ಟ್ವಿಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡ ವೀಡಿಯೊದಲ್ಲಿ, ಕರುಣ್ ನಾಯರ್ ಮತ್ತು ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಚಹಾಲ್ ತಮ್ಮ "ಕಮ್‌ಬ್ಯಾಕ್ ಕಥೆಗಳನ್ನು" ವಿವರಿಸಿದ್ದಾರೆ

ಮುಂಬೈ (ಏ. 08): ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL 2022) ತಮ್ಮ ಹೊಸ ಫ್ರಾಂಚೈಸಿಯೊಂದಿಗೆ ಯುಜುವೇಂದ್ರ ಚಹಲ್ (Yuzvendra Chahal) ಉತ್ತಮ ಫಾರ್ಮ್‌ನಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ (RR) ಪರ ಆಡುತ್ತಿರುವ ಲೆಗ್ ಸ್ಪಿನ್ನರ್ ಉತ್ತಮ ಪ್ರದರ್ಶನ ನೀಡುತ್ತಿದ್ದು ನಿಯಮಿತವಾಗಿ ಮಧ್ಯಂತರದಲ್ಲಿ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಪ್ರಸ್ತುತ ಚಹಲ್ ಐಪಿಎಲ್ 2022 ರಲ್ಲಿ ರಾಜಸ್ಥಾನ ರಾಯಲ್ಸ್‌ಗಾಗಿ ಮೂರು ಪಂದ್ಯಗಳಲ್ಲಿ ಏಳು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೈಪರ್‌ ಆಕ್ಟೀವ್‌ ಆಗಿರುವ ಚಾಹಲ್ ಮೈದಾನದ ಹೊರಗೂ ಮಿಂಚುತ್ತಿದ್ದಾರೆ. ಚಹಲ್ ಎಲ್ಲರೂ ಹೆಚ್ಚು ಇಷ್ಟಪಡುವ ವ್ಯಕ್ತಿಯಾಗಿದ್ದು ಡ್ರೆಸ್ಸಿಂಗ್ ರೂಮ್‌ನಲ್ಲಿನ ಚಹಲ್ ತುಂಟಾಟದ ವಿಡಿಯೋಗಳು ಪ್ರತಿ ಬಾರಿ ವೈರಲ್‌ ಆಗಿವೆ. ಯುಜುವೇಂದ್ರ ಚಹಲ್ ತನ್ನ ಐಪಿಎಲ್ ವೃತ್ತಿಜೀವನವನ್ನು ಮುಂಬೈ ಇಂಡಿಯನ್ಸ್‌ನೊಂದಿಗೆ (MI) ಪ್ರಾರಂಭಿಸಿ ಬಳಿಕ IPL 2014 ರಲ್ಲಿ ಆರ್‌ಸಿಬಿಗೆ (RCB) ಆಯ್ಕೆಯಾಗಿದ್ದರು. 

ಇದನ್ನೂ ಓದಿ:ರಾಜಕೀಯ ಬದಿಗಿಟ್ಟು ಅಭಿಮಾನಿಗಳೇಕೆ ಇಂಡೋ ಪಾಕ್ ಪಂದ್ಯ ಆನಂದಿಸಬಾರದು? ಪಿಸಿಬಿ ಪ್ರಶ್ನೆ

ಮುಂಬೈ ಇಂಡಿಯನ್ಸ್‌ವೊಂದಿಗಿನ ಅವರ ಮೂರು ವರ್ಷಗಳ ಅವಧಿಯಲ್ಲಿ, ಚಹಲ್ ಅನೇಕ ಕ್ರಿಕೆಟಿಗರೊಂದಿಗೆ ಬಲವಾದ ಬಾಂಧವ್ಯವನ್ನು ಬೆಳೆಸಿದ್ದರು ಮತ್ತು ನೆನಪುಗಳನ್ನುಸೃಷ್ಟಿಸಿದ್ದರು. ಇದೇ ವೇಳೆ 2013 ರಲ್ಲಿ ಮುಂಬೈ ಇಂಡಿಯನ್ಸ್ ಜತೆಗಿನ ತನ್ನ ಅವಧಿಯಲ್ಲಿ, ಆಟಗಾರನೊಬ್ಬ ಕುಡಿದು ಬಂದಾಗ ಚಹಾಲ್ ಎದುರಿಸಿದ್ದ ಅಹಿತಕರ ಘಟನೆಯನ್ನು ಈಗ ಅವರು ಹಂಚಿಕೊಂಡಿದ್ದಾರೆ. 

ಚಾಹಲ್‌ ಕಮ್‌ಬ್ಯಾಕ್ ಕಥೆ: ಟ್ವಿಟರ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಹಂಚಿಕೊಂಡ ವೀಡಿಯೊದಲ್ಲಿ, ಕರುಣ್ ನಾಯರ್ ಮತ್ತು ರವಿಚಂದ್ರನ್ ಅಶ್ವಿನ್ ಅವರೊಂದಿಗೆ ಚಹಾಲ್ ತಮ್ಮ "ಕಮ್‌ಬ್ಯಾಕ್ ಕಥೆಗಳನ್ನು" ವಿವರಿಸಿದ್ದಾರೆ. ಲೆಗ್ ಸ್ಪಿನ್ನರ್ ಚಹಲ್, ಹಲವರಿಗೆ ಗೊತ್ತಿಲ್ಲದ ಘಟನೆಯೊಂದರ ಬಗ್ಗೆ ವಿವರಿಸಿದ್ದಾರೆ. 2013 ರಲ್ಲಿ ಕುಡಿದ ಮತ್ತಿನಲ್ಲಿದ್ದ ಆಟಗಾರನೊಬ್ಬ ಅವರನ್ನು ಬಾಲ್ಕನಿಯಲ್ಲಿ ನೇತಾಡಿಸಿದ್ದರ ಬಗ್ಗೆ ಚಾಹಲ್ ಹೇಳಿಕೊಂಡಿದ್ದಾರೆ.‌ ಆದರೆ ಆ ಆಟಗಾರನ ಹೆಸರು ಮಾತ್ರ ಬಹಿರಂಗಪಡಿಸಿಲ್ಲ. 

ಬಾಲ್ಕನಿಯಲ್ಲಿ ನೇತುಹಾಕಿದ: "ನನ್ನ ಕಥೆ, ಕೆಲವರಿಗೆ ಗೊತ್ತಿದೆ. ನಾನು ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ, ನಾನು ಇದನ್ನು ಹಂಚಿಕೊಂಡಿಲ್ಲ. 2013 ರಲ್ಲಿ ನಾನು ಮುಂಬೈ ಇಂಡಿಯನ್ಸ್ ಜೊತೆಗಿದ್ದೆ. ಬೆಂಗಳೂರಿನಲ್ಲಿ ನಾವು ಪಂದ್ಯವನ್ನು ಆಡುತ್ತಿದ್ದೇವು. ಅದರ ನಂತರ ಒಂದು ಗೆಟ್ ಟುಗೆದರ್ ಇತ್ತು. ಒಬ್ಬ ಆಟಗಾರನಿದ್ದರು. ಅವನು ತುಂಬಾ ಕುಡಿದಿದ್ದ, ನಾನು ಅವನ ಹೆಸರನ್ನು ತೆಗೆದುಕೊಳ್ಳುವುದಿಲ್ಲ, ಅವನು ತುಂಬಾ ಕುಡಿದಿದ್ದನು; ಅವನು ನನ್ನನ್ನು ನೋಡುತ್ತಿದ್ದನು ಮತ್ತು ಅವನು ನನ್ನನ್ನು ಕರೆದು, ನನ್ನನ್ನು ಹೊರಗೆ ಕರೆದೊಯ್ದ ಬಾಲ್ಕನಿಯಲ್ಲಿ ನೇತುಹಾಕಿದನು, ” ಎಂದು ಚಾಹಲ್ ವೀಡಿಯೊದಲ್ಲಿ ಅಶ್ವಿನ್ ಮತ್ತು ನಾಯರ್‌ಗೆ ಹೇಳಿದ್ದಾರೆ.

ನಾನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದೇನೆ: "ನನ್ನ ಕೈಗಳು ಅವನ ಸುತ್ತಲೂ ಇದ್ದವು, ನಾನು 15 ನೇ ಮಹಡಿಯಲ್ಲಿದ್ದೆ, ನಾನು ನನ್ನ ಹಿಡಿತವನ್ನು ಕಳೆದುಕೊಂಡಿದ್ದರೆ.., ,ಇದ್ದಕ್ಕಿದ್ದಂತೆ ಅಲ್ಲಿದ್ದ ಅನೇಕ ಜನರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದರು. ನಾನು ಒಂದು ರೀತಿ ಮೂರ್ಛೆ ಹೋದೆ. ಅವರು ನನಗೆ ನೀರು ಕೊಟ್ಟರು, ಆಗ ನನಗೆ ಅರ್ಥವಾಯಿತು, ನೀವು ಎಲ್ಲಿಗಾದರೂ ಹೊರಗೆ ಹೋದರೆ ನೀವು ಎಷ್ಟು ಜವಾಬ್ದಾರರಾಗಿರಬೇಕು ಎಂದು. ಹಾಗಾಗಿ ಇದು ಒಂದು ಘಟನೆಯಾಗಿದ್ದು, ನಾನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದೇನೆ ಎಂದು ನಾನು ಭಾವಿಸಿದೆ. ಸಣ್ಣದೊಂದು ತಪ್ಪಾಗಿದ್ದರೆ, ನಾನು ಕೆಳಗೆ ಬೀಳುತ್ತಿದ್ದೆ" ಎಂದು ಅವರು ಹೇಳಿದ್ದಾರೆ.

Scroll to load tweet…

RCB ಮಾಜಿ ಆಟಗಾರ: 31 ವರ್ಷ ವಯಸ್ಸಿನ ಚಾಹಲ್ ಎಂಟು ವರ್ಷಗಳ ಕಾಲ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿದ್ದರು ಮತ್ತು ಬೆಂಗಳೂರು ಮೂಲದ ಫ್ರಾಂಚೈಸಿಗೆ ಅತ್ಯಂತ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದರು. ಎಂಟು ವರ್ಷಗಳಲ್ಲಿ, ಚಾಹಲ್ ಆರ್‌ಸಿಬಿ ಪರ 139 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಹೆಂಡತಿ ಇನ್ನೊಬ್ಬ ಕ್ರಿಕೆಟಿಗನ ಕೈ ಹಿಡಿದಾಗ ಖಿನ್ನತೆಗೊಳಗಾಗಿದ್ದರು Dinesh Karthik

ಚಾಹಲ್ ಅವರ ಪ್ರಸ್ತುತ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ನಡೆಯುತ್ತಿರುವ ಐಪಿಎಲ್‌ನಲ್ಲಿ ಎರಡು ಪಂದ್ಯಗಳನ್ನು ಗೆದ್ದಿದೆ. ಈ ಲೀಗ್‌ ಕಳೆದ ಪಂದ್ಯದಲ್ಲಿ ಚಹಲ್ ಹಳೆಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ರಾಜಸ್ಥಾನ್ ರಾಯಲ್ಸ್ ಸೋಲು ಕಂಡಿದೆ.