ಸೆಂಚೂರಿಯನ್(ಡಿ.26)‌: ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ನಡುವಣ ಮೊದಲ ಟೆಸ್ಟ್‌ ಪಂದ್ಯ ಶನಿವಾರದಿಂದ ಇಲ್ಲಿನ ಸೂಪರ್‌ಸ್ಪೋರ್ಟ್‌ ಪಾರ್ಕ್ನಲ್ಲಿ ಆರಂಭವಾಗಲಿದೆ. 2 ಪಂದ್ಯಗಳ ಸರಣಿ ಇದಾಗಿದೆ. 

ಕಳೆದ 2 ವರ್ಷಗಳಿಂದಲೂ ಶ್ರೀಲಂಕಾ, ದ.ಆಫ್ರಿಕಾ ವಿರುದ್ಧ ಕ್ಲೀನ್‌ ಸ್ವೀಪ್‌ ಸಾಧನೆ ಮಾಡುತ್ತಿದೆ. ಈ ವರ್ಷ ಕೂಡ ಅದೇ ಉತ್ಸಾಹದಲ್ಲಿ ಲಂಕಾ ತಂಡವಿದೆ. 2018, 2019ರಲ್ಲಿ ಲಂಕಾ, ಆಫ್ರಿಕಾ ವಿರುದ್ಧ 2-0 ಯಿಂದ ಸರಣಿ ಗೆದ್ದಿದೆ. ಈ ವರ್ಷ ಕೂಡ ಗೆದ್ದು ಹ್ಯಾಟ್ರಿಕ್‌ ಸರಣಿ ಜಯಿಸುವ ವಿಶ್ವಾಸದಲ್ಲಿ ಲಂಕಾ ತಂಡವಿದೆ.

ವಿಕೆಟ್‌ ಖಾತೆ ತೆರೆದ ಸಿರಾಜ್; ಭಾರತದ ಹಿಡಿತದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್

ದಿಮುತ್‌ ಕರುಣರತ್ನೆ ಲಂಕಾ ತಂಡವನ್ನು ಮುನ್ನಡೆಸುತ್ತಿದ್ದರೆ, ಕ್ವಿಂಟನ್‌ ಡಿಕಾಕ್‌ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ತವರಿನಲ್ಲೇ ಅಗ್ನಿ ಪರೀಕ್ಷೆ ಎದುರಾಗಿದೆ.

ಸ್ಥಳ: ಸೆಂಚೂರಿಯನ್‌ 
ಆರಂಭ: ಮಧ್ಯಾಹ್ನ: 1.30ಕ್ಕೆ