ಬೆಂಗಳೂರು(ಡಿ.11): ಭಾರತ ತಂಡದ ತಾರಾ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಶುಕ್ರವಾರ ಇಲ್ಲಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯಲ್ಲಿ ಫಿಟ್ನೆಸ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಆಸ್ಪ್ರೇಲಿಯಾಗೆ ತೆರಳುವ ಸಾಧ್ಯತೆ ಇದೆ. 

ಐಪಿಎಲ್‌ನಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾಗಿದ್ದ ರೋಹಿತ್‌, ಆಸ್ಪ್ರೇಲಿಯಾ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗೆ ಅಲಭ್ಯರಾಗಿದ್ದರು. ರೋಹಿತ್‌ ಎನ್‌ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಒಂದೊಮ್ಮೆ ಆಸ್ಪ್ರೇಲಿಯಾಗೆ ತೆರಳಲು ಅನುಮತಿ ದೊರೆತರೂ ಅವರು ಅಲ್ಲಿ ತಲುಪಿದ ಬಳಿಕ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಹೀಗಾಗಿ ಮೊದಲ 2 ಟೆಸ್ಟ್‌ ಆಡಲು ಸಾಧ್ಯವಾಗುವುದಿಲ್ಲ. ಕೊನೆಯ 2 ಟೆಸ್ಟ್‌ಗೆ ಆಯ್ಕೆಗೆ ಲಭ್ಯರಾಗಬಹುದು ಎನ್ನಲಾಗಿದೆ.

ಮಂದಗತಿಯಲ್ಲಿ ಬೌಲಿಂಗ್ ಮಾಡಿ ದಂಡತೆತ್ತ ಟೀಂ ಇಂಡಿಯಾ..!

ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ನಿತ್ಯ 30000 ಪ್ರೇಕ್ಷಕರು

ಮೆಲ್ಬರ್ನ್‌: ಭಾರತ ಹಾಗೂ ಆಸ್ಪ್ರೇಲಿಯಾ ನಡುವೆ ಡಿ.26ರಿಂದ ಆರಂಭಗೊಳ್ಳಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ಗೆ ನಿತ್ಯ 30000 ಪ್ರೇಕ್ಷಕರಿಗೆ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ ಎಂದು ವಿಕ್ಟೋರಿಯಾ ಕ್ರಿಕೆಟ್‌ ಸಂಸ್ಥೆ ತಿಳಿಸಿದೆ. 

ಈ ಮೊದಲು ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ನಿತ್ಯ 25000 ಪ್ರೇಕ್ಷಕರಿಗೆ ಪ್ರವೇಶ ನೀಡುವುದಾಗಿ ತಿಳಿಸಲಾಗಿತ್ತು. ಕೊರೋನಾ ಪ್ರಕರಣಗಳು ಇಳಿಕೆಯಾದ ಹಿನ್ನೆಲೆಯಲ್ಲಿ 30000ಕ್ಕೆ ಏರಿಸಲಾಗಿದೆ.