ಅಬ್ಬಬ್ಬಾ..! ಕೊರೋನಾ ಸೋಂಕು, ಚೀನಾವನ್ನು ಹಿಂದಿಕ್ಕಿದ ಅಮೆರಿಕಾ..!
ವಿಶ್ವದ ದೊಡ್ಡಣ್ಣ ಅಮೆರಿಕಾ ಇದೀಗ ಕೊರೋನಾ ವೈರಸ್‌ನಿಂದ ತತ್ತರಿಸಿ ಹೋಗಿದ್ದು, ಅತಿ ಹೆಚ್ಚು ಕೋವಿಡ್ 19 ವೈರಸ್ ಹೊಂದಿದ ಕುಖ್ಯಾತಿಗೆ ಒಳಗಾಗಿದೆ. ಈ ಕಳವಳಕಾರಿ ಸುದ್ದಿ ಇಲ್ಲಿದೆ ನೋಡಿ.
ವಾಷಿಂಗ್ಟನ್(ಮಾ.27): ವಿಶ್ವದಲ್ಲೇ ಅತ್ಯುನ್ನತ ಆರೋಗ್ಯ ಸೇವೆ ಹೊಂದಿರುವ ಅಮೆರಿಕದಲ್ಲಿ 4 ದಿನಗಳ ಅಂತರದಲ್ಲಿ 40 ಸಾವಿರ ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.
ಕೊರೋನಾ ಪರಿಹಾರ: 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದ ಕೇಂದ್ರ!
ಇದರಿಂದಾಗಿ ಸೋಂಕಿತರ ಸಂಖ್ಯೆ 85 ಸಾವಿರಕ್ಕೇರಿಕೆಯಾಗಿದ್ದು, ಇದೇ ಮೊದಲ ಬಾರಿಗೆ ಚೀನಾವನ್ನು ಅಮೆರಿಕಾ ಹಿಂದಿಕ್ಕಿದೆ. ಇದೇ ವೇಳೆ, ಸಾವಿನ ಸಂಖ್ಯೆ ಸಾವಿರದ ಗಡಿ ದಾಟಿದ್ದು, 1300ಕ್ಕೆ ಹೆಚ್ಚಳಗೊಂಡಿದೆ. ವಿಶ್ವದಲ್ಲೇ ಅತಿ ಹೆಚ್ಚು ಕೊರೋನಾ ಸೋಂಕಿತರಿರುವ ದೇಶಗಳ ಪಟ್ಟಿಯಲ್ಲಿ ಅಮೆರಿಕಾ ಮೊದಲ ಸ್ಥಾನ ಪಡೆದಿದ್ದು, ಚೀನಾ ಹಾಗೂ ಇಟಲಿ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.
ಲಾಕ್‌ಡೌನ್ ಎಫೆಕ್ಟ್: 1 ದಿನದಲ್ಲಿ ತೀರಕ್ಕೆ ಬಂತು 72 ಸಾವಿರಕ್ಕೂ ಹೆಚ್ಚು ಕಡಲಾಮೆ
ನ್ಯೂಯಾರ್ಕ್ ನಗರ ಅಮೆರಿಕದ ಕೊರೋನಾ ಕೇಂದ್ರವಾಗಿ ರೂಪುಗೊಂಡಿದ್ದು, ಆ ನಗರದಲ್ಲೇ 30000 ಮಂದಿಗೆ ಸೋಂಕು ದೃಢಪಟ್ಟಿದೆ. 285 ಜನ ಸಾವಿಗೀಡಾಗಿದ್ದಾರೆ. ಒಟ್ಟಿನಲ್ಲಿ ಅಮೆರಿಕಾದಲ್ಲಿ ಕೋವಿಡ್ 19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದು ವಿಶ್ವದ ದೊಡ್ಡಣ್ಣನ ತಲೆಬಿಸಿ ಹೆಚ್ಚುವಂತೆ ಮಾಡಿದೆ.
ಜಾಗತಿಕ ಮಟ್ಟದಲ್ಲಿ ಶುಕ್ರವಾರದ ಆರಂಭದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 5,32 ಲಕ್ಷ ಜನರಿಗೆ ತಗುಲಿದ್ದು, ಇದುವರೆಗೂ 24 ಸಾವಿರಕ್ಕೂ ಹೆಚ್ಚು ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನು ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 700ರ ಗಡಿದಾಟಿದ್ದು ಇದುವರೆಗೂ 20 ಮಂದಿ ಜೀವ ಕಳೆದುಕೊಂಡಿದ್ದಾರೆ.