ಭಾರತ-ಪಾಕ್ ಕ್ರಿಕೆಟ್‌ ಕಗ್ಗಂಟು ಇತ್ಯರ್ಥ: ಹೈಬ್ರಿಡ್ ಮಾದರಿಯಲ್ಲಿ ಚಾಂಪಿಯನ್ಸ್ ಟ್ರೋಫಿ

2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಭಾರತ ತಂಡ ಪಾಕಿಸ್ತಾನಕ್ಕೆ ತೆರಳದೆ ತನ್ನ ಪಂದ್ಯಗಳನ್ನು ಬೇರೆ ದೇಶದಲ್ಲಿ ಆಡಲಿದೆ. 2027ರವರೆಗೆ ಉಭಯ ದೇಶಗಳ ನಡುವಿನ ಪಂದ್ಯಗಳು ತಟಸ್ಥ ಸ್ಥಳದಲ್ಲಿ ನಡೆಯಲಿವೆ.

Hybrid model agreed for Champions Trophy and ICC events from 2024 to 2027 kvn

ದುಬೈ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ನಡುವಿನ ಹಲವು ತಿಂಗಳುಗಳ ಕಗ್ಗಂಟು ಕೊನೆಗೂ ಇತ್ಯರ್ಥಗೊಂಡಿದೆ. 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಹೈಬ್ರಿಡ್‌ ಮಾದರಿಯಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್(ಐಸಿಸಿ) ಗುರುವಾರ ಘೋಷಿಸಿದೆ. ಪಂದ್ಯಗಳು ಆತಿಥ್ಯ ದೇಶ ಪಾಕಿಸ್ತಾನದ ಜೊತೆ ಬೇರೊಂದು ದೇಶದಲ್ಲೂ ಆಯೋಜನೆಗೊಳ್ಳಲಿವೆ.

8 ತಂಡಗಳು ಪಾಲ್ಗೊಳ್ಳಲಿರುವ ಟೂರ್ನಿಯ ಆತಿಥ್ಯ ಹಕ್ಕು ಇರುವುದು ಪಾಕ್‌ ಬಳಿ. ಆದರೆ ಭದ್ರತಾ ದೃಷ್ಟಿಯಿಂದ ಪಾಕ್‌ಗೆ ತೆರಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿತ್ತು. ತನ್ನ ಪಂದ್ಯಗಳನ್ನು ಹೈಬ್ರಿಡ್‌ ಮಾದರಿಯಲ್ಲಿ ಪಾಕ್‌ನ ಹೊರಗಡೆ ನಡೆಸಬೇಕು ಎಂದು ಬೇಡಿಕೆಯಿಟ್ಟಿತ್ತು. ಇದಕ್ಕೆ ಪಿಸಿಬಿ ಒಪ್ಪಿರಲಿಲ್ಲ. ಭಾರತ ತಂಡ ಪಾಕ್‌ಗೆ ಬರಬೇಕು, ಟೂರ್ನಿಯ ಎಲ್ಲಾ ಪಂದ್ಯಗಳು ಪಾಕ್‌ನಲ್ಲೇ ನಡೆಯಬೇಕು ಎಂದು ಪಟ್ಟುಹಿಡಿದಿತ್ತು. ಹೀಗಾಗಿ ಟೂರ್ನಿ ಆತಿಥ್ಯ ಐಸಿಸಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ಆದರೆ ಹಲವು ಸುತ್ತಿನ ಸಭೆಗಳ ಬಳಿಕ ಕೆಲ ಷರತ್ತುಗಳೊಂದಿಗೆ ಬಿಸಿಸಿಐ ಹಾಗೂ ಪಿಸಿಬಿ ಹೈಬ್ರಿಡ್‌ ಟೂರ್ನಿಗೆ ಸಮ್ಮತಿ ಸೂಚಿಸಿವೆ.

ವಿಜಯ್ ಹಜಾರೆ ಟೂರ್ನಿ: ಮುಂಬೈ ವಿರುದ್ಧ 383 ರನ್ ಬೆನ್ನತ್ತಿ ಗೆದ್ದ ರಾಜ್ಯ!

ಪಾಕ್‌ನಾಚೆ ಭಾರತದ ಪಂದ್ಯ: ಟೂರ್ನಿಯ ಲೀಗ್‌ ಹಂತದ 3 ಪಂದ್ಯಗಳನ್ನೂ ಭಾರತ ತಂಡ ಪಾಕಿಸ್ತಾನದ ಹೊರಗಡೆ ಆಡಲಿವೆ. ಆ ದೇಶ ಯಾವುದೆಂದು ಇನ್ನೂ ಖಚಿತವಾಗಿಲ್ಲ. ವರದಿಗಳ ಪ್ರಕಾರ ಯುಎಇಎ ದುಬೈ ಕ್ರೀಡಾಂಗಣ ಭಾರತ ಪಂದ್ಯಗಳಿಗೆ ಆತಿಥ್ಯ ವಹಿಸುವ ಸಾಧ್ಯತೆ ಹೆಚ್ಚು. ಉಳಿದೆಲ್ಲಾ ಪಂದ್ಯಗಳು ಪಾಕ್‌ನ 3 ನಗರಗಳಲ್ಲಿ ನಡೆಯಲಿವೆ. ಒಂದು ವೇಳೆ ಭಾರತ ನಾಕೌಟ್‌ ಪ್ರವೇಶಿಸಿದರೆ ಸೆಮಿಫೈನಲ್‌, ಫೈನಲ್‌ ಪಂದ್ಯಕ್ಕೂ ದುಬೈ ಆತಿಥ್ಯ ವಹಿಸಲಿವೆ. ಭಾರತ ನಾಕೌಟ್‌ಗೇರದಿದ್ದರೆ ಸೆಮೀಸ್‌, ಫೈನಲ್‌ ಲಾಹೋರ್‌ನಲ್ಲಿ ನಡೆಯಲಿದೆ. ಟೂರ್ನಿ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಿಗದಿಯಾಗಿದೆ. ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.

ಭಾರತ ತಂಡ 2008ರಲ್ಲಿ ಕೊನೆ ಬಾರಿ ಪಾಕ್‌ನಲ್ಲಿ ಕ್ರಿಕೆಟ್‌ ಆಡಿತ್ತು. ಆದರೆ ಮುಂಬೈ ಉಗ್ರ ದಾಳಿ ಬಳಿಕ ಪಾಕ್‌ ಪ್ರವಾಸ ಕೈಗೊಂಡಿಲ್ಲ. ಪಾಕ್‌ ತಂಡ ಕಳೆದ ವರ್ಷ ಏಕದಿನ ವಿಶ್ವಕಪ್‌ ಆಡಲು ಭಾರತಕ್ಕೆ ಆಗಮಿಸಿತ್ತು.

2027 ತನಕ ತಟಸ್ಥ ಸ್ಥಳದಲ್ಲಿ ಭಾರತ vs ಪಾಕ್‌ ಪಂದ್ಯಗಳು

ಷರತ್ತುಗಳ ಪ್ರಕಾರ 2027ರ ವರೆಗೂ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ಭಾರತ ಅಥವಾ ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳುವುದಿಲ್ಲ. 2025ರ ಚಾಂಪಿಯನ್ಸ್‌ ಟ್ರೋಫಿಯ ತನ್ನ ಪಂದ್ಯಗಳನ್ನು ಭಾರತ ತಂಡ ಪಾಕ್‌ನ ಹೊರಗಡೆ ಆಡಲಿದೆ. 2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಭಾರತದಲ್ಲಿ ನಡೆಯಲಿದ್ದು, ಪಾಕ್‌ನ ಪಂದ್ಯಗಳು ಭಾರತದ ಹೊರಗಡೆ ಆಯೋಜನೆಗೊಳ್ಳಲಿವೆ. 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೂ ಪಾಕಿಸ್ತಾನ ತಂಡ ಭಾರತಕ್ಕೆ ಆಗಮಿಸಲ್ಲ. ಟೂರ್ನಿಯನ್ನು ಭಾರತ, ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಪಾಕ್‌ನ ಪಂದ್ಯಗಳು ಲಂಕಾದಲ್ಲಿ ನಡೆಯಲಿವೆ. ಇನ್ನು, 2028ರ ಮಹಿಳಾ ಟಿ20 ವಿಶ್ವಕಪ್‌ ಪಾಕ್‌ನಲ್ಲಿ ನಡೆಯಲಿದೆ. ಆ ಟೂರ್ನಿ ಕೂಡಾ ಹೈಬ್ರಿಡ್‌ ಮಾದರಿ ಯಲ್ಲಿ ನಡೆಯಬಹುದು. ಆದರೆ ಸದ್ಯ 2024-27ರ ವರೆಗಿನ ಋತುವಿನ ಬಗ್ಗೆ ಮಾತ್ರ ಐಸಿಸಿ ನಿರ್ಧಾರ ಕೈಗೊಂಡಿವೆ.

ಬಿಸಿಸಿಐ- ಪಿಸಿಬಿ ಒಪ್ಪಂದಗಳು

- ಹೈಬ್ರಿಡ್‌ ಮಾದರಿಯಲ್ಲಿ ಚಾಂಪಿಯನ್ಸ್‌ ಟ್ರೋಫಿ. ಭಾರತ ತಂಡ ಪಾಕ್‌ಗೆ ತೆರಳಲ್ಲ.

- ತನ್ನ ಎಲ್ಲಾ ಪಂದ್ಯಗಳನ್ನು ಪಾಕ್‌ನ ಹೊರಗಡೆ ಆಡಲಿರುವ ಭಾರತ.

- ಭಾರತ ನಾಕೌಟ್‌ಗೇರದಿದ್ದರೆ ಸೆಮಿ, ಫೈನಲ್‌ಗೆ ಪಾಕಿಸ್ತಾನ ಆತಿಥ್ಯ.

- ಹೈಬ್ರಿಡ್‌ ಆದರೆ ಪರಿಹಾರ ಕೊಡಬೇಕು ಎಂದು ಪಿಸಿಬಿ. ಆದರೆ ಪರಿಹಾರವಿಲ್ಲ. ಬದಲಾಗಿ,

- 2025ರ ಮಹಿಳಾ ಟಿ20 ವಿಶ್ವಕಪ್‌ ಆಡಲು ಪಾಕ್‌ ತಂಡ ಭಾರತಕ್ಕೆ ಬರಲ್ಲ. ಹೈಬ್ರಿಡ್‌ ಮಾದರಿ ಟೂರ್ನಿ.

- 2026ರ ಟಿ20 ವಿಶ್ವಕಪ್‌ನ ಪಾಕಿಸ್ತಾನ ಪಂದ್ಯ ಭಾರತದಲ್ಲಿಲ್ಲ. ಪಾಕ್‌ನ ಪಂದ್ಯ ಶ್ರೀಲಂಕಾದಲ್ಲಿ ಆಯೋಜನೆ.

- 2027ರ ಬಳಿಕ ಐಸಿಸಿ ಮಹಿಳಾ ಟೂರ್ನಿಯೊಂದನ್ನು ಆಯೋಜಿಸಲಿರುವ ಪಾಕಿಸ್ತಾನ.

Latest Videos
Follow Us:
Download App:
  • android
  • ios