* ಚೊಚ್ಚಲ ಐಪಿಎಲ್ ಟ್ರೋಫಿಯ ಕನವರಿಕೆಯಲ್ಲಿದೆ ಆರ್‌ಸಿಬಿ* 14 ವರ್ಷಗಳಿಂದಲೂ ಐಪಿಎಲ್ ಟ್ರೋಫಿ ಗೆಲ್ಲಲು ವಿಫಲವಾಗಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು* ಈ ಬಾರಿ ಆರ್‌ಸಿಬಿ ಐಪಿಎಲ್ ಟ್ರೋಫಿ ಗೆಲ್ಲಲು ಇದೆ ಸುವರ್ಣಾವಕಾಶ
ಬೆಂಗಳೂರು(ಏ.19): ಈ ಸಲ ಕಪ್ ನಮ್ದೇ (E Sala Cup Namde), ಈ ಸಲ ಕಪ್ ನಮ್ದೇ, ಈ ಸಲ ಕಪ್ ನಮ್ದೇ. ಹೀಗಂತ ಪ್ಲೇಯರ್ಸ್, ಫ್ಯಾನ್ಸ್ 14 ವರ್ಷದಿಂದ ಅಂದಿದ್ದೇ ಬಂತು, ಆದ್ರೆ ಈವರೆಗೆ ಕಪ್ ಮಾತ್ರ ಆರ್ಸಿಬಿಯದ್ದಾಗಿಲ್ಲ. ಹಾಗಂತ ಕೆಂಪಂಗಿ ಸೈನ್ಯ ಕುಗ್ಗಿಲ್ಲ. ಇಂದಲ್ಲ ನಾಳೆ, ಕಪ್ ಗೆದ್ದೇ ತೀರುವ ಹುಮ್ಸಸ್ಸಿನಲ್ಲಿದೆ. ಪ್ರತಿ ಸಲದಂತೆ ಈ ಬಾರಿನೂ ಕಪ್ ಗೆಲ್ಲುವ ಛಲದೊಂದಿಗೆ RCB ಅಖಾಡಕ್ಕೆ ಧುಮುಕಿದೆ. 6ರಲ್ಲಿ ನಾಲ್ಕು ಗೆದ್ದು ಅದನ್ನು ನಿಜವಾಗಿಸುವತ್ತ ಹೆಜ್ಜೆ ಇಟ್ಟಿದೆ. ಇನ್ನೂ ಈ ಸಲ ಆರ್‌ಸಿಬಿ ಹಿಂದಿನಂತಿಲ್ಲ. ಕಂಪ್ಲೀಟ್ಲಿ ಬದಲಾಗಿದೆ. ಹೊಸ ಕ್ಯಾಪ್ಟನ್ ಎಂಟ್ರಿ ಬಳಿಕ, ಹೊಸ ಎನರ್ಜಿ ಬಂದಿದೆ. ಹೀಗಾಗಿ ಈ ಸಲ RCB ಕಪ್ ಗೆದ್ದೇ ಗೆಲ್ಲುತ್ತೆ ಅನ್ನೋ ಹೊಸ ಆಶಾಭಾವ ಮೂಡಿದೆ. ಜೊತೆಗೆ ಈ ಐದು ಕಾರಣಗಳು ಖಂಡಿತ RCB ಚೊಚ್ಚಲ ಟ್ರೋಫಿ ಎತ್ತಿ ಹಿಡಿಯಲು ನೆರವಾಗಲಿವೆ.
ರೀಸನ್-1 - ಡುಪ್ಲೆಸಿಸ್ ಜೀನಿಯಸ್ & ಅನುಭವಿ ಕ್ಯಾಪ್ಟನ್:
ಫಾಫ್ ಡು ಪ್ಲೆಸಿಸ್ RCBಗೆ ಎಂಟ್ರಿ ಕೊಡ್ತಿದ್ದಂತೆ ಕಪ್ ಕನಸು ಚಿಗುರೊಡೆದಿದೆ. ಯಾಕಂದ್ರೆ ಪ್ಲೆಸಿಸ್ ಜೀನಿಯಸ್ ಕ್ರಿಕೆಟರ್ ಮತ್ತು ಅನುಭವಿ ಕ್ಯಾಪ್ಟನ್. ದಕ್ಷಿಣ ಆಫ್ರಿಕಾ ಕಂಡ ಯಶಸ್ವಿ ನಾಯಕ. ದಕ್ಷಿಣ ಆಫ್ರಿಕಾ ಪರ ನಾಯಕನಾಗಿ 115 ಪಂದ್ಯಗಳಲ್ಲಿ 70 ಗೆಲ್ಲಿಸಿದ್ದಾರೆ. ನಾಲ್ಕು ಬಾರಿ ಚಾಂಪಿಯನ್ ಆಗಿರೋ ಚೆನ್ನೈ ತಂಡದಲ್ಲಿ ಹಿಂದೆ ಆಡಿ ಕೂಲೆಸ್ಟ್ ಬ್ರೈನ್ ಧೋನಿ ಗರಡಿಯಲ್ಲಿ ಪಳಗಿದ್ದಾರೆ. ಸದ್ಯ ಈ ಅನುಭವ ಪ್ಲೆಸಿಸ್ ಕೈಹಿಡಿತಿದೆ. ನಾಯಕನಾಗಿ ಆರ್ಸಿಬಿಗೆ ಪ್ರಶಸ್ತಿ ಗೆಲ್ಲಿಸಿಕೊಟ್ರು ಅಚ್ಚರಿಯೇನಿಲ್ಲ.
ರೀಸನ್-2- ಯಂಗ್ಸ್ಟರ್ಸ್ ಘರ್ಜನೆ:
ಇನ್ನು ಯಂಗ್ಸ್ಟರ್ಸ್ಗಳಾದ ಅನೂಜ್ ರಾವತ್, ಶಹಬಾಜ್ ಅಹ್ಮದ್ ಹಾಗೂ ಸುಯಾಶ್ ಪ್ರಭುದೇಸಾಯಿ ಇಂಪ್ರೆಸ್ಸಿವ್ ಆಟವಾಡ್ತಿದ್ದಾರೆ. ಇದು RCB ಬ್ಯಾಟಿಂಗ್ ವಿಭಾಗಕ್ಕೆ ಹೊಸ ಚೈತನ್ಯ ತುಂಬಿದೆ. ಇನ್ನುಳಿದ ಪಂದ್ಯಗಳಲ್ಲೂ ಈ ಯಂಗ್ಸ್ಟರ್ಸ್ ಘರ್ಜಿಸಿದ್ರೆ, ಆರ್ಸಿಬಿಗೆ ಕಪ್ ಮಿಸ್ಸಾಗೋ ಮಾತೇ ಇಲ್ಲ.
ICC T20 World Cup: ಮ್ಯಾಚ್ ಫಿನಿಶರ್ ಪಾತ್ರಕ್ಕೆ ಯಾರು ಹಿತವರು ಈ ನಾಲ್ವರಲ್ಲಿ..?
ರೀಸನ್-3- ಹಸರಂಗ ಸ್ಪಿನ್ ಮ್ಯಾಜಿಕ್.ಎದುರಾಳಿ ಶೇಕ್..:
ಆಕ್ಷನ್ನಲ್ಲಿ 10.75 ಕೋಟಿಗೆ ವನಿಂದು ಹಸರಂಗರನ್ನ RCB ಖರೀದಿಸಿತ್ತು. ಆ ನಂಬಿಕೆಯನ್ನ ಲೆಗ್ ಬ್ರೇಕರ್ ಉಳಿಸಿಕೊಂಡಿದ್ದು, ವಿಕೆಟ್ ಸರಮಾಲೆ ಕಟ್ಟಿದ್ದಾರೆ. ಈವರೆಗೆ 11 ವಿಕೆಟ್ ಕಬಳಿಸಿ ಸ್ಪಿನ್ ಕೈಚಳಕ ತೋರಿದ್ದಾರೆ. ಇದು ರಿಪೀಟ್ ಆದ್ರೆ ಎದುರಾಳಿ ಪಡೆ ಶೇಕ್ ಆಗಿ, ಆರ್‌ಸಿಬಿ ಕಪ್ ಎತ್ತಿ ಹಿಡಿದು ಶೈನ್ ಆಗಲಿದೆ.
ರೀಸನ್-4 ರಣಕಲಿ ಡಿಕೆ ವೀರಾವೇಶ:
ಒಂದು ಟೈಮ್ನಲ್ಲಿ RCB ಅಂದ್ರೆ ಕೊಹ್ಲಿ, ಎಬಿಡಿ ಅನ್ನುವಂತಾಗಿತ್ತು. ಆದ್ರೀಗ RCBಯಲ್ಲಿ ಡಿಕೆ ಹೆಸರು ಪ್ರತಿಧ್ವನಿಸ್ತಿದೆ. ಮ್ಯಾಚ್ ವಿನ್ನರ್, ಫಿನಿಶರ್ ಆಗಿ ರನ್ ಹೊಳೆ ಹರಿಸ್ತಿದ್ದಾರೆ. 207ರ ಸ್ಟ್ರೈಕ್ರೇಟ್ನಲ್ಲಿ 197 ರನ್ ಕಲೆಹಾಕಿದ್ದಾರೆ. ಡಿಕೆ ಆರ್ಭಟ ಸದ್ಯ ಆರ್‌ಸಿಬಿ ವಿಕ್ಟರಿ ಕೇಕೆಗೆ ಕಾರಣವಾಗ್ತಿದೆ. ಒಂದು ವೇಳೆ ತಮಿಳ್ ಮಗನ್ ಈ ಸಿಂಹಘರ್ಜನೆ ಮುಂದುವರಿದ್ರೆ 14 ವರ್ಷದ ಆರ್‌ಸಿಬಿ ಟ್ರೋಫಿ ಬರ ನೀಗೋದ್ರಲ್ಲಿ ಯಾವುದೇ ಸಂದೇಹವಿಲ್ಲ.
ರೀಸನ್-5 ಫವರ್ಫುಲ್ ಬ್ಯಾಟಿಂಗ್ & ಬೌಲಿಂಗ್ ಲೈನ್ಅಪ್:
ಇನ್ನು ಕಳೆದ ಬಾರಿಗೆ ಹೋಲಿಸಿದ್ರೆ ಈ ಸಲ RCB ತಂಡ ಫವರ್ಫುಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ಪಡೆಯನ್ನ ಹೊಂದಿದೆ. ಬ್ಯಾಟಿಂಗ್ನಲ್ಲಿ ಪ್ಲೆಸಿಸ್, ಕೊಹ್ಲಿ, ಮ್ಯಾಕ್ಸ್ವೆಲ್ ಎದುರಾಳಿಯನ್ನ ಡೆಸ್ಟ್ರಾಯ್ ಮಾಡಿದ್ರೆ, ಬೌಲಿಂಗ್ನಲ್ಲಿ ಹರ್ಷಲ್ ಪಟೇಲ್, ಜೋಶ್ ಹೆಜಲ್ವುಡ್, ಸಿರಾಜ್ ವಿಕೆಟ್ ಬೇಟೆಯಾಡ್ತಿದ್ದಾರೆ. ಇದರಿಂದಾಗಿ ಸಾಂಘಿಕ ಪ್ರದರ್ಶನ ಮೂಡಿ ಬರ್ತಿದೆ. ಇದು ಹೀಗೆ ಮುಂದುವರಿದಿದ್ದೇ ಆದಲ್ಲಿ ಆರ್ಸಿಬಿಯ 14 ವರ್ಷದ ಕಪ್ ವನವಾಸ ಕೊನೆಗೊಂಡು, ಚೊಚ್ಚಲ ಟ್ರೋಫಿಯನ್ನ ಎತ್ತಿ ಹಿಡಿಯಲಿದೆ.
