ಚೆನ್ನೈ(ಫೆ.11):  ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ತಂಡ ಭರ್ಜರಿ ಆರಂಭ ಪಡೆದಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಇಂಗ್ಲೆಂಡ್ ಇದೀಗ ಸರಣಿ ಗೆಲುವಿನತ್ತ ಚಿತ್ತ ಹರಿಸಿದೆ. ಇದರ ನಡುವೆ ಟೀಂ ಇಂಡಿಯಾ ವಿರುದ್ಧದ ಟಿ20  ಸರಣಿಗೆ ಇಂಗ್ಲೆಂಡ್ ತಂಡ ಪ್ರಕಟಿಸಿದೆ.

ಇಂಗ್ಲೆಂಡ್ ಎದುರು ಎರಡನೇ ಟೆಸ್ಟ್‌ ಗೆಲ್ಲಬೇಕಿದ್ದರೆ ಟೀಂ ಇಂಡಿಯಾದಿಂದ 3 ಬದಲಾವಣೆ ಅನಿವಾರ್ಯ..!.

ಭಾರತ ಹಾಗೂ ಇಂಗ್ಲೆಂಡ್ ನಡುವೆ 5 ಟಿ20 ಪಂದ್ಯದ ಸರಣಿ ಆಯೋಜಿಸಲಾಗಿದೆ. ಮಾರ್ಚ್ 12 ರಿಂದ 20ರ ವರೆಗೆ ಅಹಮ್ಮದಾಬಾದ್‌ನಲ್ಲಿ ನಡೆಯಲಿರುವ ಈ ಚುಟುಕು ಸರಣಿಗೆ 16 ಸದಸ್ಯರ ತಂಡವನ್ನು ಇಂಗ್ಲೆಂಡ್ ಪ್ರಕಟಿಸಿದೆ. ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಹಾಗೂ ಜಾನಿ ಬೈರ್‌ಸ್ಟೋ ತಂಡ ಸೇರಿಕೊಂಡಿದ್ದಾರೆ.

ಚೆನ್ನೈ ಪಿಚ್‌ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ ಜೋಫ್ರಾ ಆರ್ಚರ್‌..!.

ಇಯಾನ್ ಮಾರ್ಗನ್ ನಾಯಕತ್ವದ ಬಲಿಷ್ಠ ಇಂಗ್ಲೆಂಡ್ ತಂಡ ಭಾರತಕ್ಕೆ ಕಠಿಣ ಸವಾಲು ನೀಡಲಿದೆ. ಇಂಗ್ಲೆಂಡ್ ಪ್ರಕಟಿಸಿದ 16 ಸದಸ್ಯರ ತಂಡ ಇಲ್ಲಿದೆ.

ಟಿ20 ಸರಣಿಗೆ ಇಂಗ್ಲೆಂಡ್ ತಂಡ:
ಇಯಾನ್ ಮಾರ್ಗನ್, ಮೊಯಿನ್ ಆಲಿ, ಜೋಫ್ರಾ ಆರ್ಚರ್, ಜೋನಾಥನ್ ಬೈರ್‌ಸ್ಟೋ, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕುರಾನ್, ಟಾಮ್ ಕುರನ್, ಕ್ರಿಸ್ ಜೋರ್ಡನ್, ಲಿಯಾನ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಅದಿಲ್ ರಶಿದ್,  ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸಿ ಟೊಪ್ಲಿ, ಮಾರ್ಕ್ ವುಡ್