Asianet Suvarna News Asianet Suvarna News

ಕೊಹ್ಲಿ-ಅನುಷ್ಕಾ 2ನೇ ಮಗು ನಿರೀಕ್ಷೆ ಸುಳ್ಳು ಮಾಹಿತಿ ಹರಡಿ ದೊಡ್ಡ ತಪ್ಪು ಮಾಡಿದೆ, ಎಬಿಡಿ ಯು ಟರ್ನ್!

ಕೊಹ್ಲಿ ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಟೆಸ್ಟ್ ಪಂದ್ಯದಿಂದ ಹೊರಗುಳಿದು ಕುಟುಂಬದ ಜೊತೆಗಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ವಿಡಿಯೋ ಮೂಲಕ ಹೇಳಿದ್ದರು. ಇದೀಗ ಎಬಿಡಿ ದಿಢೀರ್ ಯು ಟರ್ನ್ ಹೊಡೆದಿದ್ದಾರೆ.  

AB De Villiers u turn on Virat Kohli Anushka Sharma 2nd child expectation news said I Made Mistake ckm
Author
First Published Feb 9, 2024, 11:13 AM IST

ನವದೆಹಲಿ(ಫೆ.09) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿದ ವಿರಾಟ್ ಕೊಹ್ಲಿ ಕುರಿತು ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಈ ಪ್ರಶ್ನೆಗಳಿಗೆ ಆರ್‌ಸಿಬಿ ಮಾಜಿ ಕ್ರಿಕೆಟಿಗ, ವಿರಾಟ್ ಕೊಹ್ಲಿ ಆಪ್ತ ಎಬಿ ಡಿವಿಲಿಯರ್ಸ್ ಲೈವ್ ಮೂಲಕ ಸ್ಪಷ್ಟನೆ ನೀಡಿದ್ದರು. ಕೊಹ್ಲಿ-ಅನುಷ್ಕಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಕೊಹ್ಲಿ ಕುಟುಂಬದ ಜೊತೆಗಿದ್ದಾರೆ ಎಂದಿದ್ದರು. ಆದರೆ ಇದೀಗ ಎಬಿ ಡಿವಿಲಿಯರ್ಸ್ ತಾವು ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಕ್ಷಮೆ ಕೇಳಿದ್ದಾರೆ. ನಾನು ಅತೀ ದೊಡ್ಡ ತಪ್ಪು ಮಾಡಿದ್ದೇನೆ. ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿದ್ದೇನೆ. ಇದಕ್ಕಾಗಿ ಕ್ಷಮೆ ಇರಲಿ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

ನಾನು ವಿಡಿಯೋ ಮೂಲಕ ಕುಟುಂಬ ಮೊದಲು ಎಂದು ಹೇಳಿದ್ದೆ. ಇದು ಅಕ್ಷರಶಃ ಸತ್ಯ. ಆದರೆ ಇದೇ ಮಾತು ಮುಂದುವರಿಸಿ ಕೊಹ್ಲಿ ಹಾಗೂ ಅನುಷ್ಕಾ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ್ದೆ. ಆದರೆ ಈ ಮಾಹಿತಿ ತಪ್ಪು. ವಿರಾಟ್ ಕೊಹ್ಲಿ ಕುಟುಂಬದ ಜೊತೆಗಿದ್ದಾರೆ. ಕೊಹ್ಲಿ ಉತ್ತಮವಾಗಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯಕ್ಕೆ ಗೈರಾಗಿರುವುದಕ್ಕೆ ಕಾರಣವೇನು ಅನ್ನೋದರ ಸ್ಪಷ್ಟ ಮಾಹಿತಿ ಇಲ್ಲ. ಕೊಹ್ಲಿ ವಿಶ್ರಾಂತಿಗೆ ಕಾರಣ ಏನೇ ಇರಬಹುದು. ಆದರೆ ಅವರಿಗೆ ನಾನು ಶುಭ ಹಾರೈಸುತ್ತೇನೆ. ಎಲ್ಲರೂ ವಿರಾಟ್ ಕೊಹ್ಲಿಯನ್ನು ಮೈದಾನದಲ್ಲಿ ನೋಡಲು ಬಯಸುತ್ತಾರೆ. ವಿಶ್ರಾಂತಿ ಬಳಿಕ ವಿರಾಟ್ ಕೊಹ್ಲಿ ಮತ್ತಷ್ಟು ಪವರ್‌ಫುಲ್ ಆಗಿ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. 

 

2ನೇ ಮಗುವಿನ ನಿರೀಕ್ಷೆಯಲ್ಲಿ ವಿರುಷ್ಕಾ ದಂಪತಿ, ಮಾಹಿತಿ ಖಚಿತಪಡಿಸಿದ ಡಿವಿಲಿಯರ್ಸ್!

ಇತ್ತೀಚೆಗೆ ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಲೈವ್ ಆಗಿ ಕೊಹ್ಲಿ ಅನುಷ್ಕಾ 2ನೇ ಮಗು ನಿರೀಕ್ಷೆ ಕುರಿತು ಹೇಳಿದ್ದರು. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಅಥವಾ ಕುಟುಂಬಸ್ಥರು ಅಧಿಕೃತವಾಗಿ ಈ ಕುರಿತು ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ. ಇತ್ತ ಬಿಸಿಸಿಐ ಕೂಡ ವೈಯುಕ್ತಿ ಕಾರಣದಿಂದ ಕೊಹ್ಲಿ ಆರಂಭಿಕ 2 ಟೆಸ್ಟ್ ಪಂದ್ಯಕ್ಕೆ ಲಭ್ಯವಿಲ್ಲ ಎಂಬ ಮಾಹಿತಿ ನೀಡಿತ್ತು. ಆದರೆ ಎಬಿ ಡಿವಿಲಿಯರ್ಸ್,  ವಿರಾಟ್‌ ಕೊಹ್ಲಿ 2ನೇ ಮಗು ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಅವರು ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ನನಗೆ ಗೊತ್ತಿರುವಂತೆ ವಿರಾಟ್ ಕೊಹ್ಲಿ ಚೆನ್ನಾಗಿದ್ದಾರೆ. ಕೊಹ್ಲಿ ಕುಟುಂಬದ ಜೊತೆ ಕೆಲ ಸಮಯ ಕಳೆಯಲು ಬಯಸಿದ್ದಾರೆ. ಇದರಿಂದ ಕೊಹ್ಲಿ ಆರಂಭಿಕ ಎರಡು ಪಂದ್ಯದಿಂದ ಹೊರಗುಳಿದಿದ್ದಾರೆ. ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ವಿಲಿಯರ್ಸ್ ಹೇಳಿದ್ದರು.

ಕೊಹ್ಲಿ-ಅನುಷ್ಕಾ ಶರ್ಮಾ 2017ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2021ರ ಜನವರಿಯಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಇತ್ತೀಚೆಗೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಮಗಳು ವಮಿಕಾ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. 

ವಿರಾಟ್ ಕೊಹ್ಲಿ ನನ್ನ ಮೇಲೆ ಉಗುಳಿದ್ದರು: ಗಂಭೀರ ಆರೋಪ ಮಾಡಿದ ದಕ್ಷಿಣ ಆಫ್ರಿಕಾ ಮಾಜಿ ನಾಯಕ..!
 

Follow Us:
Download App:
  • android
  • ios