ವುಹಾನ್(ಏ.09): ಚೀನಾದ ವುಹಾನ್‌ನಲ್ಲಿ ಆರಂಭವಾದ ಕೊರೋನಾ ವೈರಸ್ ಇಟಲಿ, ಅಮೆರಿಕಾ, ಫ್ರಾನ್ಸ್, ಭಾರತ, ಸೇರಿದಂತೆ ಬಹುತೇಕ ರಾಷ್ಟ್ರಗಳನ್ನು ವ್ಯಾಪಿಸಿದೆ. ವುಹಾನ್‌ನಲ್ಲಿ ವೈರಸ್ ಆಟ್ಟಹಾಸ ಮರೆಯುತ್ತಿದ್ದಂತೆ ಇತರ ದೇಶದ ಜನರು ವಾಪಸ್ ಆಗಿದ್ದರು. ಆದರೆ ಕೆಲ ಭಾರತೀಯರು ಅಲ್ಲೇ ಉಳಿದುಕೊಂಡಿದ್ದರು. ಕೊರೋನಾ ವೈರಸ್ ಭೀಕರತೆಯೆ ಇಂಚಿಂಚು ನೋಡಿದ ಭಾರತೀಯರು ಇದೀಗ  ಕೊರೋನಾ ಹತೋಟಿಗೆ ತರಲು ಚೀನಾ ತೆಗೆದುಕೊಂಡ ಮಹತ್ವ ನಿರ್ಧಾದ ಕುರಿತು ಮಾಹಿತಿ ಬಹಿರಂಗ ಪಡಿಸಿದ್ದಾರೆ.

ಹೂ ಮೇಲೆ ದೊಡ್ಡಣ್ಣ ಕೆಂಗಣ್ಣು! ಹತಾಶ ಟ್ರಂಪ್ ಮುಂದಿನ ಪ್ಲಾನ್ ಏನು?.

ವುಹಾನ್‌ನಲ್ಲಿ 76 ದಿನದ ಲಾಕ್‌ಡೌನ್ ಬಳಿಕ ಮನೆಯಿಂದ ಹೊರಬಂದ ಭಾರತೀಯರು ಇದೀಗ ಅನಭವದ ಜೊತೆಗೆ ಭಾರತೀಯರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಇವರೆಲ್ಲರದ್ದು ಒಂದೇ ಮಾತು, ಕೊರೋನಾ ತೊಲಗಿಸಲು ಸಾಮಾಜಿಕ ಅಂತರ ಹಾಗೂ  ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಿದರೆ ಮಾತ್ರ ಸಾಧ್ಯ ಎಂದಿದ್ದಾರೆ. ಪ್ರಧಾನಿ ಮೋದಿ ಭಾರತದಲ್ಲಿ 21 ದಿನಗಳ ಲಾಕ್‌ಡೌನ್ ಹೇರಿದ್ದಾರೆ. ಇದೇ ಸಾಕಾಯ್ತು ಎನ್ನುತ್ತಿದ್ದಾರೆ. ಆದರೆ ವುಹಾನ್ ಜನತೆ ಬರೋಬ್ಬರಿ 76 ದಿನ ಮನೆಯಿಂದ ಹೊರಗೆ ಬಂದಿಲ್ಲ, ಬರುವಂತಿರಲಿಲ್ಲ.

ಕೊರೋನಾ ವ್ಯಾಪಕವಾಗಿ ಹರಡುತ್ತಿರುವ 15 ಜಿಲ್ಲೆ ಸಂಪೂರ್ಣ ಬಂದ್, ಯಾವ ಸೇವೆಯೂ ಲಭ್ಯವಿಲ್ಲ!

ವುಹಾನ್‌ನಲ್ಲಿ ಹೈಡ್ರೋಬಯೋಲಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿರುವ ಅರುಣ್‌ಜಿತ್ ಟಿ ಸತ್ರಜಿತ್ ಇದೀಗ ತಮ್ಮ ಅನುಭವ ಹೇಳಿದ್ದಾರೆ. ಸತತ 73 ದಿನ ನಾನು ರೂಂ ಬಿಟ್ಟು ಹೊರಗೆ ಬಂದಿಲ್ಲ. ವುಹಾನ್ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿತ್ತು. ಆಹಾರ, ನೀರು ಹೀಗೆ ಯಾವುದೇ ಕಾರಣಕ್ಕೆ ಹೊರಗೆ ಹೋಗುವಂತಿರಲಿಲ್ಲ. ಅಗತ್ಯವಸ್ತುಗನ್ನು ಚೀನಾ ಸರ್ಕಾರ ಮನೆಬಾಗಿಲಿಗೆ ತಲುಪಿಸುತ್ತಿತ್ತು. 76 ದಿನಗಳ ಬಳಿಕ ಲಾಕ್‌ಡೌನ್ ಆದೇಶ ಹಿಂಪಡೆಯಲಾಯಿತು. ಹೀಗಾಗಿ ಹೊರಬಂದಿದ್ದೇವೆ ಎಂದಿದ್ದಾರೆ.

ಇಷ್ಟೇ ಅಲ್ಲ, ಭಾರತೀಯರು ಸ್ವಯಂ ದಿಗ್ಬಂಧನಲ್ಲಿರುವುದೇ ಇದಕ್ಕೆ ಮದ್ದು, ಲಾಕ್‌ಡೌನ್ ಆದೇಶ ಪಾಲಿಸುವುದು, ವಾಸಿರುವ ಅಪಾರ್ಟ್‌ಮೆಂಟ್, ಬಿಲ್ಡಿಂಗ್‌ಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಇದಕ್ಕಿರುವ ಮಾರ್ಗ ಎಂದು ಅರುಣ್‌ಜಿತ್  ಹೇಳಿದ್ದಾರೆ.

ವುಹಾನ್‌ನಲ್ಲಿ ಕೊರೋನಾ ವೈರಸ್ ಭೀಕರತೆ ಅರಿವಾಗುತ್ತಿದ್ದಂತೆ  ಸುಮಾರು 700 ಮಂದಿ ಭಾರತೀಯರನ್ನು ವಿಮಾನದ ಮೂಲಕ ಕೇಂದ್ರ ಸರ್ಕಾರ ಭಾರತಕ್ಕೆ ಕರೆತಂದಿತ್ತು. ಆದರೆ ಅರಣ್‌ಜಿತ್ ವುಹಾನ್‌ನಿಂದ ಭಾರತಕ್ಕೆ ಆಗಮಿಸಲ ನಿರಾಕರಿಸಿದರು. ಕಾರಣ ಪಲಾಯನ ಮಾಡುವುದು ಭಾರತೀಯರ ಜಾಯಮಾನವಲ್ಲ ಎಂದು ಅರುಣ್‌ಜಿತ್ ಹೇಳಿದ್ದಾರೆ.

ಚೀನಾ ಸರ್ಕಾರ ತೆಗೆದುಕೊಂಡ ನಿರ್ಧಾರಗಳೇ ಕೊರೋನಾ ತೊಲಗಲು ಮುಖ್ಯ ಕಾರಣ. ಲಾಕ್‌ಡೌನ್ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿತ್ತು. ಎಲ್ಲರೂ ಸ್ವಯಂ ದಿಗ್ಬಂಧನಕ್ಕೊಳಗಾಗಿದ್ದರು. ಯಾರೂ ಕೂಡ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಭಾರತೀಯರು ಇದೇ ರೀತಿ ಅನುಸರಿಸಿದರೆ ಕೊರೋನಾ ಹರಡುವುದನ್ನು ತಡೆಯಲು ಸಾಧ್ಯ ಎಂದಿದ್ದಾರೆ.

ಚೀನಾದಲ್ಲಿ ಕೊರೋನಾ ವೈರಸ್ ಹರಡುತ್ತಿದ್ದಂತೆ ವಿವಿಧ ದೇಶದ ಪ್ರಜೆಗಳು ಚೀನಾದಿಂದ ತಮ್ಮ ತಮ್ಮ ದೇಶಕ್ಕೆ ತೆರಳಿದ್ದರು. ಕೆಲವರು ನಮ್ಮಿಂದ ಕೊರೋನಾ ಹರಡುವುದು ಬೇಡ ಎಂದು ಅಲ್ಲಿಯೇ ಉಳಿದುಕೊಂಡರು. ಹೀಗೆ ಉಳಿದುಕೊಂಡವರು ಹಲವು ಬಾರಿ ನಿರ್ಧಾರ ತಪ್ಪಾಯಿತೋ ಎಂದು ಮರು ವಿಮರ್ಷಿಸಿದವರೂ ಇದ್ದಾರೆ. ಕಾರಣ ಅಷ್ಟರ ಮಟ್ಟಿಗೆ ಚೀನಾದಲ್ಲಿ ಕೊರೋನಾ ತಾಂಡವವಾಡಿತ್ತು. ವುಹಾನ್ ಅಕ್ಷರಶಃ ನಲುಗಿ ಹೋಗಿತ್ತು. ಡಿಸೆಂಬರ್ ಅಂತ್ಯದಲ್ಲಿ ಕಾಣಿಸಿಕೊಂಡ ಕೊರೋನಾ ನಿಯಂತ್ರಿಸಲು ಚೀನಾ 3 ತಿಂಗಳು ತೆಗೆದುಕೊಂಡಿತು. ಇದೀಗ ಭಾರತ ಹಲವು ಕಠಿಣ ನಿರ್ಧಾರ ತೆಗೆದುಕೊಂಡಿದೆ. ಆದರೆ ಜನರಿಗೆ ಗಂಭೀರತೆ ಅರ್ಥವಾಗಿಲ್ಲ.