* ಪಿಎಸ್‌ಎಲ್‌ ಟೂರ್ನಿ ಆಯೋಜಿಸಲು ಯುಎಇ ಗ್ರೀನ್ ಸಿಗ್ನಲ್‌* ಒಂದು ಷರತ್ತಿನ ಮೇರೆಗೆ ಟೂರ್ನಿ ಆಯೋಜಿಸಲು ಅಬುಧಾಬಿ ಸರ್ಕಾರ ಅನುಮತಿ* ಪಿಎಸ್ಎಲ್ 2021 ಟೂರ್ನಿಯಲ್ಲಿ ಇನ್ನೂ 20 ಪಂದ್ಯಗಳು ನಡೆಯಬೇಕಿವೆ.

ಅಬುಧಾಬಿ(ಮೇ.19): ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಪಿಎಸ್‌ಎಲ್‌ 2021 ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಆಯೋಜಿಸಲು ಷರತ್ತಿನ ಮೇರೆಗೆ ಅಬುಧಾಬಿ ಸರ್ಕಾರ ಅನುಮತಿ ನೀಡಿದೆ ಎಂದು ವರದಿಯಾಗಿದೆ. 

ಬಯೋ ಬಬಲ್‌ನೊಳಗೆ ಕೋವಿಡ್‌ ನಿಯಮಾವಳಿಗಳು ಉಲ್ಲಂಘನೆಯಾದ ಬೆನ್ನಲ್ಲೇ ಪಿಎಸ್‌ಎಲ್ ಟೂರ್ನಿಯನ್ನು ಪಿಸಿಬಿ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿತ್ತು. 2021ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯಲ್ಲಿ ಇನ್ನೂ 20 ಪಂದ್ಯಗಳು ನಡೆಯಬೇಕಿದೆ. ಇದೀಗ ಎಮಿರೇಟ್ಸ್‌ ಕ್ರಿಕೆಟ್ ಬೋರ್ಡ್‌(ಇಸಿಬಿ) ಯುಎಇನಲ್ಲಿ ಪಿಎಸ್‌ಎಲ್ ಟೂರ್ನಿಯನ್ನು ಆಯೋಜಿಸಲು ಹಸಿರು ನಿಶಾನೆ ತೋರಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ ಸೂಪರ್‌ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಕೋವಿಡ್ 19 ಲಸಿಕೆ ಹಾಕಿಸಿಕೊಂಡಿರಬೇಕು ಎಂದು ಯುಎಇ ಸರ್ಕಾರವು ಷರತ್ತುಬದ್ಧ ಅನುಮತಿ ನೀಡಿದೆ. 

Scroll to load tweet…

ಕೋವಿಡ್ ಕಾಟದಿಂದ ಮುಂದೂಡಲ್ಪಟ್ಟ 2021ನೇ ಸಾಲಿನ ಪಾಕಿಸ್ತಾನ ಸೂಪರ್ ಲೀಗ್‌ ಟೂರ್ನಿಯು ಜೂನ್‌ 01ರಿಂದ 20ರವರೆಗೆ ಪಾಕಿಸ್ತಾನದ ಕರಾಚಿಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಪಾಕಿಸ್ತಾನದಲ್ಲಿ ಕೋವಿಡ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಪಿಎಸ್‌ಎಲ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲು ಪಿಸಿಬಿ ಬಳಿ ಮನವಿ ಮಾಡಿಕೊಂಡಿದ್ದರು.

7 ಮಂದಿಗೆ ಕೊರೋನಾ: ಪಾಕಿಸ್ತಾನ ಸೂಪರ್ ಲೀಗ್ ದಿಢೀರ್ ಸ್ಥಗಿತ..!

ಇದೀಗ ಪಿಎಸ್‌ಎಲ್‌ ಟೂರ್ನಿಯ ಎಲ್ಲಾ ಪಂದ್ಯಗಳು ಅಬುಧಾಬಿಯ ಶೇಕ್ ಜಾಯೆದ್‌ ಮೈದಾನದಲ್ಲಿ ನಡೆಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಕಟ್ಟುನಿಟ್ಟಿನ ಬಯೋ ಬಬಲ್‌ನೊಳಗೆ ಟೂರ್ನಿ ಆಯೋಜಿಸಲು ಚಿಂತನೆ ನಡೆಸಲಾಗಿದೆ.ಇದರ ಜತೆಗೆ ಯುಎಇನಲ್ಲಿ ಆಟಗಾರರಿಗೆ ಹಾಗೂ ಅಧಿಕಾರಿಗಳಿಗೆ, ಸಹಾಯಕ ಸಿಬ್ಬಂದಿಗಳಿಗೆ 10 ದಿನಗಳ ಕಡ್ಡಾಯ ಕ್ವಾರಂಟೈನ್‌ನಲ್ಲಿರಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona