ಇಸ್ಲಮಾಬಾದ್(ಮಾ.26) ಕೊರೋನಾ ಸೋಂಕಿ​ತ​ರನ್ನು ಕಂಡರೆ ಜನರು ದೂರ ನಿಲ್ಲು​ತ್ತಾರೆ. ಆದರೆ, ಪಾಕಿ​ಸ್ತಾ​ನ​ದಲ್ಲಿ ಇದು ಉಲ್ಟಾ. 

ಇರಾ​ನ್‌​ನಿಂದ ಹಿಂದಿ​ರು​ಗಿದ ರಾಜ​ಕಾ​ರ​ಣಿ​ಯೊಬ್ಬನಿಗೆ ಕೊರೋನಾ ವೈರಸ್‌ ತಗು​ಲಿದ್ದ ಹಿನ್ನೆ​ಲೆ​ಯಲ್ಲಿ ಆತ​ನನ್ನು ಸಿಂಧ್‌ ಪ್ರಾಂತ್ಯ​ದ​ಲ್ಲಿನ ಕ್ವಾರಂಟೈನ್‌ ಕೇಂದ್ರಕ್ಕೆ ದಾಖ​ಲಿ​ಸ​ಲಾ​ಗಿದೆ. ಆತನ ಕುಶ​ಲೋ​ಪ​ರಿ ವಿಚಾ​ರಿ​ಸಲು ಬಂದ ಆರು ಮಂದಿ ನಾಗ​ರಿಕ ಸೇವಾ ಸಿಬ್ಬಂದಿ ದೂರ​ದಿಂದಲೇ ಮಾತ​ನಾ​ಡಿ​ಸಿ​ಕೊಂಡು ಹೋಗು​ವು​ದನ್ನು ಬಿಟ್ಟು, ​ನಗುನಗುತ್ತಾ ಸೆಲ್ಫೀ ತೆಗೆ​ದು​ಕೊಂಡಿ​ದ್ದಾರೆ. 

ಕೊರೋನಾ ವೈರಸ್ ಸಂಬಂಧಿತ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಷ್ಟಕ್ಕೇ ಸುಮ್ಮ​ನಾ​ಗದ ಅವರು ಈ ಫೋಟೋ​ಗ​ಳನ್ನು ಸಾಮಾ​ಜಿಕ ಜಾಲ​ತಾ​ಣ​ಗ​ಳಲ್ಲೂ ಹಂಚಿ​ಕೊಂಡಿ​ದ್ದಾರೆ. 

ಈ ವಿಚಾರ ಬಯಲಾಗುತ್ತಿದ್ದಂತೆಯೇ ಸರ್ಕಕಾರ ಈ ಆರೂ ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿದೆ.