IPL 2022: ವಿರೋಧಿಗಳೇ RCB 68ಕ್ಕೆ ಆಲೌಟಾದ ಮಾತ್ರಕ್ಕೆ ಖುಷಿಪಡಬೇಡಿ..!

* ಸನ್‌ರೈಸರ್ಸ್ ಹೈದರಾಬಾದ್ ಎದುರು ಹೀನಾಯ ಸೋಲು ಕಂಡ ಆರ್‌ಸಿಬಿ

* ಆರ್‌ಸಿಬಿ ಸೋಲನ್ನು ವ್ಯಂಗ್ಯ ಮಾಡಿದ ವಿರೋಧಿ ಪಾಳಯದ ಫ್ಯಾನ್ಸ್

* ಆದರೆ ನೆನಪಿರಲಿ ಆರ್‌ಸಿಬಿ ತಂಡದ ಹೆಸರಿನಲ್ಲಿವೆ ಹಲವು ಅಪರೂಪದ ದಾಖಲೆಗಳು 

IPL 2022 trollers dont celebrate early  Royal Challengers Bangalore create several records in past kvn

ಬೆಂಗಳೂರು(ಏ.25): ಆಟ ಅಂದ್ಮೇಲೆ ಗೆಲುವು-ಸೋಲು ಕಾಮನ್​​. ಪಂದ್ಯದ ಬಳಿಕ ಆ ಸೋಲು-ಗೆಲುವಿನ ಚರ್ಚೆಯೂ ಕಾಮನ್​​. ಅದ್ರಲ್ಲೂ ಐಪಿಎಲ್ ಟೂರ್ನಿ ಅಂದ್ರೆ ಅದು ಇನ್ನೂ ಹೆಚ್ಚೇ. ಸನ್​ರೈಸರ್ಸ್​ ಹೈದ್ರಾಬಾದ್​ (Sunrisers Hyderabad) ವಿರುದ್ಧ ಆರ್​ಸಿಬಿ (RCB) ಕೇವಲ 68ಕ್ಕೆ ಆಲೌಟಾಗಿ ದೊಡ್ಡ ಮುಖಭಂಗ ಅನುಭವಿಸಿತ್ತು. ವಿರೋಧಿಗಳಂತೂ ಈ ಹೀನಾಯ ಸೋಲನ್ನ ಸಖತ್​ ಸಂಭ್ರಮಿಸಿದ್ರು. ಪಂದ್ಯ ಬಳಿಕ ನಿಮ್​ ಕಥೆನೇ ಇಷ್ಟೇ ಗುರು ಅಂತೆಲ್ಲಾ ಟೀಕೆನೂ ಮಾಡಿದ್ರು. ಆದ್ರೆ ಆರ್​ಸಿಬಿ ವಿರೋಧಿಗಳೇ ನಿಮಗೆ ಒಂದು ಸಂಗತಿ ಸದಾ ನೆನಪಿರ್ಲಿ. ಆರ್​ಸಿಬಿ ಅನ್ನೋ ಫೈಯರ್​ ಬ್ರಾಂಡ್​​ ಬರೀ ಇಂತಹ ಕೆಟ್ಟ ದಾಖಲೆಗಳನ್ನ ಐತಿಹಾಸದ ಪುಟದಲ್ಲಿ ದಾಖಲಿಸಿಲ್ಲ. ಬದಲಿಗೆ ಖ್ಯಾತ ದಾಖಲೆಗಳನ್ನ ಅದು ನಿರ್ಮಿಸಿದೆ. ಈವರೆಗೂ ಯಾವ ತಂಡವೂ ಆರ್​ಸಿಬಿ ತಂಡದ ಶ್ರೇಷ್ಠ ದಾಖಲೆಗಳನ್ನ ಅಳಿಸಿ ಹಾಕಲು ಸಾಧ್ಯವಾಗಿಲ್ಲ. ಅಂತಹ ದಾಖಲೆಗಳನ್ನ ತೋರಿಸ್ತೀವಿ ನೋಡಿ. 

ಪಂದ್ಯವೊಂದರಲ್ಲೇ ಗರಿಷ್ಠ ಸ್ಕೋರ್ ಬಾರಿಸಿದೆ ಆರ್​ಸಿಬಿ:

ಆರ್​ಸಿಬಿ ತಂಡ ಪಂದ್ಯವಾಡುತ್ತಿದೆ ಅಂದ್ರೆ ಅಲ್ಲಿ ಬೌಂಡ್ರಿ-ಸಿಕ್ಸರ್​ಗಳ ಸುರಿಮಳೆ ಜೊತೆ ರನ್ ಹೊಳೆಯೇ ಹರಿಯುತ್ತೆ. ಐಪಿಎಲ್​​​ನ ಪಂದ್ಯವೊಂದರಲ್ಲಿ ಅತಿಹೆಚ್ಚು ರನ್ ಹೊಡೆದ ಸಾಧನೆಯನ್ನೂ ಮಾಡಿದೆ. 2013ರ ಪುಣೆ ವಾರಿಯರ್ಸ್ ವಿರುದ್ಧ ಆರ್​ಸಿಬಿ 3 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿತ್ತು. ಇದೇ ಇದುವರೆಗಿನ ಐಪಿಎಲ್​ನಲ್ಲಿ ಒಂದು ತಂಡದ ಗರಿಷ್ಠ ಮೊತ್ತವಾಗಿದೆ. ಆ ಪಂದ್ಯದಲ್ಲಿ ಕ್ರಿಸ್ ಗೇಲ್​ 66 ಬಾಲ್​ನಲ್ಲಿ 13 ಬೌಂಡ್ರಿ, 17 ಸಿಕ್ಸ್ ಸಹಿತ 175 ರನ್ ಸಿಡಿಸಿದ್ದರು.

ದಾಖಲೆಯ 200 ಪ್ಲಸ್ ಜೊತೆಯಾಟ:

ಈ ದಾಖಲೆಯೂ ಆರ್​ಸಿಬಿ ಬಳಿಯೇ ಇದೆ. ಐಪಿಎಲ್​ನಲ್ಲಿ 4 ಸಲ 200 ಪ್ಲಸ್​ ರನ್ ಜೊತೆಯಾಟಗಳು ಮೂಡಿ ಬಂದಿವೆ. ಅದರಲ್ಲಿ  ಆರ್​ಸಿಬಿ ತಂಡ ಒಂದೇ ಮೂರು ಸಲ 200 ಪ್ಲಸ್​ ರನ್​ಗಳ ಜೊತೆಯಾಟವಾಡಿದೆ. ಮೂರು ಜೊತೆಯಾಟದಲ್ಲೂ ವಿರಾಟ್ ಕೊಹ್ಲಿ ಆಡಿದ್ದರು ಅನ್ನೋದೇ ವಿಶೇಷ. 2016ರ ಸೀಸನ್​ನಲ್ಲಿ ಕೊಹ್ಲಿ ಮತ್ತು ಎಬಿಡಿ 229 ರನ್​ಗಳ ಜೊತೆಯಾಟವಾಡಿ ದಾಖಲೆ ನಿರ್ಮಿಸಿದ್ದರು.

IPL 2022 ಬ್ಯಾಟಿಂಗ್ ವಿಭಾಗದ ಪರೇಡ್, ಸನ್ ರೈಸರ್ಸ್ ವಿರುದ್ಧ ಹೀನಾಯ ಸೋಲು ಕಂಡ RCB!

ಐಪಿಎಲ್​ ಇತಿಹಾಸದಲ್ಲಿ  ಕಮ್ಮಿ ಮೊತ್ತಕ್ಕೆ  ಆಲೌಟ್:

ಈ ಅಪಖ್ಯಾತಿಯೂ ಆರ್​ಸಿಬಿ ಹೆಸರಿನಲ್ಲಿದೆ. 2017ರ ಸೀಸನ್​ನಲ್ಲಿ ಕೆಕೆಆರ್​ ವಿರುದ್ಧ ಜಸ್ಟ್​ 49 ರನ್​ಗೆ ಆಲೌಟ್ ಆಗಿತ್ತು. ಈ ಪಂದ್ಯ ಏಫ್ರಿಲ್​ 23 ರಂದು ನಡೆದಿತ್ತು. ಮೊನ್ನೆ ಹೈದ್ರಾಬಾದ್​ ವಿರುದ್ಧ 68ಕ್ಕೆ ಸರ್ವಪತನ ಕಂಡಿತ್ತು. ಇದು ಆರ್​ಸಿಬಿಯ 4ನೇ ಅತಿ ಕನಿಷ್ಠ ಸ್ಕೋರ್​​. ಈ ಪಂದ್ಯವೂ ಏಫ್ರಿಲ್​ 23 ರಂದೇ ನಡೆದಿರೋದು ಕಾಕತಾಳೀಯ.

ಇದಿಷ್ಟೇ ಅಲ್ಲದೇ ಟೂರ್ನಿ ಇತಿಹಾಸದಲ್ಲಿ ಅಧಿಕ ಸಿಕ್ಸ್​  ಹಾಗೂ ಅಧಿಕ ಸೆಂಚುರಿ ಬಾರಿಸಿದ ತಂಡ ಕೂಡ ಆರ್​ಸಿಬಿ ಎನಿಸಿಕೊಂಡಿದೆ. ಇಂತಹ ತಂಡಕ್ಕೆ ಲೋಯೆಸ್ಟ್​ ಸ್ಕೋರ್​​ಗೆ ಆಲೌಟಾಗೋದು, ಹೈಯೆಸ್ಟ್​  ಸ್ಕೋರ್​​​ ದಾಖಲಿಸೋದು ಹೊಸತೇನೂ ಅಲ್ಲ ಬಿಡಿ.

Latest Videos
Follow Us:
Download App:
  • android
  • ios