Asianet Suvarna News Asianet Suvarna News

ಬ್ಯಾಡ್ ಮಾರ್ನಿಂಗ್; ಪ್ರಖ್ಯಾತ ಟಿವಿ ಆಂಕರ್‌ಗೆ ಕೊರೋನಾ ಪಾಸಿಟಿವ್

ಪ್ರಖ್ಯಾತ ಟಿವಿ ನಿರೂಪಕನಿಗೆ ಕೊರೋನಾ/ ಸೋಂಕು ತಾಗಿದ್ದರ ಬಗ್ಗೆ ಸ್ವತಃ ಟ್ವೀಟ್ ಮಾಡಿದ ನಿರೂಪಕ/ ಸಿಎನ್ಎನ್ ಪ್ರೈಮ್ ಟೈಮ್ ನ್ಯೂಸ್ ಆ್ಯಂಕರ್ ಕ್ರಿಸ್ ಕ್ಯೋಮೊಗೆ  ಇದೀಗ ಕೊರೋನಾ ಪಾಸಿಟಿವ್. 

Coronavirus Prominent US TV News Anchor Chris Cuomo Tests Positive
Author
Bengaluru, First Published Apr 2, 2020, 10:19 PM IST

ನೂಯಾರ್ಕ್(ಏ. 02)  ಇಟಲಿ ಮತ್ತು ಅಮೆರಿಕದಲ್ಲಿ ಕೊರೋನಾ ಎಲ್ಲರ ನಿಯಂತ್ರಣ ಮೀರಿ  ಆವರಿಸುತ್ತಲೇ ಇದೆ. ಗುಡ್ ಮಾರ್ನಿಂಗ್ ಅಮೆರಿಕ ಎಂದು ಇಡೀ ಪ್ರಪಂಚದ ಮುಂದೆ ಹಾಜರಾಗುತ್ತಿದ್ದ ಜನಪ್ರಿಯ ಸುದ್ದಿ ವಾಹಿನಿ ಸಿಎನ್ಎನ್ ಪ್ರೈಮ್ ಟೈಮ್ ನ್ಯೂಸ್ ಆ್ಯಂಕರ್ ಕ್ರಿಸ್ ಕ್ಯೋಮೊಗೆ  ಇದೀಗ ಕೊರೋನಾ ಪಾಸಿಟಿವ್. ತಮಗೆ ಕೊರೋನಾ ಸೋಂಕು ತಗುಲಿರುವುದನ್ನು  ಅವರೇ ಬಹಿರಂಗ ಮಾಡಿದ್ದಾರೆ.

ನ್ಯೂಯಾರ್ಕ್ ಗವರ್ನರ್ ಆಂಡ್ರೂ ಕ್ಯೂಮೊ  ಅವರ ಸಹೋದರ. ಮಂಗಳವಾರದ ಕರಾತ್ರಿಯ  ಕಾರ್ಯಕ್ರಮದಲ್ಲಿ ಕ್ರಿಸ್ ಕ್ಯೂಮೊ ಪಾಲ್ಗೊಳ್ಳಬೇಕಾಗಿತ್ತು. ಆದರೆ ಅಷ್ಟರಲ್ಲಾಗಲೆ ಈ ಸುದ್ದಿ ಬಹಿರಂಗವಾಗಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಅವರು ಕೊರೊನಾ ರೋಗಿಗಳ ಜೊತೆಗೆ ವಿಶೇಷ ಕಾರ್ಯಕ್ರಮ ನಡೆಸಿದ್ದರು. ಇದೇ ಅವರನ್ನು ಸೋಂಕಿನ ಬಲೆಗೆ ಸಿಲುಕಿಸಿತೋ ಎಂಬ ಪ್ರಶ್ನೆಗೂ ಇದೀಗ ಉದ್ಭವವಾಗಿದೆ.

ಇದ್ದಕ್ಕಿದ್ದಂತೆ ಬಿಎಸ್ ವೈ ಜತೆ ಮೋದಿ ಮೀಟಿಂಗ್

ಪ್ರಪಂಚವೇ ಕಷ್ಟದಲ್ಲಿರುವಾಗ ನನ್ನ ಪರಿಸ್ಥಿತಿಯೂ ಶೋಚನೀಯವಾಗಿದೆ.  ಆ ಮಹಾಮಾರಿಯನ್ನು ಗೆದ್ದವರನ್ನೂ ನಿಮ್ಮ ಮುಂದೆ ತಂದಿದ್ದೆ. ಆ ಬಳಿಕ ನನಗೆ ಜ್ವರ ಶುರುವಾಯಿತು. ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಎಂದು ಗೊತ್ತಾಗಿದೆ. ಇದನ್ನು ನನ್ನ ಮಕ್ಕಳು, ಪತ್ನಿ ಕ್ರಿಸ್ಟಿನಾಗೆ ಸೋಂಕು ಹರಡಲು ಬಿಡಲ್ಲ. ಏನು ಮಾಡಲು ಸಾಧ್ಯವಾಗದ ಸ್ಥಿತಿ ತಂದುಕೊಂಡಿದ್ದೇನೆ ಎಂದು ನೋವು ತೋಡಿಕೊಂಡಿದ್ದಾರೆ.

ಅಮೆರಿಕ ಮತ್ತು ಇಟಲಿಯ ಇಂದಿನ ಪರಿಸ್ಥಿತಿಯನ್ನು ಊಹಿಸಲು ಅಸಾಧ್ಯ. ಪ್ರಪಂಚದಲ್ಲಿಯೇ ಮುಂದುವರಿದ ರಾಷ್ಟ್ರಗಳು ಎಂದು ಕರೆಸಿಕೊಂಡಿದ್ದವು ಸಂಕಷ್ಟಕ್ಕೆ ಸಿಲುಕಿಹೋಗಿವೆ. ನ್ಯೂಯಾರ್ಕ್, ನ್ಯೂಜೆರ್ಸಿ ನಗರಗಳಲ್ಲಿ ಏನಾಗುತ್ತಿದೆ ಎಂಬುದು ಆಡಳಿತಕ್ಕೂ ಗೊತ್ತಾಗುತ್ತಿಲ್ಲ.

ಅಮೆರಿಕದಲ್ಲಿ 1,76,518 ಪಾಸಿಟಿಕ್ ಪ್ರಕರಣಗಳು ದಾಖಲಾಗಿವೆ. 3431 ಜನರು ಮಾರಿಗೆ ಬಲಿಯಾಗಿದ್ದಾರೆ.  ಇಷ್ಟಾದರೂ ಕೊರೋನಾ ಮಾರಿ ಮಾತ್ರ ನಿಯಂತ್ರಣಕ್ಕೆ ಬರುವ ಯಾವ ಲಕ್ಷಣ ಕಾಣುತ್ತಿಲ್ಲ

Coronavirus Prominent US TV News Anchor Chris Cuomo Tests Positive

 


 

Follow Us:
Download App:
  • android
  • ios