ಚೆನ್ನೈ(ಫೆ.12): ಭಾರತ ವಿರುದ್ದ ಫೆಬ್ರವರಿ 13ರಿಂದ ಇಲ್ಲಿನ ಚೆಪಾಕ್ ಮೈದಾನದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟಗೊಂಡಿದ್ದು, ತಂಡದಲ್ಲಿ 4 ಬದಲಾವಣೆಗಳಾಗಿವೆ.

ಗಾಯದ ಸಮಸ್ಯೆಯಿಂದ ಜೋಫ್ರಾ ಆರ್ಚರ್‌ ಎರಡನೇ ಟೆಸ್ಟ್‌ ಪಂದ್ಯದಿಂದ ಹೊರಬಿದ್ದಿದ್ದರೆ, ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜೋಸ್‌ ಬಟ್ಲರ್‌ಗೆ ಮುಂದಿನ ಮೂರು ಟೆಸ್ಟ್‌ ಪಂದ್ಯಗಳಿಂದ ವಿಶ್ರಾಂತಿ ನೀಡಲಾಗಿದೆ. ಇನ್ನುಳಿದಂತೆ ಡಾಮ್ ಬಿಸ್‌ ಹಾಗೂ  ಜೇಮ್ಸ್‌ ಆ್ಯಂಡರ್‌ಸನ್‌ಗೂ ಎರಡನೇ ಟೆಸ್ಟ್ ಪಂದ್ಯದ ಮಟ್ಟಿಗೆ ವಿಶ್ರಾಂತಿ ನೀಡಲಾಗಿದೆ. ಈ ನಾಲ್ವರ ಬದಲಿಗೆ ಬೆನ್ ಫೋಕ್ಸ್‌, ಮೋಯಿನ್ ಅಲಿ, ಸ್ಟುವರ್ಟ್ ಬ್ರಾಡ್ ಹಾಗೂ ಕ್ರಿಸ್ ವೋಕ್ಸ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗಿದೆ.

ಟೀಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಇಂಗ್ಲೆಂಡ್!

4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿನ ಮೊದಲ ಪಂದ್ಯವನ್ನು ಪ್ರವಾಸಿ ಇಂಗ್ಲೆಂಡ್ ತಂಡ 227 ರನ್‌ಗಳ ಅಂತರದ ಭರ್ಜರಿ ಗೆಲುವನ್ನು ದಾಖಲಿಸಿದ್ದು, ಈ ಗೆಲುವಿನ ಲಯವನ್ನು ಮುಂದುವರೆಸಿಕೊಂಡು ಹೋಗಲು ಜೋ ರೂಟ್‌ ಪಡೆ ಎದುರು ನೋಡುತ್ತಿದೆ.

ಇಂಗ್ಲೆಂಡ್ ತಂಡ ಹೀಗಿದೆ ನೋಡಿ:
ಡಾಮ್ ಸಿಬ್ಲಿ, ರೋರಿ ಬರ್ನ್ಸ್‌, ಡಾನ್ ಲಾರೆನ್ಸ್‌, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್‌, ಓಲಿ ಪೋಪ್‌, ಬೆನ್ ಫೋಕ್ಸ್‌(ವಿಕೆಟ್ ಕೀಪರ್), ಮೋಯಿನ್ ಅಲಿ, ಜಾಕ್ ಲೀಚ್, ಸ್ಟುವರ್ಟ್ ಬ್ರಾಡ್‌, ಕ್ರಿಸ್ ವೋಕ್ಸ್ ಹಾಗೂ ಓಲಿ ಸ್ಟೋನ್‌