* ಚೆನ್ನೈ ಜತೆಗಿನ ದಶಕದ ಸಂಬಂಧಕ್ಕೆ ರವೀಂದ್ರ ಜಡೇಜಾ ಗುಡ್ ಬೈ?* ಇನ್ಸ್ಟಾಗ್ರಾಮ್ನಲ್ಲಿ ಚೆನ್ನೈ ತಂಡವನ್ನ ಅನ್‌ಫಾಲೋ ಮಾಡಿದ ಜಡ್ಡು* 10 ವರ್ಷದಿಂದ ಚೆನ್ನೈ ತಂಡದ ಭಾಗವಾಗಿರೋ ರವೀಂದ್ರ ಜಡೇಜಾ
ಚೆನ್ನೈ(ಜು.09): 2022ನೇ ಐಪಿಎಲ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಪಾಲಿಗೆ ಅನ್ಲಕ್ಕಿ ಸೀಸನ್. ಗ್ರೂಪ್ ಸ್ಟೇಜ್ನಲ್ಲೇ ಹೊರಬಿದ್ದು ತೀವ್ರ ಮುಖಭಂಗ ಅನುಭವಿಸಿದ್ದಲ್ಲದೇ, ಅನೇಕ ವಿವಾದಗಳು ಸಿಎಸ್ಕೆ ತಂಡವನ್ನ ಸುತ್ತಿಕೊಂಡಿದ್ವು. ಟೂರ್ನಿ ಮಧ್ಯದಲ್ಲೇ ನಾಯಕತ್ವ ತೊರೆದ ವಿಚಾರ ರವೀಂದ್ರ ಜಡೇಜಾ (Ravindra Jadeja) ಹಾಗೂ ಸಿಎಸ್ಕೆ ನಡುವೆ ಎಲ್ಲವೂ ಸರಿಯಿಲ್ಲ. ಸಮ್ಥಿಂಗ್ ರಾಂಗ್ ಅನ್ನೋ ಮೆಸೇಜ್ ರವಾನಿಸಿತ್ತು. ಈಗ ಆ ರಾಂಗ್ ರೈಟ್ ಆಗಿದೆ. ಎಂ ಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರವೀಂದ್ರ ಜಡೇಜಾ ನಡುವಿನ ಕೋಲ್ಡ್ವಾರ್ ನಿಜವಾಗಿದ್ದು, ಜಡೇಜಾ ಸಿಎಸ್ಕೆ ಜೊತೆಗಿನ ದಶಕದ ಸಂಬಂಧಕ್ಕೆ ಗುಡ್ಬೈ ಹೇಳಲು ಸಜ್ಜಾಗಿದ್ದಾರೆ.
ಹೌದು, 2023ರ ಐಪಿಎಲ್ನಲ್ಲಿ ಜಡ್ಡು ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬರೋದು ಬಹುತೇಕ ಖಚಿತವಾಗಿದೆ. ಹೊಸ ಫ್ರಾಂಚೈಸಿ ಪರ ವಿಶ್ವದ ನಂ.1 ಆಲ್ರೌಂಡರ್ ಕಣಕ್ಕಿಳಿಯಲಿದ್ದಾರೆ ಎನ್ನಲಾಗುತ್ತಿದೆ. ಇದನ್ನ ನಾವು ಹೇಳ್ತಿಲ್ಲ. ಬದಲಿಗೆ ಸ್ವತಃ ಅಂತಹದೊಂದು ಸುಳಿವನ್ನು ಜಡೇಜಾನೇ ನೀಡಿದ್ದಾರೆ.
ಸಿಎಸ್ಕೆಯ ಎಲ್ಲಾ ಪೋಸ್ಟ್ ಡಿಲೀಟ್ ಮಾಡಿದ ಜಡೇಜಾ:
ಅನಿರೀಕ್ಷಿತ ಬೆಳವಣಿಗೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸಿದ್ದ ಜಡ್ಡು, ಅಚ್ಚರಿ ರೀತಿಯಲ್ಲಿ ಟೂರ್ನಿ ಮಧ್ಯದಲ್ಲೇ ಕ್ಯಾಪ್ಟನ್ಸಿಗೆ ಗುಡ್ಬೈ ಹೇಳಿದ್ರು. ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವಲ್ಲಿ ಫೇಲಾದ ಕಾರಣಕ್ಕೆ ಚೆನ್ನೈ ಫ್ರಾಂಚೈಸಿ ಕ್ಯಾಪ್ಟನ್ಸಿ ತ್ಯಜಿಸುವಂತೆ ಹೇಳಿತ್ತು. ಇದು ಜಡ್ಡುರ ಅಸಾಮಾಧಾನಕ್ಕೆ ಕಾರಣವಾಗಿತ್ತು. ಇದೇ ಬೇಸರದಲ್ಲಿ ಜಡೇಜಾ ಇನ್ಸ್ಟಾಗ್ರಾಮ್ನಲ್ಲಿ ಚೆನ್ನೈ ತಂಡವನ್ನ ಅನ್‌ಫಾಲೋ ನಮ್ಮ ನಡುವೆ ಎಲ್ಲವೂ ಸರಿಯಿಲ್ಲ ಅನ್ನೋ ಮೆಸೇಜ್ ರವಾನಿಸಿದ್ರು. ಇದೀಗ ಅದಕ್ಕೆ ಪುಷ್ಠಿ ದೊರೆತಿದೆ.
ಐಪಿಎಲ್ ಮುಗಿದ ಎರಡು ತಿಂಗಳ ಬಳಿಕ ರವೀಂದ್ರ ಜಡೇಜಾ, ಸಿಎಸ್ಕೆ ತಂಡಕ್ಕೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನ ಡಿಲೀಟ್ ಮಾಡಿದ್ದಾರೆ. ಆ ಮೂಲಕ ಸಿಎಸ್ಕೆ ಜೊತೆ ಭಿನ್ನಪ್ರಾಯ ಇರೋದನ್ನ ಒಪ್ಪಿಕೊಂಡಂತಾಗಿದ್ದು, ನೆಚ್ಚಿನ ಫ್ರಾಂಚೈಸಿ ತೊರೆಯುವ ಸುಳಿವು ನೀಡಿದ್ದಾರೆ. 10 ವರ್ಷದಿಂದ ಚೆನ್ನೈ ತಂಡದ ಭಾಗವಾಗಿರೋ ರವೀಂದ್ರ ಜಡೇಜಾ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ರು. ಅದ್ಭುತ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂಲಕ ಸಿಎಸ್ಕೆ ಚಾಂಪಿಯನ್ ಪಟ್ಟಕ್ಕೇರಲು ಶ್ರಮಿಸಿದ್ದಾರೆ. ಸದ್ಯ ಇಂತಹ ಸ್ಟಾರ್ ಪ್ಲೇಯರ್ ಸಿಎಸ್ಕೆ ಸಂಬಂಧ ಕಳೆದುಕೊಂಡಿದ್ದೆ ಆದಲ್ಲಿ, ಎಂ ಎಸ್ ಧೋನಿ ಸೈನ್ಯಕ್ಕೆ ದೊಡ್ಡ ಹಿನ್ನಡೆಯಾಗಲಿದೆ.
ಸತತ 13 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಮೊದಲ ನಾಯಕ ಎನಿಸಿಕೊಂಡ ರೋಹಿತ್ ಶರ್ಮಾ!
15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಸಂದರ್ಭದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ನಾಯಕ ರವೀಂದ್ರ ಜಡೇಜಾ ಗಾಯಗೊಂಡಿದ್ದರಿಂದ ಟೂರ್ನಿಯ ಮಧ್ಯದಲ್ಲಿಯೇ ತಂಡದ ಹೊರಬಿದ್ದಿದ್ದರು.ಈ ವಿಚಾರವನ್ನು ಫ್ರಾಂಚೈಸಿ ತಿಳಿಸಿದ್ದರೂ, ತಂಡದ ಆಡಳಿತದೊಂದಿಗೆ ಮನಸ್ತಾಪವಾಗಿದ್ದರಿಂದಲೇ ಅವರು ಐಪಿಎಲ್ ತೊರೆದಿದ್ದಾರೆ ಎಂದು ವರದಿಯಾಗಿದೆ. ಸುಮಾರು 10 ವರ್ಷಗಳಿಂದ ತಂಡದ ಭಾಗವಾಗಿದ್ದ ಅವರನ್ನು ಇನ್‌ಸ್ಟಾಗ್ರಾಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನ್‌ಫಾಲೋ ಮಾಡಿದ್ದು ಈ ವದಂತಿಗಳಿಗೆ ಪುಷ್ಠಿ ಒದಗಿಸಿತ್ತು. ಈ ಬಾರಿ ಅವರಿಗೆ ತಂಡದ ನಾಯಕತ್ವ ವಹಿಸಿಲಾಗಿದ್ದರೂ ನಾಯಕತ್ವದ ಜೊತೆ ಆಟದಲ್ಲೂ ಅವರು ಸಂಪೂರ್ಣ ವಿಫಲರಾಗಿದ್ದರು. ಇದೇ ಕಾರಣಕ್ಕೆ ಅವರ ಮೇಲೆ ಫ್ರಾಂಚೈಸಿಯು ಅಸಮಾಧಾನಗೊಂಡಿದ್ದು, ಗಾಯದ ಕಾರಣ ನೀಡಿ ತಂಡದಿಂದಲೇ ಹೊರಹಾಕಲಾಗಿದೆ ಎಂದು ಸಾಮಾಜಿಕ ತಾಣಗಳಲ್ಲಿ ಹಲವರು ಪ್ರತಿಕ್ರಿಯಿಸಿದ್ದರು.
