* ಬಿಗ್‌ಬ್ಯಾಶ್‌ ಲೀಗ್ ಟೂರ್ನಿಯಲ್ಲಿ ಜಂಪಾ ಮಂಕಡಿಂಗ್ ರನೌಟ್‌ ವಿಫಲ ಯತ್ನ* ನಾನ್‌ಸ್ಟ್ರೈಕ್‌ನಲ್ಲಿದ್ದ ಬ್ಯಾಟರನ್ನು ರನೌಟ್‌ ಮಾಡಿದರೂ ಅಂಪೈರ್‌ ನಾಟೌಟ್‌ ತೀರ್ಪು* ನಿಯಮದ ಪ್ರಕಾರವೇ ನಾಟೌಟ್ ಎಂದು ಘೋಷಿಸಿದ ಮೂರನೇ ಅಂಪೈರ್

ಮೆಲ್ಬರ್ನ್‌(ಜ.04): ಮಂಕಡಿಂಗ್‌ ಮೂಲಕ ನಾನ್‌ಸ್ಟ್ರೈಕ್‌ನಲ್ಲಿದ್ದ ಬ್ಯಾಟರನ್ನು ರನೌಟ್‌ ಮಾಡಿದರೂ ಅಂಪೈರ್‌ ನಾಟೌಟ್‌ ತೀರ್ಪು ನೀಡಿದ ಅಪರೂಪದ ಪ್ರಸಂಗಕ್ಕೆ ಮಂಗಳವಾರ ಬಿಗ್‌ಬ್ಯಾಶ್‌ ಟಿ20 ಲೀಗ್‌ನ ಮೆಲ್ಬರ್ನ್‌ ರೆನಿಗೇಡ್ಸ್‌ ಹಾಗೂ ಮೆಲ್ಬರ್ನ್‌ ಸ್ಟಾ​ರ್ಸ್‌ ನಡುವಿನ ಪಂದ್ಯ ಸಾಕ್ಷಿಯಾಯಿತು. 

ಬೌಲರ್‌ ಚೆಂಡು ಎಸೆಯುವ ಮೊದಲೇ ಕ್ರೀಸ್‌ ಬಿಟ್ಟಿದ್ದ ರೆನಿಗೇಡ್ಸ್‌ ತಂಡದ ರೋಜ​ರ್ಸ್‌ರನ್ನು ಮೆಲ್ಬರ್ನ್‌ ಸ್ಟಾ​ರ್ಸ್‌ ತಂಡದ ಸ್ಪಿನ್ನರ್‌ ಆ್ಯಡಂ ಜಂಪಾ ರನೌಟ್‌ ಮಾಡಿ ಅಂಪೈರ್‌ಗೆ ಮನವಿ ಮಾಡಿದರು. ಆದರೆ ಇದನ್ನು ಪರಿಶೀಲಿಸಿದ 3ನೇ ಅಂಪೈರ್‌ ನಾಟೌಟ್‌ ಎಂದು ತೀರ್ಪಿತ್ತರು.

Scroll to load tweet…

ಎಂಸಿಸಿಯಿಂದ ಸ್ಪಷ್ಟನೆ: ನಾಟೌಟ್‌ ತೀರ್ಪಿನ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆ ಆರಂಭವಾದ ಕಾರಣ ಕ್ರಿಕೆಟ್‌ ನಿಯಮಗಳನ್ನು ರೂಪಿಸುವ ಮ್ಯಾರಿಲ್ಬೋನ್‌ ಕ್ರಿಕೆಟ್‌ ಕ್ಲಬ್‌(ಎಂಸಿಸಿ) ಸ್ಪಷ್ಟನೆ ನೀಡಿದೆ. ಬೌಲರ್‌ ತನ್ನ ಬೌಲಿಂಗ್‌ ಆ್ಯಕ್ಷನ್‌ ಪೂರ್ತಿಗೊಳಿಸಿದ ಬಳಿಕ ರನೌಟ್‌ ಮಾಡಿದರೆ ಅದನ್ನು ಔಟ್‌ ಎಂದು ಪರಿಗಣಿಸುವುದಿಲ್ಲ ಎಂದಿದೆ.

ವಿವಾದಾತ್ಮಕ ಕ್ಯಾಚ್‌ಗೂ ಸಾಕ್ಷಿಯಾಗಿತ್ತು ಬಿಗ್‌ಬ್ಯಾಶ್‌ ಲೀಗ್..!

ಹೌದು, ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಟಿ20 ಲೀಗ್‌ನಲ್ಲಿ ಕಳೆದ ಭಾನುವಾರ ಬ್ರಿಸ್ಬೇನ್‌ ಹೀಟ್‌ ಹಾಗೂ ಸಿಡ್ನಿ ಸಿಕ್ಸರ್‌ ನಡುವಿನ ಪಂದ್ಯ ವಿವಾದಾತ್ಮಕ ಕ್ಯಾಚ್‌ಗೆ ಸಾಕ್ಷಿಯಾಗಿತ್ತು. ಬ್ರಿಸ್ಬೇನ್ ಹೀಟ್‌ ತಂಡದ ಮಾರ್ಕ್ ಸ್ಟಿಕೀಟೆ ಎಸೆತದಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡದ ಜೋರ್ಡನ್‌ ಸಿಲ್‌್ಕ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಇದ್ದ ಕ್ಷೇತ್ರರಕ್ಷಕ ಮೈಕಲ್‌ ನೆಸರ್‌ ಹಿಡಿಯುವ ಯತ್ನ ನಡೆಸಿದರು. 

IND vs SL ಭಾರತದ ದಾಳಿಗೆ ಲಂಕಾ ದಹನ, ಮೊದಲ ಟಿ20 ಪಂದ್ಯ ಗೆದ್ದ ಹಾರ್ದಿಕ್ ಸೈನ್ಯ!

ಮೊದಲು ಬೌಂಡರಿ ಗೆರೆ ಆಚೆ ಚೆಂಡಿನ ಸಂಪರ್ಕಕ್ಕೆ ಬಂದ ನೆಸರ್‌, ಚೆಂಡನ್ನು ಗಾಳಿಯಲ್ಲಿ ಎಸೆದು ಬೌಂಡರಿ ಒಳಗೆ ಕಾಲಿಟ್ಟರು. ಬೌಂಡರಿ ಒಳಗೇ ಮತ್ತೆ ನೆಗೆದು ಚೆಂಡನ್ನು ಹೊರಕ್ಕೆ ಎಸೆದ ನೆಸರ್‌, ಗೆರೆಯಿಂದ ಒಳಬಂದು ಕ್ಯಾಚ್‌ ಪೂರ್ಣಗೊಳಿಸಿದರು. ಐಸಿಸಿ ನಿಯಮದ ಪ್ರಕಾರ ಈ ಕ್ಯಾಚ್‌ ನ್ಯಾಯಸಮ್ಮತ. ಆದರೆ ಸಾಮಾಜಿಕ ತಾಣಗಳಲ್ಲಿ ಹಲವು ಮಾಜಿ, ಹಾಲಿ ಆಟಗಾರರು ಸೇರಿದಂತೆ ಸಾವಿರಾರು ಅಭಿಮಾನಿಗಳು ಈ ನಿಯಮವನ್ನು ಬದಲಿಸುವಂತೆ ಪ್ರತಿಕ್ರಿಯಿಸಿದ್ದಾರೆ. ಈ ಕ್ಯಾಚ್‌ನ ವಿಡಿಯೋ ವೈರಲ್‌ ಆಗಿತ್ತು

ವನಿತಾ ಐಪಿಎಲ್‌ ಮಾಧ್ಯಮ ಹಕ್ಕಿಗೆ 10+ ಸಂಸ್ಥೆ ಆಸಕ್ತಿ

ನವದೆಹಲಿ: ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್‌ ಆರಂಭಕ್ಕೂ ಮುನ್ನವೇ ಟೂರ್ನಿ ಆಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಕಂಡುಬರುತ್ತಿದ್ದು, 10ಕ್ಕೂ ಹೆಚ್ಚು ಸಂಸ್ಥೆಗಳು ಮಾಧ್ಯಮ ಹಕ್ಕು ಖರೀದಿಗೆ ಭಾರೀ ಆಸಕ್ತಿ ತೋರಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಈಗಾಗಲೇ ಡಿಸ್ನಿ ಸ್ಟಾರ್‌, ಸೋನಿ ನೆಟ್‌ವರ್ಕ್, ವಯಾಕಾಂ 18, ಅಮೆಜಾನ್‌ ಪ್ರೈಮ್‌ ಸೇರಿದಂತೆ ವಿವಿಧ ಸಂಸ್ಥೆಗಳು ಟೆಂಟರ್‌ ಪತ್ರ ಖರೀದಿಸಿದ್ದು, ಭಾರೀ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಡಿಸೆಂಬರ್ 31ಕ್ಕೆ ಟೆಂಡರ್‌ ಖರೀದಿ ಮುಕ್ತಾಯಗೊಂಡಿದ್ದು, ಜನವರಿ 12ಕ್ಕೆ ಬಿಡ್‌ ಸಲ್ಲಿಸಲಾಗುತ್ತದೆ. ಬಳಿಕ ಪ್ರಸಾರ ಹಕ್ಕು ಮಾರಾಟಕ್ಕೆ ಹರಾಜು ಪ್ರಕ್ರಿಯೆ ನಡೆಸಲಿದೆ. ಟೂರ್ನಿ ಮಾರ್ಚ್‌ನಲ್ಲಿ ನಡೆಯಲಿದೆ.