ಇಟಲಿಯಲ್ಲಿ ಮುಂದುವರೆದ ಕೊರೋನಾ ಪೀಡಿತರ ಸಾವಿನ ಸರಣಿ| 743 ಜನ ಸಾವು, ಸಾವಿನ ಸಂಖ್ಯೆ 6820ಕ್ಕೇರಿಕೆ

ರೋಮ್(ಮಾ.25): ಇಟಲಿಯಲ್ಲಿ ಕೊರೋನಾ ಪೀಡಿತರ ಸಾವಿನ ಸರಣಿ ಮುಂದುವರೆದಿದ್ದು ಮಂಗಳವಾರ ಮತ್ತೆ 743 ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 6820ಕ್ಕೆ ಏರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದೇಶದಲ್ಲಿ ಒಟ್ಟು 69176 ಜನರಿಗೆ ಸೋಂಕು ತಗುಲಿದೆ. ಈ ಪೈಕಿ ಇದುವರೆಗೆ 8326 ಜನ ಗುಣಮುಖರಾಗಿದ್ದಾರೆ. ಆಸ್ಪತ್ರೆಗಳಲ್ಲಿ 54030 ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 3393 ಸ್ಥಿತಿ ಗಂಭೀರವಾಗಿ ಮುಂದುವರೆದಿದೆ.

ವಿಶ್ವದ 260 ಕೋಟಿ ಜನ​ರಿಗೆ ಗೃಹ​ ಬಂಧ​ನ

ಪ್ಯಾರಿ​ಸ್‌: ಭಾರ​ತ​ದಲ್ಲೂ ಸಂಪೂರ್ಣ ಲಾಕ್‌​ಡೌನ್‌ ಘೋಷಣೆ ಮಾಡು​ವು​ದ​ರೊಂದಿಗೆ ಇಡೀ ವಿಶ್ವ​ದ ಮೂರನೇ ಒಂದ​ರ​ಷ್ಟುಅಥವಾ 260 ಕೋಟಿ ಜನರು ಈಗ ಗೃಹ ಬಂಧ​ನಕ್ಕೆ ಒಳ​ಗಾಗಿದ್ದಾರೆ. ಕೊರೋನಾ ವೈರಸ್‌ ಹಿನ್ನೆ​ಲೆ​ಯ​ಲ್ಲಿ ಬ್ರಿಟನ್‌, ಫ್ರಾನ್ಸ್‌, ಇಟಲಿ, ಸ್ಪೇನ್‌ ಸೇರಿ​ದಂತೆ 42 ದೇಶ​ಗಳು ಲಾಕ್‌​ಡೌನ್‌ ಘೋಷಣೆ ಮಾಡಿದ್ದು ತಮ್ಮ ಗಡಿ​ಗ​ಳನ್ನು ಬಂದ್‌ ಮಾಡಿವೆ.

ಲಾಕ್‌ಡೌನ್‌ ಘೋಷಿ​ಸಿದ ದೇಶ​ಗಳ ಸಾಲಿಗೆ ಈಗ ಭಾರತ ಮತ್ತು ನ್ಯೂಜಿ​ಲೆಂಡ್‌ ದೇಶ​ಗಳು ಹೊಸ​ದಾಗಿ ಸೇರ್ಪಡೆ ಆಗಿವೆ. ಈ ದೇಶ​ಗ​ಳಲ್ಲಿ ಅಗತ್ಯ ಸೇವೆ​ಗ​ಳನ್ನು ಹೊರ​ತು​ಪ​ಡಿಸಿ ಉಳಿದ ಎಲ್ಲಾ ಸೇವೆ​ಗ​ಳನ್ನು ಸ್ಥಗಿ​ತ​ಗೊ​ಳಿ​ಸ​ಲಾ​ಗಿದೆ. 18.9 ಕೋಟಿ ಜನರು ಇರುವ 15 ದೇಶ​ಗ​ಳಲ್ಲಿ ಕಫä್ರ್ಯ ಘೋಷಣೆ ಮಾಡ​ಲಾ​ಗಿದೆ.