ಸಿಡ್ನಿ(ಡಿ.06): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ 2-0 ಅಂತರದಲ್ಲಿ ಭಾರತ ಗೆದ್ದುಕೊಂಡಿದೆ. ಅಂತಿಮ ಪಂದ್ಯ ಗೆದ್ದು ಕ್ಲೀನ್ ಸ್ವೀರ್ ಮಾಡಲು ಟೀಂ ಇಂಡಿಯಾ ಸಜ್ಜಾಗಿದೆ. ಸಿಡ್ನಿಯಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ 195 ಬೃಹತ್ ಗುರಿ ಬೆನ್ನಟ್ಟಿ ಸರಣಿ ಗೆದ್ದುಕೊಂಡಿದೆ. ಚೇಸಿಂಗ್ ವೇಳೆ ನಾಯಕ ವಿರಾಟ್ ಕೊಹ್ಲಿ, ಸೌತ್ ಆಫ್ರಿಕಾ ಮಾಜಿ ನಾಯಕ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಹ ಆಟಗಾರ ಎಬಿ ಡಿವಿಲಿಯರ್ಸ್ ಸಿಗ್ನೇಚರ್ ಸ್ಕೂಪ್ ಶಾಟ್‌ನ್ನು ಕಾಪಿ ಮಾಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 2ನೇ ಟಿ20 ಪಂದ್ಯ ಗೆದ್ದು ಹಲವು ದಾಖಲೆ ಬರೆದ ಕೊಹ್ಲಿ ಸೈನ್ಯ!

ಸ್ಕೂಪ್ ಶಾಟ್ ಮೂಲಕ ವಿರಾಟ್ ಕೊಹ್ಲಿ ಸಿಕ್ಸರ್ ಸಿಡಿಸಿದ್ದಾರೆ. ಇದೇ ಮೊದಲ ಬಾರಿಗೆ ಕೊಹ್ಲಿ ಸ್ಕೂಪ್ ಶಾಟ್ ಇಷ್ಟು ಪರ್ಫೆಕ್ಟ್ ಸಿಕ್ಸರ್ ಸಿಡಿಸಿದ್ದಾರೆ. ಎಬಿ ಡಿವಿಲಿಯರ್ಸ್ ರೀತಿಯಲ್ಲೇ ಒಂದಿಂಚು ಬದಲಾವಣೆ ಇಲ್ಲದೆ ಸ್ಕೂಪ್ ಶಾಟ್ ಕಾರ್ಯಗತ ಮಾಡಿದ್ದಾರೆ. 

 

INDvAUS:2ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ ರೋಚಕ ಗೆಲುವು; ಸರಣಿ ಕೈವಶ!

ಪಂದ್ಯದ ಬಳಿಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಸ್ಕೂಪ್ ಶಾಟ್ ಪ್ರಯತ್ನ ಮಾಡಿ ಯಶಸ್ವಿಯಾದೆ. ಎಬಿಡಿಗೆ ಮೆಸೇಜ್ ಮೂಲಕ ಈ ಸ್ಕೂಪ್ ಶಾಟ್ ವಿಡಿಯೋ ಕಳುಹಿಸುತ್ತೇನೆ. ಎಬಿಡಿ ಪ್ರತಿಕ್ರಿಯೆ ನನ್ನ ಕುತೂಹಲ ಹೆಚ್ಚಿಸಿದೆ ಎಂದಿದ್ದರು. ಇದೀಗ ಎಬಿಡಿ ಕೊಹ್ಲಿ ಸ್ಕೂಪ್ ಶಾಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.

 

ವಿರಾಟ್ ಕೊಹ್ಲಿ ಸ್ಕೂಪ್ ಶಾಟ್ ಸೂಪರ್ ಎಂದು ಎಬಿ ಡಿವಿಲಿಯರ್ಸ್ ಪ್ರತಿಕ್ರಿಯೆ ನೀಡಿದ್ದಾರೆ. ಸಿಕ್ಸರ್ , ಬೌಂಡರಿ ಮೂಲಕ ವಿರಾಟ್ ಕೊಹ್ಲಿ 24 ಎಸೆತದಲ್ಲಿ 40 ರನ್ ಸಿಡಿಸಿದ್ದರು. ಈ ಮೂಲಕ ಸಿಡ್ನಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.