕೊಹ್ಲಿ ಸುದೀರ್ಘ ವರ್ಷಗಳಿಂದ ಲೈಟ್ ಬಿಯರ್ಡ್ ಸ್ಟೈಲ್‌ನಲ್ಲೇ ಮಿಂಚುತ್ತಿದ್ದಾರೆ. ಹೇರ್ ಸ್ಟೈಲ್ ಹಲವು ಬಾರಿ ಬದಲಿಸಿದರೂ ಬಿಯರ್ಡ್ ಸ್ಟೈಲ್ ಹಾಗೇ ಉಳಿಸಿಕೊಂಡಿದ್ದರು. ಆದರೆ ಲಾಕ್‌ಡೌನ್ ಪರಿಣಾಮದಿಂದ ಕೊಹ್ಲಿ ಹಲವು ವರ್ಷಗಳ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ.  ಇಲ್ಲಿದೆ ಕೊಹ್ಲಿ ನೂತನ ಸ್ಟೈಲ್ ವಿಡಿಯೋ

Team India captain Virat kohli change his beard style during lockdown
Author
Bengaluru, First Published Apr 19, 2020, 7:45 PM IST
  • Facebook
  • Twitter
  • Whatsapp

ದೆಹಲಿ(ಏ.19): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎಂದ ತಕ್ಷಣವೇ ಸ್ಟೈಲೀಶ್ ಲುಕ್ ಕಣ್ಣ ಮುಂದೆ ಬರುತ್ತೆ. ಲೈಟ್ ಬಿಯರ್ಡ್ ಸ್ಟೈಲ್ ಕೊಹ್ಲಿ ಹಲವು ವರ್ಷಗಳಿಂದ ಉಳಿಸಿಕೊಂಡಿದ್ದಾರೆ. ಕೊಹ್ಲಿ ಪೂರ್ಣ ಪ್ರಮಾಣದ ನಾಯಕತ್ವ ವಹಿಸಿಕೊಳ್ಳುವ ಮೊದಲೇ ಬಿಯರ್ಡ್ ಸ್ಟೈಲ್‌ನಲ್ಲಿ ಮಿಂಚುತ್ತಿದ್ದರು. ಯಾರೇ ಹೇಳಿದರೂ ಕೊಹ್ಲಿ ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿಲ್ಲ. ಆದರೆ ಲಾಕ್‌ಡೌನ್‌ನಿಂದ ಮನೆಯೊಳಗೆ ಇರುವ ವಿರಾಟ್ ಕೊಹ್ಲಿ ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ.

ಕೊಹ್ಲಿ ಬೌಂಡರಿ ಬಾರಿಸು ಎಂದ ಪತ್ನಿ ಅನುಷ್ಕಾ!...

ಕ್ವಾರಂಟೈನ್ ಸಮಯದಲ್ಲಿ ಸ್ಟೈಲ್ ಬದಲಿಸುವ ಮೂಲಕ ನಿಮ್ಮೆಲ್ಲರನ್ನು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿಡುವುಡು ಉತ್ತಮ ಎಂದಿರುವ ಕೊಹ್ಲಿ ತಾವೇ ಖುದ್ದಾಗಿ ತಮ್ಮ ಬಿಯರ್ಡ್ ಸ್ಟೈಲ್ ಬದಲಿಸಿದ್ದಾರೆ. ಟ್ರಿಮ್ಮರ್ ಮೂಲಕ ಕೊಹ್ಲಿ ಬಿಯರ್ಡ್ ಸ್ಟೈಲ್ ಇದೀಗ ಫ್ರೆಂಚ್ ಬಿಯರ್ಡ್ ಆಗಿದೆ. ಕೊಹ್ಲಿ ಸ್ಟೈಲ್ ಚೇಂಜ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

 

ಹೊಸ ಲುಕ್ ಪ್ರಯತ್ನಿಸುತ್ತಿರುವುದಾಗಿ ಹೇಳಿದ ಕೊಹ್ಲಿ ಸೈಡ್ ಬಿಯರ್ಡ್ ಟ್ರಿಮ್ ಮಾಡಿದ್ದಾರೆ. ಕೊಹ್ಲಿ ಹೊಸ ಸ್ಟೈಲ್‌ಗೆ ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಪ್ರತಿಕ್ರಿಯೆಸಿದ್ದಾರೆ. ಮೊದಲ ಬಿಳಿ ಗಡ್ಡ ತೆಗೆದರೆ ಉತ್ತಮ ಎಂದು ಪೀಟರ್ಸ್ ಹೇಳಿದ್ದಾರೆ. ಕೊಹ್ಲಿ ಹೊಸ ಲುಕ್‌ಗೆ ಅಭಿಮಾನಿಗಳಿ ಕೂಡ ಪ್ರತಿಕ್ರಿಯಿಸಿದ್ದಾರೆ. ಹಲವರು ಚೆನ್ನಾಗಿದೆ ಎಂದರೆ ಇನ್ನೂ ಕೆಲವರು ಹಳೇ ಸ್ಟೈಲ್ ಉತ್ತಮವಾಗಿತ್ತು ಎಂದಿದ್ದಾರೆ. 

Follow Us:
Download App:
  • android
  • ios