Asianet Suvarna News Asianet Suvarna News

ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್‌ಗೆ ಬಂದಳಿದ 6 ಪಾಕಿಸ್ತಾನ ಕ್ರಿಕೆಟಿಗರಿಗೆ ಕೊರೋನಾ!

ನಾಲ್ಕು ಬಾರಿ ಕೊರೋನಾ ವೈರಸ್ ಪರೀಕ್ಷೆ ಮಾಡಿಸಿದ ಪಾಕಿಸ್ತಾನ ಕ್ರಿಕೆಟಿಗರು ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್ ಬಂದಿಳಿದ್ದಾರೆ. ಆದರೆ ಕಿವೀಸ್ ನಾಡಲ್ಲ ಮಾಡಿದ ಪರೀಕ್ಷೆಯಲ್ಲಿ 6 ಪಾಕಿಸ್ತಾನ ಕ್ರಿಕೆಟಿಗರಿಗೆ ಕೊರೋನಾ ಪಾಸಿಟೀವ್. ಇದೀಗ ಟೂರ್ನಿ ಆಯೋಜನೆಗೆ ತೀವ್ರ ಹಿನ್ನಡೆ ಎದುರಾಗಿದೆ
 

6 members of Pakistan team test positive for Covid 19 in New Zealand ckm
Author
Bengaluru, First Published Nov 26, 2020, 3:58 PM IST

ವೆಲ್ಲಿಂಗ್ಟನ್(ನ.26): ನ್ಯೂಜಿಲೆಂಜ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಭರದ ಸಿದ್ಧತೆ ನಡೆಸಿ ನ್ಯೂಜಿಲೆಂಡ್‌ಗೆ ಪ್ರಯಾಣ ಬೆಳೆಸಿದೆ. ಪಾಕಿಸ್ತಾನದಲ್ಲಿ ಬಯೋಬಬಲ್  ಬೌಂಡರಿ ಗೆರೆ ದಾಟಿ ಪಾಕಿಸ್ತಾನ ಕ್ರಿಕೆಟಿಗರು ಹೊರಗಡೆ ಹೋಗಿಲ್ಲ. ಪಾಕಿಸ್ತಾನದಲ್ಲಿ 4 ಬಾರಿ ಕೊರೋನಾ ಟೆಸ್ಟ್ ನಡೆಸಿ ನೆಗಟೀವ್ ವರದಿಯೊಂದಿಗೆ ನ್ಯೂಜಿಲೆಂಡ್‌ಗೆ ಬಂದಳಿದ ಪಾಕಿಸ್ತಾನ ಕ್ರಿಕೆಟಿಗರ ಪೈಕಿ 6 ಕ್ರಿಕೆಟಿಗರಿಗೆ ಕೊರೋನಾ ಪಾಸಿಟೀವ್ ವರದಿ ಬಂದಿದೆ.

ವೇಗವಾಗಿ ಬೌಲಿಂಗ್ ಮಾಡಲು ನಾನ್ಯಾವತ್ತು ಡ್ರಗ್ಸ್ ತೆಗೆದುಕೊಳ್ಳುತ್ತಿರಲಿಲ್ಲ; ಅಖ್ತರ್

ನ್ಯೂಜಿಲೆಂಡ್ ಬಂದಿಳಿದ ಪಾಕಿಸ್ತಾನ ಕ್ರಿಕೆಟಿಗರು ನಿಯಮದ ಪ್ರಕರಾ ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ಈ ವೇಳೆ 6 ಕ್ರಿಕೆಟಿಗರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಹೀಗಾಗಿ 6 ಕ್ರಿಕೆಟಿಗರು ಐಸೋಲೇಶನ್‌ಗೆ ಒಳಗಾಗಿದ್ದಾರೆ. 6 ಕ್ರಿಕೆಟಿಗರ ಹೆಸನ್ನು ಬಹಿರಂಗ ಪಡಿಸುವುದಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಸಂಸ್ಥೆ ಹೇಳಿದೆ.

8 ತಿಂಗಳ ಬಳಿಕ ಆರಂಭಗೊಂಡ ಪಾಕಿಸ್ತಾನ ಸೂಪರ್ ಲೀಗ್ ಪಂದ್ಯ ನಿಲ್ಲಿಸಿದ ನಾಯಿ!.

ಪಾಕಿಸ್ತಾನ ಕ್ರಿಕೆಟ್ ತಂಡದ 6 ಮಂದಿಗೆ ಕೊರೋನಾ ವೈರಸ್ ತಗುಲಿರುವ ಕಾರಣ ಅಭ್ಯಾಸವನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಐಸೋಲೇಶನ್‌ಗೆ ಒಳಗಾದ ಪಾಕಿಸ್ತಾನ ಕ್ರಿಕೆಟಿಗರಲ್ಲಿ ಕೆಲವು ನಿಯಮ ಉಲ್ಲಂಘಿಸಿದ್ದಾರೆ. ಹೊರಗಡೆ ಸುತ್ತಾಡುವುದು ಗಮನಕ್ಕೆ ಬಂದಿದೆ. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. 

ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡ ಟಿ20 ಹಾಗೂ ಟೆಸ್ಟ್ ಸರಣಿಗಾಗಿ ನ್ಯೂಜಿಲೆಂಡ್‌ಗೆ ತೆರಳಿದೆ. ಡಿಸೆಂಬರ್ 18 ರಿಂದ ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಸರಣಿ ಆರಂಭಗೊಳ್ಳಲಿದೆ.
 

Follow Us:
Download App:
  • android
  • ios