ಬೆಲ್ಜಿಯಂ(ಏ.02): 90 ವರ್ಷದ ವೃದ್ಧೆಯೊಬ್ಬರು ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ. ವರದಿಯನ್ವಯ ಈ ವೃದ್ಧೆ ಸಾಯುವುದಕ್ಕೂ ಮುನ್ನ 'ನಾನು ಒಳ್ಳೆ ಜೀವನ ಸಾಗಿಸಿದ್ದೇನೆ. ಈಗ ಈ ವೆಂಟಿಲೇಟರ್‌ಗಳನ್ನು ಯುವ ಪೀಡಿತರಿಗಾಗಿ ಇಟ್ಟುಕೊಳ್ಳಿ' ಎಂದಿದ್ದಾರೆ. 

ಕೊರೋನಾ ವೈರಸ್‌ನಿಂದ ಬಳಲುತ್ತಿದ್ದ 90 ವರ್ಷದ ಸುಜಾನ್ ಹೋಯಯ್ಲರ್ಟ್ಸ್‌ಗೆ ಉಸಿರಾಟದ ಸಮಸ್ಯೆ ಇತ್ತು. ಹೀಗಾಗಿ ಅವರನ್ನು ಬೆಲ್ಜಿಯಂನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೆಂಟಿಲೇಟರ್ ಹಾಕಿಸಿಕೊಳ್ಳಲು ಈ ವೃದ್ಧೆ ನಿರಾಕರಿಸಿದ್ದರಿಂದ ಎರಡು ದಿನಗಳ ಬಳಿಕ ಅವರು ಮೃತಪಟ್ಟಿದ್ದಾರೆ. 

ಕೊರೋನಾ ಸಮರಕ್ಕೆ ಪ್ರೇಮ್‌ಜಿ ಕಂಪನಿಗಳಿಂದ 1,125 ಕೋಟಿ ಮೀಸಲು!

ವಿಶ್ವದಾದ್ಯಂತ ಲಕ್ಷಾಂತರ ಮಂದಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದು, ವೈದ್ಯಕೀಯ ಸೌಲಭ್ಯದ ಕೊರತೆ ಎದುರಾಗಿದೆ. ಹೀಗಿರುವಾಗ ವೆಂಟಿಲೇಟರ್‌ ಕೊರತೆ ಕೂಡಾ ಕಂಡು ಬಂದಿದೆ. ಹೀಗುರುವಾಗ ಮುಂದೆ ಬದುಕಿ ಬಾಳಬೇಕಾದ ಯುವ ಜನರಿಗಾಗಿ ಇದನ್ನು ಇಟ್ಟಿರಿ ಎಂದು ವೃದ್ಧೆ ಹೇಳಿದ್ದು, ಹಹಲಲವರ ಮನ ಗೆದ್ದಿದೆ. 

ಲೂಬೆಕ್‌ನ ನಿವಾಸಿ ಸುಜಾನ್ ಹಸಿವಿಲ್ಲದ ಹಾಗೂ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ ಅವರನ್ನು ಮಾರ್ಚ್ 20 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದಾಗ ಅವರು ಕೊರೋನಾ ವೈರಸ್‌ನಿಂದ ಬಳಲುತ್ತಿರುವುದು ಪತ್ತೆಯಾಗಿದೆ ಹೀಗಾಗಿ ಅವರನ್ನು ಐಸೋಲೇಷನ್‌ನಲ್ಲಿ ಇರಿಸಲಾಗಿದೆ. ಆದರೆ ದಿನಗಳೆದಂತೆ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ. 

ಇನ್ನು ಸುಜಾನ್‌ ಮಗಳು ಜೂಡಿತ್ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದು, ನನಗೆ ಅವರ ಅಂತ್ಯ ಕ್ರಿಯೆಯಲ್ಲೂ ಭಾಗಿಯಾಗಲು ಸಾಧ್ಯವಾಗಲಿಲ್ಲ. ಅವಕಾಶವೂ ನೀಡಲಿಲ್ಲ. ಆದರೆ ತಾಯೊಗೆ ಈ ಸೋಂಕು ಹೇಗೆ ತಗುಲಿತು ಎಂಬುವುದೇ ಅರ್ಥವಾಗುತ್ತಿಲ್ಲ. ಯಾಕೆಂದರೆ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದಿದ್ದಾರೆ. 

ಕ್ವಾರಂಟೈನ್‌ ತಪ್ಪಿಸಿಕೊಂಡು ಬಂದ ವ್ಯಕ್ತಿಗೆ ಜ್ವರ, ಆಸ್ಪತ್ರೆಗೆ ದಾಖಲು

ಅದೇನಿದ್ದರೂ ಈ ಹಿರಿ ಜೀವ, ಯುವಜನರಿಗಾಗಿ ಮಾಡಿದ ತ್ಯಾಗಕ್ಕೊಂದು ಸಲಾಂ.