ಕೇಪ್‌ಟೌನ್(ಮಾ24): : ಕೊರೋನಾ ಗುಣಪಡಿಸುವುದಾಗಿ ನಂಬಿಸಿ ಕ್ರೈಸ್ತ ಪಾದ್ರಿಯೊಬ್ಬರು ಚರ್ಚ್ ನ ಹಲವು ಸದಸ್ಯರಿಗೆ ಡೆಟಾಲ್ ಕುಡಿಸಿದ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ಡೆಟಾಲ್ ಕುಡಿದವರ ಪೈಕಿ 59 ಮಂದಿ ಸಾವನ್ನಪ್ಪಿದ್ದು, ಇತರ ನಾಲ್ವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 

ಈ ಸಂಬಂಧ ಇಲ್ಲಿನ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿನ ಚರ್ಚ್ ಒಂದರ ಪಾದ್ರಿಯಾಗಿರುವ ರುಫಸ್ ಫಾಲಾ ಎಂಬುವವರು, ಮನುಷ್ಯನ ಕಾಯಿಲೆ ಗುಣಮುಖಪಡಿಸಲು ಡೆಟಾಲ್ ಅನ್ನು ಬಳಸುವಂತೆ ಆ ದೇವರೇ ನನಗೆ ಸೂಚಿಸಿದ್ದಾನೆ. 

ಹೀಗಾಗಿ, ನಾನೇ ಮೊದಲಿಗೆ ಡೆಟಾಲ್ ಕುಡಿಯುತ್ತೇನೆ. ಆ ನಂತರ ನೀವು ಕುಡಿಯಿರಿ. ಅಲ್ಲದೆ, ಡೆಟಾಲ್ ಅನ್ನು ಸೇವಿಸಿದ ಹಲವರು ತಾವು ಬಳಲುತ್ತಿದ್ದ ಹಲವು ಕಾಯಿಲೆಗಳಿಂದ ಗುಣವಾಗಿದ್ದಾಗಿ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ ಎಂದೆಲ್ಲಾ ನಂಬಿಸಿದ್ದ. ಇದನ್ನು ನಂಬಿದ ಹಲವರು ಡೆಟಾಲ್ ಕುಡಿದಿದ್ದರು.