ಢಾಕಾ(ಜ.23): ತಮೀಮ್‌ ಇಕ್ಬಾಲ್‌ (50) ಅರ್ಧಶತಕ ಹಾಗೂ ಮೆಹದಿ ಹಸನ್‌ (4-25) ಉತ್ತಮ ಪ್ರದರ್ಶನದ ನೆರವಿನಿಂದ ಬಾಂಗ್ಲಾದೇಶ, ವೆಸ್ಟ್‌ ಇಂಡೀಸ್‌ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್‌ಗಳ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ. 

ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 148 ರನ್‌ಗಳಿಗೆ ಆಲೌಟ್‌ ಆಯಿತು. ಬಾಂಗ್ಲಾ 33.2 ಓವರಲ್ಲಿ 3 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು.

ಭಾರತ ಎದುರಿನ ಮೊದಲೆರಡು ಟೆಸ್ಟ್ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ..!

ಸ್ಕೋರ್‌: ವಿಂಡೀಸ್‌ 148/10, ಬಾಂಗ್ಲಾ 149/3

ಲಂಕಾಕ್ಕೆ ಮ್ಯಾಥ್ಯೂಸ್‌ ಶತಕದ ಆಸರೆ

ಗಾಲೆ: ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್‌ ಅಜೇಯ ಶತಕದ ನೆರವಿನಿಂದ ಶ್ರೀಲಂಕಾ, ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಗೌರವ ಮೊತ್ತದತ್ತ ಮುನ್ನಡೆದಿದೆ. 

ಶುಕ್ರವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡುತ್ತಿರುವ ಲಂಕಾ, ಮ್ಯಾಥ್ಯೂಸ್‌ (107*) ಹೋರಾಟದಿಂದ ದಿನದಂತ್ಯಕ್ಕೆ 4 ವಿಕೆಟ್‌ಗೆ 229 ರನ್‌ ಗಳಿಸಿದೆ. ಇಂಗ್ಲೆಂಡ್‌ ಪರ ವೇಗಿ ಜೇಮ್ಸ್‌ ಆ್ಯಂಡರ್ಸನ್‌ 3 ವಿಕೆಟ್‌ ಪಡೆದರು.

ಸ್ಕೋರ್‌: ಶ್ರೀಲಂಕಾ 229/4 (ಮೊದಲ ದಿನದಂತ್ಯಕ್ಕೆ)