Asianet Suvarna News Asianet Suvarna News

ಬೇಕಂತಲೇ ಸೋಂಕು ತಗುಲಿಸಿಕೊಂಡ ಬರ್ಲಿನ್‌ ಮೇಯರ್‌!

ಇಮ್ಯುನಿಟಿ ಬೆಳೆಸಿಕೊಳ್ಳಲು ಪತ್ನಿಯಿಂದ ಉದ್ದೇಶಪೂರ್ವಕ ಸೋಂಕು| ಬೇಕಂತಲೇ ಸೋಂಕು ತಗಲಿಸಿಕೊಂಡ ಬರ್ಲಿನ್‌ ಮೇಯರ್‌ ಪರದಾಟ

German Mayor Infected Himself With Coronavirus On Purpose
Author
Bangalore, First Published Apr 4, 2020, 5:36 PM IST

ಬರ್ಲಿನ್‌(ಏ.04): ಜಗತ್ತಿನಾದ್ಯಂತ ಎಲ್ಲರೂ ಕೊರೋನಾ ವೈರಸ್‌ ಸೋಂಕು ತಗಲದಂತೆ ಎಚ್ಚರ ವಹಿಸುತ್ತಿದ್ದರೆ ಜರ್ಮನಿಯ ಬರ್ಲಿನ್‌ ಜಿಲ್ಲೆಯ ಮೇಯರ್‌ ಸ್ಟೀಫನ್‌ ವನ್‌ ಡ್ಯಾಸೆಲ್‌ ಬೇಕಂತಲೇ ಈ ಸೋಂಕು ತಗಲಿಸಿಕೊಂಡಿದ್ದಾರೆ. ಕೊರೋನಾ ಸೋಂಕಿನಿಂದಾಗಿ ಮನೆಯಲ್ಲೇ ಕ್ವಾರಂಟೈನ್‌ನಲ್ಲಿದ್ದ ಪತ್ನಿಯಿಂದ ಇವರು ಸೋಂಕು ತಗಲಿಸಿಕೊಂಡಿದ್ದು, ಈಗ ತಮ್ಮ ತಪ್ಪಿಗೆ ಪಶ್ಚಾತ್ತಾಪ ಪಡುತ್ತಿದ್ದಾರೆ.

ಇಷ್ಟಕ್ಕೂ 53 ವರ್ಷದ ಸ್ಟೀಫನ್‌ ಈ ಸೋಂಕು ತಗಲಿಸಿಕೊಂಡಿದ್ದು ಕೊರೋನಾ ವೈರಸ್‌ನಿಂದ ಇಮ್ಯುನಿಟಿ ಪಡೆದುಕೊಳ್ಳುವುದಕ್ಕೋಸ್ಕರ. ಯಾವುದೇ ವೈರಾಣು ಒಂದು ಸೀಮಿತ ಪ್ರದೇಶದಲ್ಲಿ ಹೆಚ್ಚಿನ ಜನರಿಗೆ ಸೋಂಕು ತಗಲಿಸಿದರೆ ತನ್ನಿಂತಾನೇ ಮನುಷ್ಯನಲ್ಲಿ ಆ ವೈರಸ್‌ ವಿರುದ್ಧ ರೋಗನಿರೋಧಕ ಶಕ್ತಿ ರೂಪುಗೊಂಡು ವೈರಾಣು ತನ್ನ ರೋಗ ಹರಡುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂಬ ಸಿದ್ಧಾಂತ ವೈದ್ಯಕೀಯ ವಲಯದಲ್ಲಿದೆ. ಹೀಗಾಗಿ ಪತ್ನಿಯಿಂದ ಬೇಕಂತಲೇ ಸೋಂಕು ತಗಲಿಸಿಕೊಂಡು, ಇಮ್ಯುನಿಟಿ ಬೆಳೆಸಿಕೊಂಡು, ಮುಂದೆ ಆ ಸೋಂಕು ತನಗೆ ಬರುವುದನ್ನೂ, ತಾನು ಆ ಸೋಂಕನ್ನು ಬೇರೆಯವರಿಗೆ ಹರಡುವುದನ್ನೂ ತಪ್ಪಿಸಬೇಕೆಂದು ಸ್ಟೀಫನ್‌ ಈ ಕೆಲಸ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.

ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೋನಾ ಪಾಸಿಟಿವ್ ಮಹಿಳೆ!

ಎರಡು-ಮೂರು ದಿನ ಜ್ವರ ಬಾಧಿಸಿ ಬಿಟ್ಟುಹೋಗುತ್ತದೆ ಎಂದುಕೊಂಡಿದ್ದೆ. ಆದರೆ, ನಾನು ಅಂದುಕೊಂಡಿದ್ದಕ್ಕಿಂತ ಇದು ಹೆಚ್ಚು ಕಷ್ಟಕೊಡುತ್ತಿದೆ. ಪೂರ್ಣ ಗುಣವಾಗುವವರೆಗೂ ಕ್ವಾರಂಟೈನ್‌ನಲ್ಲಿರುತ್ತೇನೆ ಎಂದು ಸ್ಟೀಫನ್‌ ತಿಳಿಸಿದ್ದಾರೆ.

Follow Us:
Download App:
  • android
  • ios