ಪರ್ತ್[ನ.09]: ಪಾಕಿ​ಸ್ತಾನ ವಿರುದ್ಧ 3ನೇ ಹಾಗೂ ಅಂತಿಮ ಟಿ20 ಪಂದ್ಯ​ದಲ್ಲಿ 10 ವಿಕೆಟ್‌ ಗೆಲುವು ಸಾಧಿ​ಸಿದ ಆಸ್ಪ್ರೇ​ಲಿಯಾ, 3 ಪಂದ್ಯ​ಗಳ ಸರ​ಣಿ​ಯನ್ನು 2-0 ಅಂತ​ರ​ದಲ್ಲಿ ಗೆದ್ದು​ಕೊಂಡಿದೆ. ಪಿಂಚ್ ಅಜೇಯ ಅರ್ಧಶತಕ ಸಿಡಿಸಿದರೆ, ವಾರ್ನರ್ 48 ರನ್ ಬಾರಿಸಿದರು.

2ನೇ ಟಿ20: ಪಾಕಿ​ಸ್ತಾನ ವಿರುದ್ಧ ಆಸಿಸ್‌ಗೆ ಜಯ

ಶುಕ್ರ​ವಾರ ಇಲ್ಲಿ ನಡೆದ ಪಂದ್ಯ​ದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್‌ ಮಾಡಿದ ಪಾಕಿ​ಸ್ತಾನ 20 ಓವ​ರಲ್ಲಿ 8 ವಿಕೆಟ್‌ ನಷ್ಟಕ್ಕೆ 106 ರನ್‌ಗಳ ಸಾಧಾ​ರಣ ಮೊತ್ತ ಕಲೆಹಾಕಿತು. ತಂಡದ ಮೊತ್ತ 22 ರನ್ ಗಳಾಗುವಷ್ಟರಲ್ಲಿ ಮೂವರು ಪಾಕ್ ಬ್ಯಾಟ್ಸ್’ಮನ್’ಗಳು ಪೆವಿಲಿಯನ್ ಸೇರಿದ್ದರು. ಪಾಕಿಸ್ತಾನ ಪರ ಇಫ್ತೀಕರ್ ಅಹಮ್ಮದ್[45] ಹಾಗೂ ಇಮಾಮ್ ಉಲ್ ಹಕ್[14] ಹೊರತುಪಡಿಸಿ ಉಳಿದ್ಯಾವ ಬ್ಯಾಟ್ಸ್’ಮನ್’ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ.

ಆಸಿಸ್‌-ಪಾಕ್‌ ಮೊದಲ ಟಿ20 ಮಳೆಗೆ ಬಲಿ!

ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್’ಸನ್ 3 ವಿಕೆಟ್ ಪಡೆದರೆ, ಸೀನ್ ಅಬೋಟ್, ಮಿಚೆಲ್ ಸ್ಟಾರ್ಕ್ ತಲಾ 2 ಹಾಗೂ ಆಸ್ಟನ್ ಅಗರ್ ಒಂದು ವಿಕೆಟ್ ಪಡೆದರು.

ಸುಲಭ ಗುರಿ ಬೆನ್ನ​ತ್ತಿದ ಆಸ್ಪ್ರೇಲಿ​ಯಾಕ್ಕೆ ಡೇವಿಡ್‌ ವಾರ್ನರ್‌ (48) ಹಾಗೂ ಆ್ಯರೋನ್‌ ಫಿಂಚ್‌ (52)  ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಿದರು. ಕೇವಲ 11.5 ಓವರ್‌ಗಳಲ್ಲಿ ಆಸಿಸ್‌ ಗೆಲುವು ಸಾಧಿಸಿ ಸಂಭ್ರ​ಮಿ​ಸಿತು. 2019ರಲ್ಲಿ ಆಸೀಸ್‌ ಟಿ20 ಮಾದ​ರಿ​ಯಲ್ಲಿ ಅಜೇ​ಯ​ವಾಗಿ ಉಳಿ​ದಿದೆ. ಆಡಿ​ರು​ವ 8 ಪಂದ್ಯ​ಗ​ಳಲ್ಲಿ 7ರಲ್ಲಿ ಗೆದ್ದರೆ, 1 ಪಂದ್ಯದಲ್ಲಿ ಫಲಿ​ತಾಂಶ ಹೊರ​ಬಂದಿ​ರ​ಲಿಲ್ಲ.

ಸ್ಕೋರ್‌: ಪಾಕಿ​ಸ್ತಾನ 106/8

ಆಸ್ಪ್ರೇ​ಲಿಯಾ 109/0