ಲುಸ್ಸಾನ್ನೆ(ಏ.03): ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಅಧ್ಯಕ್ಷ ಥಾಮಸ್‌ ಬಾಚ್‌, ಟೋಕಿಯೋ ಒಲಿಂಪಿಕ್ಸ್‌ಗೆ ಸಹಕಾರ ನೀಡಿದ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. 

2020ರಲ್ಲಿ ನಡೆಯಬೇಕಿದ್ದ ಒಲಿಂಪಿಕ್ಸ್‌, ಕೊರೋನಾ ಸೋಂಕಿನ ಭೀತಿಯಿಂದಾಗಿ 2021ಕ್ಕೆ ಮುಂದೂಡಲ್ಪಟ್ಟಿದೆ. ಏ.1ರಂದು ಬರೆದಿರುವ ಪತ್ರದಲ್ಲಿ, ‘ಟೋಕಿಯೋ ಒಲಿಂಪಿಕ್ಸ್‌ಗೆ ನಿರಂತರ ಸಹಕಾರ ನೀಡಿದ್ದಕ್ಕೆ ಧನ್ಯವಾದ’ಎಂದು ಬಾಚ್ ತಿಳಿಸಿದ್ದಾರೆ. G20 ಶೃಂಗಸಭೆಯಲ್ಲಿ ಕೊರೋನಾ ವೈರಸ್‌ನಿಂದಾಗಿ ಟೋಕಿಯೋ ಒಲಿಂಪಿಕ್ಸ್ ಮುಂದೂಡುವ ವಿಚಾರವನ್ನು ಬೆಂಬಲಿಸಿದ್ದಕ್ಕೆ ನಾವು ನಿಮಗೆ ಆಭಾರಿಯಾಗಿರುತ್ತೇವೆ ಎಂದು ಬಾಚ್ ಪತ್ರ ಬರೆದಿದ್ದಾರೆ.

ನವದೆಹಲಿ ಶೂಟಿಂಗ್‌ ವಿಶ್ವಕಪ್‌ ಟೂರ್ನಿ ರದ್ದು?

2020ರಲ್ಲಿ ಜಪಾನಿನ ಟೋಕಿಯೋ ನಗರದಲ್ಲಿ ಜುಲೈ 24ರಿಂದ ಆಗಸ್ಟ್ 09ರವರೆಗೆ ನಡೆಯಬೇಕಿದ್ದ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವು ಕರೋನಾ ವೈರಸ್ ಭೀತಿಯಿಂದಾಗಿ 2021ರ ಜುಲೈ 23- ಆಗಸ್ಟ್ 08ಕ್ಕೆ ಮುಂದೂಡಲ್ಪಟ್ಟಿದೆ. 

ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಜಪಾನಿಯರು ಸಜ್ಜಾಗಿದ್ದ ರೀತಿಯನ್ನು ಐಓಸಿ ಕೊಂಡಾಡಿದೆ. ಮಾರಕ ಕೊರೋನಾ ವೈರಸ್ ಜಗತ್ತಿನಾದ್ಯಂತ ಸುಮಾರು 9 ಲಕ್ಷದ 40 ಸಾವಿರ ಜನರಿಗೆ ತಗುಲಿದ್ದು, 47 ಸಾವಿರಕ್ಕೂ ಅಧಿಕ ಮಂದಿ ಕೊನೆಯುಸಿರೆಳೆದಿದ್ದಾರೆ.