ನ್ಯೂಯಾರ್ಕ್(ಮಾ.28): ಕೊರೋನಾ ಸೋಂಕಿತ ಜೋಡಿಯೊಂದು ಆಸ್ಪತ್ರೆಗೆ ಹೋಗದೆ ಮನೆಯಲ್ಲೇ ಮಲೇರಿಯಾ ಸೋಂಕಿನ ಔಷಧ ಸೇವಿಸಿದ ಪರಿಣಾಮ ಪತಿ ಸಾವನ್ನಪ್ಪಿದ ಘಟನೆ ಅಮೆರಿಕದ ಆರಿಜೋನಾದಲ್ಲಿ ನಡೆದಿದೆ. ಇನ್ನು ಸೋಂಕಿಗೆ ತುತ್ತಾಗಿದ್ದ ಸಂತ್ರಸ್ತನ ಪತ್ನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಲೇರಿಯಾ ಔಷಧಿಯು ಕೊರೋನಾವನ್ನು ಗುಣಪಡಿಸುತ್ತದೆ ಎಂಬುದನ್ನು ಇಂಟರ್ನೆಟ್‌ನಲ್ಲಿ ನೋಡಿದ್ದ ಹಿರಿಯ ದಂಪತಿ, ಅದರಂತೆಯೇ ಮಾಡಿದ್ದರು. ಆದರೆ, ಈ ಪೈಕಿ ಭಾನುವಾರವೇ ಪತಿ ಸಾವನ್ನಪ್ಪಿದ್ದು, ಆತನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಚ್ಚರ...! ಬಂದಿದೆ, ಕೊರೋನಾ ಮ್ಯಾಪ್‌ ಹೆಸರಲ್ಲಿ ಮಾಹಿತಿ ಕದಿಯುವ ವೈರಸ್‌!

ಹೀಗಾಗಿ, ಇಂಟರ್ನೆಟ್‌ ಸೇರಿದಂತೆ ಇನ್ನಿತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುವ ಗಾಳಿ ಮತ್ತು ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.