5 ಎಸೆತದಲ್ಲಿ ಟೀಂ ಇಂಡಿಯಾ ಗೆಲುವಿಗೆ 12 ರನ್ ಅವಶ್ಯಕತೆ ಇತ್ತು. ಪ್ರತಿ ಎಸೆತೆವೂ ಅಷ್ಟೋ ಮುಖ್ಯವಾಯಿತು. ಹಾರ್ದಿಕ್ ಪಾಂಡ್ಯ 2 ಸಿಕ್ಸರ್ ಸಿಡಿಸೋ ಮೂಲಕ ಈ ರೋಚಕ ಹೋರಾಟದಲ್ಲಿ ಟೀಂ ಇಂಡಿಯಾ ಇನ್ನು 2 ಎಸೆತ ಬಾಕಿ ಇರುವಂತೆ ಗೆಲುವು ದಾಖಲಿಸಿತು. ಈ ಮೂಲಕ ಸರಣಿ ಗೆದ್ದಿಕೊಂಡಿದೆ.
ಸಿಡ್ನಿ(ಡಿ.06): ಏಕದಿನ ಸರಣಿ ಸೋಲಿಗೆ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ. ಸಿಡ್ನಿಯಲ್ಲಿ ನಡೆದ 2ನೇ ಟಿ20 ಪಂದ್ಯ ಗೆಲ್ಲೋ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಟೀಂ ಇಂಡಯಾ ಟಿ20 ಸರಣಿ ಗೆದ್ದುಕೊಂಡಿದೆ.
ಸಿಡ್ನಿ ಮೈದಾನದ ಅಂಕಿ ಅಂಶ ಭಾರತದ ಪರವಾಗಿತ್ತು ಅನ್ನೋದು ನಿಜ. ಆದರೆ 195 ರನ್ ಟಾರ್ಗೆಟ್ ಚೇಸ್ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡೋ ಮೂಲಕ ಆಸೀಸ್ ತಂಡಕ್ಕೆ ಸ್ಪಷ್ಟ ಸೂಚನೆ ನೀಡಿದರು.
ಕೆಎಲ್ ರಾಹುಲ್ 22 ಎಸತದಲ್ಲಿ 30 ರನ್ ಸಿಡಿಸಿ ಔಟಾದರು. ಶಿಖರ್ ಧವನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೊತೆಯಾಟದಿಂದ ಟೀಂ ಇಂಡಿಯಾ ಮತ್ತೆ ಹೋರಾಟ ಮುಂದುರಿಸಿತು. ದಿಟ್ಟ ಹೋರಾಟ ನೀಡಿದ ಶಿಖರ್ ಧವನ್ ಅರ್ಧಶತಕ ಸಿಡಿಸಿದರು.
ಧವನ್ 36 ಎಸೆತದಲ್ಲಿ 52 ರನ್ ಸಿಡಿಸಿ ಔಟಾದರು. ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದು ಬಂದ ಸಂಜು ಸಾಮ್ಸನ್ ಅಬ್ಬರಿಸುವ ಸೂಚನೆ ನೀಡಿದರು. ಆದರೆ 15 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.
ಜವಾಬ್ದಾರಿ ಹೆಗಲಮೇಲೆ ಹೊತ್ತ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಕೊಹ್ಲಿ 24 ಎಸೆದಲ್ಲಿ 40 ರನ್ ಸಿಡಿಸಿ ಔಟಾದರು. ಕೊಹ್ಲಿ ವಿಕೆಟ್ ಪತನ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಯಿತು.
ಇತ್ತ ಹಾರ್ದಿಕ್ ಪಾಂಡ್ಯ ಹಾಗೂ ಶ್ರೇಯಸ್ ಅಯ್ಯರ್ ಆಸರೆಯಾದರು. ಅಂತಿಮ 12 ಎಸೆತದಲ್ಲಿ ಟೀಂ ಇಂಡಿಯಾ ಗೆಲುವಿಗೆ 25 ರನ್ ಅವಶ್ಯಕತೆ ಇತ್ತು. ಪಾಂಡ್ಯ ಹಾಗೂ ಅಯ್ಯರ್ ಹೋರಾಟ ಆಸೀಸ್ ತಂಡಕ್ಕೆ ತಲೆನೋವಾಯಿತು. ಸತತ 2 ಭರ್ಜರಿ ಸಿಕ್ಸರ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಇನ್ನು 2 ಎಸೆತ ಬಾಕಿ ಇರುವಂತೆ ಟೀ ಇಂಡಿಯಾಗೆ 6 ವಿಕೆಟ್ ಗೆಲುವು ತಂದುಕೊಟ್ಟರು. ಪಾಂಡ್ಯ 22 ಎಸೆತದಲ್ಲಿ ಅಜೇಯ 42 ರನ್ ಸಿಡಡಿಸಿದರೆ, ಅಯ್ಯರ್ ಅಜೇಯ 12 ರನ್ ಸಿಡಿಸಿದರು. ಈ ಮೂಲಕ ಭಾರತ 2-0 ಅಂತರದಲ್ಲಿ ಸರಣಿಗೆದ್ದುಕೊಂಡಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 6, 2020, 6:31 PM IST