Asianet Suvarna News Asianet Suvarna News

Ind vs NZ: ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ ನ್ಯೂಜಿಲೆಂಡ್

* ಭಾರತ ವರ್ಸಸ್ ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯ
* ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡಿದ ನ್ಯೂಜಿಲೆಂಡ್
* ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರೋ ಪಂದ್ಯ

1st T20I at Jaipur: New Zealand set 165 runs-target-to India rbj
Author
Bengaluru, First Published Nov 17, 2021, 9:09 PM IST

ಜೈಪುರ(ನ.17):  ಮಾರ್ಟಿನ್‌ ಗಪ್ಟಿಲ್‌ ಹಾಗೂ ಮಾರ್ಕ್ ಚಾಪ್ಮನ್ ಆಕರ್ಷಕ ಬ್ಯಾಟಿಂಗ್  ನೆರವಿನಿಂದ ನ್ಯೂಜಿಲೆಂಡ್ (New Zealand) ತಂಡ 6 ವಿಕೆಟ್ ಕಳೆದುಕೊಂಡು 164 ರನ್‌ ಬಾರಿಸಿದ್ದು, ಭಾರತಕ್ಕೆ ಗೆಲ್ಲಲು 165 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿದೆ

ಜೈಪುರದ ೯Jaipur) ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ಇಂದು (ನ.17) ನಡೆಯುತ್ತಿರುವ ಮೊದಲ ಟಿ20(T20) ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ (India) ಟಾಸ್ (Toss)ಗೆದ್ದು ಫಿಲ್ಡಿಂಗ್ ಆಯ್ದುಕೊಂಡಿತು..

Ind vs NZ: ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ , ಪಾದಾರ್ಪಣೆ ಮಾಡಿದ ವೆಂಕಟೇಶ್ ಅಯ್ಯರ್

ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್, 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 164 ಪೇರಿಸಿದೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕಣಕ್ಕಿಳಿದ ಮಾರ್ಟಿನ್‌ ಗಪ್ಟಿಲ್‌ ಭರ್ಜರಿ 4 ಸಿಕ್ಸರ್ ಹಾಗೂ 3 ಬೌಂಡರಿ ಬಾರಿಸಿ 42 ಎಸೆತಗಳಲ್ಲಿ ಬರೋಬ್ಬರಿ 70 ಬಾರಿಸಿದರು. ಈ ಮೂಲಕ ತಂಡಕ್ಕೆ ಆಸರೆಯಾದರು. ಗಪ್ಟಿಲ್‌ ಓಪನಿಂಗ್ ಬಂದಿದ್ದ ಡ್ಯಾರೆಲ್‌ ಮಿಚೆಲ್‌ ಯಾವುದೇ ರನ್ ಗಳಿಸದೇ ಶೂನ್ಯಕ್ಕೆ ಭುವನೇಶ್ವರ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು.

ಬಿಳಿಕ ಬಂದ ಮಾರ್ಕ್ ಚಾಪ್ಮನ್ ಟೀಂ ಇಂಡಿಯಾ ಬೌಲರ್‌ಗಳ ಬೆವರಿಸಿಳಿಸದರು. ಎರಡು ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ 50 ಎಸೆತಗಳಲ್ಲಿ 63 ರನ್‌ ಸೇರಿಸಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಇನ್ನು ಭಾರತ ಪರ ಅಶ್ವಿನ್, ಭುವನೇಶ್ವರ್ ಕುಮಾರ್ ತಲಾ 2 ವಿಕೆಟ್ ಪಡೆದುಕೊಂಡಿದ್ರೆ, ಚಹಾರ್ ಹಾಗೂ ಸಿರಾಜ್ ತಲಾ ಒಂದು ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. 

INNINGS BREAK!

A solid performance with the ball from #TeamIndia! 👍

2⃣ wickets each for @ashwinravi99 & @BhuviOfficial
1⃣ wicket each for @mdsirajofficial & @deepak_chahar9

Over to our batsmen now. #INDvNZ @Paytm

Scorecard ▶️ https://t.co/5lDM57TI6f pic.twitter.com/tynQJZlzes

— BCCI (@BCCI) November 17, 2021    

 

ಇಲ್ಲಿನ ಸವಾಯಿ ಮಾನ್‌ಸಿಂಗ್‌ ಮೈದಾನದಲ್ಲಿ ಬರೋಬ್ಬರಿ 8 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ ಮರಳಿದೆ. ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರು ಮೈದಾನ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದ್ದು, ದೀಪಕ್ ಚಹಾರ್, ಮೊಹಮ್ಮದ್ ಸಿರಾಜ್ ತಂಡ ಕೂಡಿಕೊಂಡಿದ್ದಾರೆ.

ಈ ಸರಣಿಯಲ್ಲಿ ಟೀಂ ಇಂಡಿಯಾ ನಿರೀಕ್ಷೆಯಂತೆಯೇ ಕೆಲವು ಪ್ರಯೋಗಗಳಿಗೆ ಕೈಹಾಕಲಿದೆ. ಯುಎಇನಲ್ಲಿ ನಿರಾಸೆ ಮೂಡಿಸಿದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯರನ್ನು (Hardik Pandya) ತಂಡದಿಂದ ಹೊರಗಿಟ್ಟಿರುವ ಭಾರತ, ಅವರ ಜಾಗದಲ್ಲಿ ವೆಂಕಟೇಶ್‌ ಅಯ್ಯರ್‌ರನ್ನು (Venkatesh Iyer) ಪರೀಕ್ಷಿಸಲು ಮುಂದಾಗಿದೆ. ಐಪಿಎಲ್‌ನಲ್ಲಿ ಕೆಕೆಆರ್‌ ತಂಡದಲ್ಲಿ ಮಿಂಚಿದ್ದ ವೆಂಕಿ ಅಯ್ಯರ್‌, ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲೂ ಮಧ್ಯಪ್ರದೇಶ ಪರ ಉತ್ತಮ ಆಟವಾಡಿದ್ದರು. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೋಲ್ಕತ ನೈಟ್‌ ರೈಡರ್ಸ್ ತಂಡವು ಫೈನಲ್‌ಗೇರುವಲ್ಲಿ ವೆಂಕಟೇಶ್ ಅಯ್ಯರ್ ಮಹತ್ವದ ಪಾತ್ರ ನಿಭಾಯಿಸಿದ್ದರು. ಕೆಕೆಆರ್ ಪರ ಆರಂಭಿಕನಾಗಿ ಯಶಸ್ವಿಯಾಗಿದ್ದ ವೆಂಕಟೇಶ್ ಅಯ್ಯರ್.

ತಂಡಗಳು ಹೀಗಿವೆ:

ಭಾರತ: ಕೆ.ಎಲ್‌.ರಾಹುಲ್‌, ರೋಹಿತ್ ಶರ್ಮಾ(ನಾಯಕ)‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌, ರಿಷಭ್‌ ಪಂತ್‌‌, ವೆಂಕಟೇಶ್‌ ಅಯ್ಯರ್‌, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಮೊಹಮದ್‌ ಸಿರಾಜ್‌.

ನ್ಯೂಜಿಲೆಂಡ್: ಮಾರ್ಟಿನ್‌ ಗಪ್ಟಿಲ್‌, ಡ್ಯಾರೆಲ್‌ ಮಿಚೆಲ್‌, ಮಾರ್ಕ್ ಚಾಪ್ಮನ್, ಗ್ಲೆನ್‌ ಫಿಲಿಫ್ಸ್‌, ಟಿಮ್‌ ಸೀಫರ್ಟ್‌(ವಿಕೆಟ್ ಕೀಪರ್), ರಚಿನ್ ರವಿಂದ್ರ‌, ಟಿಮ್‌ ಸೌಥಿ(ನಾಯಕ), ಮಿಚೆಲ್‌ ಸ್ಯಾಂಟ್ನರ್‌, ಟಾಡ್‌ ಆ್ಯಶ್ಲೆ‌, ಲಾಕಿ ಫಗ್ರ್ಯೂಸನ್‌, ಟ್ರೆಂಟ್ ಬೌಲ್ಟ್.

Follow Us:
Download App:
  • android
  • ios